Advertisement

ಅಮೆರಿಕಾದಲ್ಲಿ ಮರಣಮೃದಂಗ: ಒಂದೇ ದಿನ 3,100 ಮಂದಿ ಬಲಿ, ಸಾವಿನ ಸಂಖ್ಯೆ 50 ಸಾವಿರಕ್ಕೆ ಏರಿಕೆ

08:12 AM Apr 25, 2020 | Mithun PG |

ವಾಷಿಂಗ್ಟನ್: ಅಮೆರಿಕಾದಲ್ಲಿ ಕೋವಿಡ್ -19 ಮರಣ ಮೃದಂಗ ಮುಂದುವರಿದಿದ್ದು ಗುರುವಾರ ಒಂದೇ ದಿನ 3,100 ಮಂದಿ ಮೃತಪಟ್ಟಿದ್ದಾರೆಂದು ಇಂಡಿಯಾ ಟುಡೇ ವರದಿ ಮಾಡಿದೆ.

Advertisement

ಅಮೆರಿಕಾದಲ್ಲಿ ಒಟ್ಟಾರೆಯಾಗಿ ಈ ಮಹಾಮಾರಿಗೆ 49, 845 ಜನರು ಪ್ರಾಣ ತ್ಯೆಜಿಸಿದ್ದು 50 ಸಾವಿರದ ಗಡಿ ತಲುಪಿದೆ. ಸೋಂಕಿತರ ಪ್ರಮಾಣದಲ್ಲೂ ಏರಿಕೆಯಾಗಿದ್ದು ಈಗಾಗಲೇ 8,80,204 ಜನರು ವೈರಾಣುವಿನಿಂದ ಬಳಲುತ್ತಿದ್ದಾರೆ. ಆದರೇ ಈ ದೇಶದಲ್ಲಿ ಗುಣಮುಖರಾಗುವರ ಸಂಖ್ಯೆ ಕಡಿಮೆಯಿದ್ದು ಕೇವಲ 85 ಸಾವಿರ ಜನರು ಸೋಂಕಿನಿಂದ ಮುಕ್ತರಾಗಿದ್ದಾರೆಂದು ವರದಿ ತಿಳಿಸಿದೆ.

ಮತ್ತೊಂದೆಡೆ ಇಟಲಿಯನ್ನು ಮೀರಿಸಿ ಸ್ಪೇನ್ ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು 2 ಲಕ್ಷಕ್ಕಿಂತ ಹೆಚ್ಚು ಮಂದಿ ಬಳಲುತ್ತಿದ್ದಾರೆ. ಇಲ್ಲಿ ಸಾವಿನ ಪ್ರಮಾಣ 22, 157 ಎಂದು ವರದಿಯಾಗಿದೆ.  ಇಟಲಿಯಲ್ಲೂ ಸಾವಿನ ಸಂಖ್ಯೆ 25 ಸಾವಿರ ಗಡಿ ದಾಟಿದ್ದು, ಸೋಂಕಿತರ ಪ್ರಮಾಣ 1,87,973ಕ್ಕೆ ತಲುಪಿದೆ ಎಂದು ಮಾಧ್ಯಮ ಸಂಸ್ಥೆ ತಿಳಿಸಿದೆ.

ಫ್ರಾನ್ಸ್, ಜರ್ಮನಿ, ಇಂಗ್ಲೇಂಡ್ ನಲ್ಲೂ ಈ ವೈರಸ್ ಅಟ್ಟಾಹಾಸ ಮೆರೆಯುತ್ತಿದ್ದು, ಜಗತ್ತಿನಾದ್ಯಂತ 27 ಲಕ್ಷಕ್ಕಿಂತ ಹೆಚ್ಚು ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಮಾತ್ರವಲ್ಲದೆ  1.90 ಲಕ್ಷಕ್ಕಿಂತಲೂ ಹೆಚ್ಚು ಮಂದಿ ಮಾರಕ ವೈರಸ್ ನಿಂದಾಗಿ  ಕೊನೆಯುಸಿರೆಳೆದಿದ್ದಾರೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next