Advertisement
ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರು ದೊಡ್ಡ ಮಟ್ಟದ ಹಿಂಸಾಚಾರ ಹಾಗೂ ಪ್ರತಿಭಟನೆ ನಡೆಸಲು ಸಂಚು ರೂಪಿಸಿದ್ದಾರೆ. ಟ್ರಂಪ್ ಪರವಾದ ಆನ್‌ಲೈನ್ ನೆಟ್‌ವರ್ಕ್‌ಗಳಲ್ಲಿ ಅಮೆರಿಕದ ಎಲ್ಲ 50 ಪ್ರಾಂತ್ಯಗಳು ಹಾಗೂ ವಾಷಿಂಗ್ಟನ್ ಡಿಸಿಯಲ್ಲಿ ಸಶಸ್ತ್ರ ಹೋರಾಟ ಸಹಿತ ಬೇರೆ ಬೇರೆ ದಿನಾಂಕಗಳಂದು ಪ್ರತಿಭಟನೆ ಹಮ್ಮಿಕೊಳ್ಳುವ ಕುರಿತು ಚರ್ಚೆ ನಡೆದಿದೆ ಎಂದು ಎಫ್ಬಿಐ ಹೇಳಿದೆ.
Related Articles
Advertisement
ಕ್ಯೂಬಾದ ಮೇಲೆ ಅಮೆರಿಕ ನಿರ್ಬಂಧ :
ಟ್ರಂಪ್ ಆಡಳಿತವು ಕಮ್ಯುನಿಸ್ಟ್ ರಾಷ್ಟ್ರ ಕ್ಯೂಬಾವನ್ನು “ಉಗ್ರವಾದ ಪ್ರಾಯೋಜಕತ್ವ ರಾಷ್ಟ್ರ’ ಎಂದು ಘೋಷಿಸಿದೆ. ಬೈಡೆನ್ ಅವರು ಅಧ್ಯಕ್ಷರಾಗಲು ಇನ್ನೇನು ಕೆಲವೇ ದಿನಗಳು ಉಳಿದಿರುವಂತೆಯೇ ಟ್ರಂಪ್ ಆಡಳಿತ ಈ ನಿರ್ಣಯಕ್ಕೆ ಬಂದಿರುವುದು ಡೆಮಾಕ್ರಾಟ್‌ಗಳ ಕಳವಳ ಹೆಚ್ಚುವಂತೆ ಮಾಡಿದೆ. ದಶಕಗಳಿಂದಲೂ ಕ್ಯೂಬಾ ಮತ್ತು ಅಮೆರಿಕದ ನಡುವೆ ಹಗ್ಗಜಗ್ಗಾಟ ಇದೆಯಾದರೂ ಒಬಾಮಾ ಅವಧಿಯಲ್ಲಿ ಎರಡೂ ರಾಷ್ಟ್ರಗಳ ನಡುವಿನ ಸಂಬಂಧ ಸುಧಾರಣೆಯಾಗಿತ್ತು. ಒಬಾಮಾ ಕ್ಯೂಬಾದ ಮೇಲಿದ್ದ ಉಗ್ರಪ್ರಾಯೋಜಕ ರಾಷ್ಟ್ರವೆಂಬ ಅಭಿದಾನ ಹಾಗೂ ಅದರ ಮೇಲಿದ್ದ ಹಲವು ನಿರ್ಬಂಧಗಳನ್ನು ತೆಗೆದುಹಾಕಿದ್ದರು. ಈಗ ಟ್ರಂಪ್ ಹೊರಹೋಗುವ ಮುನ್ನ, “”ಕ್ಯೂಬಾ ಅಂತಾರಾಷ್ಟ್ರೀಯ ಉಗ್ರಸಂಘಟನೆಗಳಿಗೆ ಸಹಕಾರ ನೀಡುತ್ತಿದೆ” ಎಂದು ಆರೋಪಿಸಿ, ನಿರ್ಬಂಧಗಳನ್ನು ಮತ್ತೆ ಜಾರಿ ಮಾಡಲು ಮುಂದಾಗಿದ್ದಾರೆ.