Advertisement
ವಿಶ್ವದ ದೊಡ್ಡಣ್ಣ ಅಮೆರಿಕಾದ ಮೂಲ ವಾಸಿಗಳು ಕೂಡ ತಾಲಿಬಾನ್ ಉಗ್ರರ ಉಪಟಳವನ್ನು ಎದುರಿಸುತ್ತಿದ್ದು, ಹಲವಾರು ಮಂದಿ ಅಮೆರಿಕನ್ನರು ಈಗಾಗಲೇ ಅಮೆರಿಕಾ ಸರ್ಕಾರಕ್ಕೆ ರಕ್ಷಣೆ ಕೋರಿದ್ದಾರೆ. ಈ ಬೆನ್ನಿಗೆ ನಿನ್ನೆ(ಸೊಮವಾರ, ಆಗಸ್ಟ್ 23) ಸ್ವತಃ ಅಮೆರಿಕಾ ಅಧ್ಯಕ್ಷ ಜೋ ಬೈಡನ್, ಅಫ್ಗಾನಿಸ್ತಾನದಲ್ಲಿರುವ ಮೂಲ ಅಮೆರಿಕನ್ನರನ್ನು ಕರೆಸಿಕೊಳಳ್ಳುವ ಕಾರ್ಯವನ್ನು ಚುರುಕುಗೊಳಿಸುತ್ತೇವೆ ಎಂದಿದ್ದರು.
Related Articles
Advertisement
ಅಫ್ಗಾನಿಸ್ತಾನದಲ್ಲಿ ನಡೆಯುತ್ತಿರುವ ತಾಲಿಬಾನ್ ಉಗ್ರರ ಹಿಂಸಾಚಾರದ ಬಗ್ಗೆ ಮಾಹಿತಿ ಇದೆ. ಈ ನಡುವೆಯೂ ಸಂಕಷ್ಟದಲ್ಲಿರುವವರನ್ನು ಸ್ಥಳಾಂತರ ಮಾಡಲು ನಾವು ಕ್ರಮ ಕೈಗೊಂಡಿದ್ದೇವೆ.
ಇನ್ನು, ಅಮೆರಿಕಾ ಅಫ್ಗಾನಿಸ್ತಾನದಲ್ಲಿ ಸುಮಾರು 20 ವರ್ಷಗಳು ಯುದ್ಧ ನಡೆಸಿದೆ. ನಮ್ಮ ಹಾಗೂ ಮಿತ್ರ ರಾಷ್ಟ್ರಗಳ ಸೇನೆಯ ಅನೇಕ ಸದಸ್ಯರು ಈ ಯುದ್ಧದ ಕಾರಣದಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅವರು ನೆನಪಿಸಿಕೊಂಡಿದ್ದಾರೆ.
ನಿನ್ನೆ ‘ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್ ನಿಂದ ಅಮೆರಿಕದ ಮತ್ತು ಇತರ ಸಾವಿರಾರು ಜನರನ್ನು ಸ್ಥಳಾಂತರಗೊಳಿಸುವ ಪ್ರಕ್ರಿಯೆಯು ಅತ್ಯಂತ ಕಠಿಣ ಹಾಗೂ ದುಃಖದಾಯಕವಾಗಿದೆ. ಈ ಪ್ರಕ್ರಿಯೆಯನ್ನು ಇನ್ನಷ್ಟು ವೇಗಗೊಳಿಸುತ್ತಿದ್ದೇವೆಂದು ಬೈಡೆನ್ ಹೇಳಿದ್ದರು.
ಇದನ್ನೂ ಓದಿ : ಎಲ್ಐಸಿ ‘ವಿಶೇಷ ನವೀಕರಣ ಅಭಿಯಾನ’ದ ಬಗ್ಗೆ ನಿಮಗೆ ತಿಳಿದಿದೆಯೆ..? ಇಲ್ಲಿದೆ ಮಾಹಿತಿ