Advertisement
ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಗೊಳಿಸಲು ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಪಂ. ರಾಜ್ ಕಾಯ್ದೆಗೆ ತಿದ್ದುಪಡಿ ತಂದಿತ್ತು. ಈಗಿನ ಬಿಜೆಪಿ ಸರಕಾರ ಇದರಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಅಂಶಗಳಿಗೆ ತಿದ್ದುಪಡಿ ತರಲು ಪ್ರಯತ್ನ ನಡೆಸಿದ್ದು, ಇದೇ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ ಮಂಡಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
2017ರ ತಿದ್ದುಪಡಿ ಪ್ರಕಾರ ಗ್ರಾಮ್ ಸ್ವರಾಜ್ ಮತ್ತು ಪಂ. ರಾಜ್ ಕಾಯ್ದೆ 1993ರಲ್ಲಿ ಗ್ರಾಮ ಪಂಚಾಯತ್, ತಾಲೂಕು ಮತ್ತು ಜಿಲ್ಲಾ ಪಂಚಾಯತ್‌ಗಳಿಗೆ ಮೀಸ ಲಾತಿ ಯನ್ನು ಎರಡು ಅವಧಿಗೆ ನಿಗದಿಪಡಿಸಲಾ ಗಿ ತ್ತು. ಆದರೆ ಈಗ ಆಡಳಿತ ಪಕ್ಷದ ಶಾಸಕರ ಒತ್ತಾಯದ ಮೇರೆಗೆ ಎರಡು ಅವಧಿಗೆ ಅಂದರೆ 10 ವರ್ಷಗಳಿಗೆ ಇರುವ ಮೀಸಲು ಪದ್ಧತಿಯನ್ನು ಐದು ವರ್ಷಗಳಿಗೆ ಅಂದರೆ, ಒಂದೇ ಅವಧಿಗೆ ನಿಗದಿಪಡಿಸಿ ತಿದ್ದುಪಡಿ ತರಲು ರಾಜ್ಯ ಸರಕಾರ ಪ್ರಯತ್ನ ನಡೆಸಿದೆ. ಏನೇನು ಬದಲಾವಣೆ?
1.ಗ್ರಾ.ಪಂ.ಗಳಲ್ಲಿ ಅಧ್ಯಕ್ಷ -ಉಪಾಧ್ಯಕ್ಷರ ಅವಧಿ ಐದು ವರ್ಷಕ್ಕೆ ಬದಲಾಗಿ 30 ತಿಂಗಳು ನಿಗದಿ.
2.ಜಿಲ್ಲಾ ಮತ್ತು ತಾ.ಪಂ.ಗಳಲ್ಲಿ ಅಧ್ಯಕ್ಷ- ಉಪಾಧ್ಯಕ್ಷರ ಅವಧಿ 20 ತಿಂಗಳಿಗೆ ನಿಗದಿ.
3.ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಅಧಿಕಾರ ಸ್ವೀಕರಿಸಿ ಕನಿಷ್ಠ 30 ತಿಂಗಳು ಆಗಿರ ಬೇಕು ಎಂಬ ಅಂಶಕ್ಕೆ ಕತ್ತರಿ.
4.ಅಧ್ಯಕ್ಷರು, ಉಪಾಧ್ಯಕ್ಷರ ವಿರುದ್ಧ ಭ್ರಷ್ಟಾ ಚಾರ,ಸ್ವಜನಪಕ್ಷಪಾತ, ಸದಸ್ಯರ ವಿಶ್ವಾಸ ಕಳೆ ದು ಕೊಂಡಿದ್ದರೆ ಯಾವುದೇ ಸಮಯದಲ್ಲಾದರೂ ಅವಿಶ್ವಾಸ ನಿರ್ಣಯಕ್ಕೆ ಅವಕಾಶ.
Related Articles
Advertisement
ಕಾನೂನು ಇಲಾಖೆ ಅಭಿಪ್ರಾಯದ ಅನಂತರ ಜಾರಿ ಈಗಾಗಲೇ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ ಕಾಯ್ದೆಯಲ್ಲಿ ತಿದ್ದುಪಡಿ ಮಾಡುವ ಅಂಶಗಳ ಕುರಿತು ಕರಡು ಸಿದ್ಧಪಡಿಸಿದ್ದು, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅವರಿಗೆ ನೀಡಲಾಗಿದೆ ಎನ್ನಲಾಗಿದೆ. ಕಾನೂನು ಇಲಾಖೆ ಅಭಿಪ್ರಾಯ ಪಡೆದು ಮುಂದಿನ ಸಂಪುಟ ಸಭೆಯಲ್ಲಿ ಅಧಿಕೃತ ನಿರ್ಧಾರ ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ. ಸಂಪುಟದಲ್ಲಿ ಒಪ್ಪಿಗೆ ಪಡೆದು ಇದೇ ಅಧಿವೇಶನದಲ್ಲಿ ತಿದ್ದುಪಡಿ ತರಲು ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆ ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಇದರೊಂದಿಗೆ ತಾಂತ್ರಿಕ ಸಮಸ್ಯೆ ಒಳಗೊಂಡಿರುವ 20ಕ್ಕೂ ಹೆಚ್ಚು ಅಂಶಗಳಿಗೆ ತಿದ್ದುಪಡಿ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ ಎನ್ನಲಾಗಿದೆ. ರಾಜ್ಯ ಸರಕಾರ ಗ್ರಾಮ ಸ್ವರಾಜ್ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ಪಂ.ರಾಜ್ ವ್ಯವಸ್ಥೆಯನ್ನು ಬಲಪಡಿಸುವ ಕೆಲಸ ಮಾಡಬೇಕು. ಅದರ ಬದಲು ದುರ್ಬಲಗೊಳಿಸುವ ಪ್ರಯತ್ನ ಮಾಡಬಾರದು.
-ಸಿ. ನಾರಾಯಣಸ್ವಾಮಿ, ಕರ್ನಾಟಕ ಪಂಚಾಯತ್ ಪರಿಷತ್ ಕಾರ್ಯಾಧ್ಯಕ್ಷ. ತಳಮಟ್ಟದಲ್ಲಿ ನಾಯಕತ್ವ ಬೆಳೆಸುವ ಉದ್ದೇಶದಿಂದ ಎರಡು ಅವಧಿಗೆ ಅಂದರೆ ಹತ್ತು ವರ್ಷಕ್ಕೆ ಮೀಸಲಾತಿಯನ್ನು ನಿಗದಿಪಡಿಸಲಾಗಿದೆ. ಒಂದೇ ಅವಧಿಗೆ ಮೀಸಲಾತಿ ನಿಗದಿಪಡಿಸಿದರೆ ಚುನಾಯಿತ ಪ್ರತಿನಿಧಿಗಳಿಗೆ ಆಯಾ ಪ್ರದೇಶದ ಅಭಿವೃದ್ಧಿ ಆಸಕ್ತಿ ಇಲ್ಲವಾಗಬಹುದು ಅನ್ನುವ ಕಾರಣಕ್ಕೆ ಎರಡು ಅವಧಿಗೆ ಅವಕಾಶ ಕಲ್ಪಿಸಲಾಗಿತ್ತು.
– ಕೆ.ಆರ್. ರಮೇಶ್ ಕುಮಾರ್, ಮಾಜಿ ಸ್ಪೀಕರ್ - ಶಂಕರ ಪಾಗೋಜಿ