ವಾಷಿಂಗ್ಟನ್: ಅಮೆರಿಕಾದಲ್ಲಿ ಕೋವಿಡ್ ಹಾವಳಿ ಮುಂದುವರೆದಿದ್ದು ಕಳೆದ 24 ಗಂಟೆಗಳಲ್ಲಿ 2,502 ಜನರು ಪ್ರಾಣ ತ್ಯೆಜಿಸಿದ್ದಾರೆ. ಈವರೆಗೂ (ಏ.30) ಸುಮಾರು 61,669 ಜನರು ಬಲಿಯಾಗಿದ್ದು, 10ಲಕ್ಷಕ್ಕಿಂತ ಹೆಚ್ಚು ಜನರು ಸೋಂಕಿಗೆ ತುತ್ತಾಗಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ಎರಡು ವಾರಗಳಲ್ಲಿ ಸಂಚಾರಿ ಸೇವೆ ಆರಂಭಿಸುವ ಕುರಿತು ಸುಳಿವು ನೀಡಿದ್ದು, ವೈರಸ್ ಕುರಿತು WHO ನಮ್ಮ ಹಾದಿ ತಪ್ಪಿಸಿದೆ ಎಂದು ಮತ್ತೊಮ್ಮೆ ಗುಡುಗಿದ್ದಾರೆ. ಇದೇ ವರ್ಷದ ನವೆಂಬರ್ 3 ರಂದು ಅಧ್ಯಕ್ಷೀಯ ಚುನಾವಣೆ ನಿಗಿದಿಯಾಗಿರುವ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.
ಮತ್ತೊಂದೆಡೆ ಕೋವಿಡ್ ಹೊಡೆತಕ್ಕೆ ಅಫಘಾನಿಸ್ಥಾನ ತತ್ತರಿಸಿ ಹೋಗಿದ್ದು ಆರ್ಥಿಕತೆ ಕುಸಿದು ಬಿದ್ದಿದೆ. ಈ ಹಿನ್ನಲೆಯಲ್ಲಿ ಐಎಂಎಫ್ ( ಅಂತರಾಷ್ಟ್ರೀಯ ಹಣಕಾಸು ನಿಧಿ) ತುರ್ತು ನಿರ್ವಹಣೆಗಾಗಿ ಡಾಲರ್ 220 ಎಂಎನ್ ಗಳ ನೆರವು ಘೋಷಿಸಿದೆ.
ಇತ್ತೀಚಿನ ವರದಿಗಳ ಪ್ರಕಾರ ಬ್ರಿಟನ್ ಕೂಡ ಕೋವಿಡ್ 19 ಮಹಾಮಾರಿಗೆ ನಲುಗಿದ್ದು ಈಗಾಗಲೇ 26,097 ಜನರು ಮೃತಪಟ್ಟಿದ್ದಾರೆ.
ಜಗತ್ತಿನಾದ್ಯಂತ ಕೋವಿಡ್ 19 ಸೋಂಕಿಗೆ 32,20,268 ಜನರು ತುತ್ತಾಗಿದ್ದು, ಇದರಲ್ಲಿ 2,28,224 ಜನರು ಮೃತಪಟ್ಟಿದ್ದಾರೆ. ಗುಣಮುಖರಾಗುವವರ ಪ್ರಮಾಣದಲ್ಲಿ ಏರಿಕೆಯಾಗಿದ್ದು 10ಲಕ್ಷಕ್ಕಿಂತ ಹೆಚ್ಚು ಮಂದಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.