Advertisement

America: ಕಮಲಾ ಹ್ಯಾರಿಸ್‌ಗೆ ಮತಿಭ್ರಮಣೆ: ಮಾಜಿ ಅಧ್ಯಕ್ಷ ಟ್ರಂಪ್‌

12:42 AM Aug 14, 2024 | Team Udayavani |

ನ್ಯೂಯಾರ್ಕ್‌: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ಗೆ ಸ್ವಲ್ಪವೂ ಬುದ್ಧಿವಂತಿಕೆ (ಐಕ್ಯೂ) ಇಲ್ಲ, ಕಮಲಾ ಹ್ಯಾರಿಸ್‌ ಎಡ ಪಂಥೀಯ ತೀವ್ರಗಾಮಿತ್ವವನ್ನು ಹೊಂದಿದ್ದು, ಅವರಿಗೆ ಮತಿಭ್ರಮಣೆಯಾಗಿದೆ ಎಂದು ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

Advertisement

ಸ್ಪೇಸ್‌ ಎಕ್ಸ್‌ ಸಂಸ್ಥಾಪಕ ಎಲಾನ್‌ ಮಸ್ಕ್ ಜತೆ ನಡೆಸಿದ ಸಂವಾದದಲ್ಲಿ ಅವರು, ಸರಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಲ್ಲದೇ, ವೈಯಕ್ತಿಕ ವಾಗಿ ಡೆಮಾಕ್ರಟಿಕ್‌ ನಾಯಕರ ವಿರುದ್ಧ ವಾಗ್ಧಾಳಿ ನಡೆಸಿದರು.

ಅಧ್ಯಕ್ಷ ಬೈಡೆನ್‌ರನ್ನು ಹಲವು ಬಾರಿ ಸಂವಾದಗಳಲ್ಲಿ ಸೋಲಿಸಿದ್ದೇನೆ. ನಾನು ಚರ್ಚೆ ವೇಳೆ ಅವರ ಮೇಲೆ ನಡೆ ಸಿದ ದಾಳಿಗೆ ಹೆದರಿ ಅವರು ರೇಸ್‌ ನಿಂದಲೇ ಓಡಿ ಹೋದರು. ಈಗ ಬೈಡೆನ್‌ ಜಾಗವನ್ನು ಕಮಲಾ ತುಂಬುತ್ತಿದ್ದಾರೆ, ಆದರೆ ಅವರು ಈವರೆಗೂ ಒಂದೇ ಒಂದು ಸಂದರ್ಶನ ನೀಡಿಲ್ಲ. ಅವರಿಗೆ ಎಡಪಂಥೀಯ ವಿಚಾರಗಳಿಂದ ಮತಿಭ್ರಮಣೆಯಾಗಿದೆ ಎಂದರು.

20 ಕೋಟಿ ಕೇಳುಗರು: ಟ್ವಿಟರ್‌ನ “ಸ್ಪೇಸ್‌’ನಲ್ಲಿ ನಡೆದ ಈ ಸಂವಾದವನ್ನು ಸುಮಾರು 20 ಕೋಟಿ ಮಂದಿ ಆಲಿಸಿ ದ್ದಾರೆ. ತಾಂತ್ರಿಕ ದೋಷದಿಂದ ಸಂವಾದ 40 ನಿಮಿಷ ತಡವಾಗಿ ಆರಂಭವಾದರೂ ಕೇಳುಗರ ಸಂಖ್ಯೆ ತೀವ್ರ ಕುಸಿತ ಕಂಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next