Advertisement

America: ರಹಸ್ಯ ದಾಖಲೆಗಳೆಲ್ಲ ಡೊನಾಲ್ಡ್‌ ಟ್ರಂಪ್‌ ಮನೆಯಲ್ಲಿ!

11:00 PM Jun 10, 2023 | Team Udayavani |

ವಾಷಿಂಗ್ಟನ್‌ ಡಿಸಿ: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ದೇಶದ ಮಹತ್ವದ ಭದ್ರತಾ, ಸೇನಾ ದಾಖಲೆಗಳನ್ನು ಅತ್ಯಂತ ಅಸುರಕ್ಷಿತ ಜಾಗದಲ್ಲಿರಿಸಿದ ಆರೋಪವೂ ಸೇರಿ ಒಟ್ಟು 37 ಆರೋಪಗಳನ್ನು ಅಮೆರಿಕ ಸರಕಾರ ಹೊರಿಸಿದೆ. ಇವೆಲ್ಲ ಅತ್ಯಂತ ಗಂಭೀರ ಸ್ವರೂಪದ್ದಾಗಿದ್ದು ಸಾಬೀತಾದರೆ ಟ್ರಂಪ್‌ ಜೈಲು ಪಾಲಾಗಲೇಬೇಕಾಗುತ್ತದೆ.

Advertisement

ಟ್ರಂಪ್‌ ಅವರು ರಹಸ್ಯ ದಾಖಲೆಗಳನ್ನು ಫ್ಲೋರಿಡಾದಲ್ಲಿರುವ ತಮ್ಮ ಮಾರ್‌ ಎ ಲಾಗೊ ಎಸ್ಟೇಟ್‌ನಲ್ಲಿರಿಸಿಕೊಂಡಿದ್ದರು. ಸ್ನಾನದ ಮನೆ, ಶೌಚಾಲಯ, ಶವರ್‌, ನರ್ತನ ಕೊಠಡಿ, ಮಲಗುವ ಮನೆ ಸಹಿತ ಎಲ್ಲೆಂದರಲ್ಲಿ ಇಟ್ಟುಕೊಂಡಿದ್ದರು. ಒಟ್ಟಾರೆ 80 ದೊಡ್ಡದೊಡ್ಡ ಬಾಕ್ಸ್‌ಗಳು ಅವರ ಮನೆಯ ಅಲ್ಲಲ್ಲಿ ಹರಡಿಕೊಂಡಿತ್ತು. ಈ ಸಂಬಂಧ 6 ಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ.

ಅಮೆರಿಕ ಸರಕಾರದ ಆರೋಪದ ಪ್ರಕಾರ, ಅಣ್ವಸ್ತ್ರ ಯೋಜನೆಗಳು, ಅಮೆರಿಕ ಮತ್ತು ಸ್ನೇಹಿತ ರಾಷ್ಟ್ರಗಳ ದೌರ್ಬಲ್ಯಗಳು, ಅಮೆರಿಕದ ಪ್ರತೀಕಾರಾತ್ಮಕ ಸೇನಾ ದಾಳಿಗಳ ಯೋಜನೆಗಳ ಮಾಹಿತಿಗಳೆಲ್ಲವೂ ಈ ದಾಖಲೆಗಳಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next