Advertisement
ಪ್ರಸ್ತುತ ವಿಧಾನ ಪರಿಷತ್ ಸದಸ್ಯರಾಗಿರುವ ಸುನೀಲಗೌಡ ಪಾಟೀಲ ಅವರ ವಿವಾಹ ಸಮಾರಂಭಕ್ಕೆ ಅಂಬರೀಷ್ ವಿಜಯಪುರಕ್ಕೆ ಬಂದಿದ್ದರು. ವಿವಾಹ ನಡೆದ ಬಿಎಲ್‌ಡಿಇ ಆವರಣದಲ್ಲಿ ಅಂಬರೀಷ್ ನೋಡಲು ಭಾರಿ ನೂಕುನುಗ್ಗಲು ಆಗಿತ್ತು. ವಧು-ವರರನ್ನು ಆಶೀರ್ವದಿಸಿ ವೇದಿಕೆ ಇಳಿದು ಬಿಎಲ್‌ಡಿಇ ಅತಿಥಿ ಗೃಹಕ್ಕೆ ಬರುವವರೆಗೆ ದಾರಿಯುದ್ದಕ್ಕೂ ಸಾವಿರಾರು ಅಭಿಮಾನಿಗಳು ಅಂಬರೀಷ್ ಅವರನ್ನು ಮುತ್ತಿಕೊಂಡಿದ್ದರು.ಆಗ ಎರಡು ದಿನಗಳ ಕಾಲ ವಿಜಯಪುರದಲ್ಲಿಯೇ ಅಂಬರೀಷ್ ವಾಸ್ತವ್ಯ ಮಾಡಿದ್ದರು. ಸುಶೀಲಕುಮಾರ ಶಿಂಧೆ ಹಾಗೂ ಮಾಜಿ ಸಚಿವ ಎಂ.ಬಿ. ಪಾಟೀಲರೊಡನೆ ಅವಿನಾಭಾವ ಒಡನಾಟವನ್ನು ಎಂ.ಬಿ. ಪಾಟೀಲರೊಡನೆ ಅಂಬರೀಷ್ ಹೊಂದಿದ್ದರು.
Related Articles
Advertisement
ಉಪ್ಪಿಟ್ಟಿಗೆ ಮನಸೋತ ರೆಬೆಲ್ ಸ್ಟಾರ್: ಉದ್ಯಮಿ ಅಶೋಕ ಖೇಣಿ 2011ರಲ್ಲಿ ತಮ್ಮ ಜನ್ಮದಿನವನ್ನು ವಿಜಯಪುರದ ಬಿಎಲ್‌ಡಿಇ ಮೈದಾನದಲ್ಲಿ ಅಚರಿಸಿಕೊಂಡಾಗ, ಅಂಬರೀಷ್ ಚಿತ್ರನಟ ಸುದೀಪ ಅವರೊಂದಿಗೆ ಬಂದು ನಮ್ಮ ಎಂ.ಬಿ. ಪಾಟೀಲರ ಮನೆಯಲ್ಲಿಯೇ ತಂಗಿದ್ದರು. ಆಗ ಜಿಪಂ ಅಧ್ಯಕ್ಷರಾಗಿದ್ದ ಬಸವರಾಜ ದೇಸಾಯಿ ಅಂಬರೀಷರೊಡನೆ ಚರ್ಚೆ ಮಾಡುತ್ತ ಜೈನಾಪುರದ ಸಂಸ್ಕೃತಿ ವಿವರಿಸಿ ಜವೆಗೋಧಿ ಉಪ್ಪಿಟ್ಟು ಬಾರಿ ಫೇಮಸ್ಸು ಎಂದಿದ್ದರು.
ಹಾಗಿದ್ದರೇ ಬೆಳಗ್ಗೆ ಜವೆಗೋಧಿ ಉಪ್ಪಿಟ್ಟೇ ಬೇಕು ಎಂದಿದ್ದರು ಅಂಬರೀಷ್. ರಾತ್ರೋರಾತ್ರಿ ಜೈನಾಪುರಕ್ಕೆ ಫೋನ್ ಮಾಡಿ ಜವೆ ಸ್ವತ್ಛಗೊಳಿಸಿ ಗಿರಿಣಿಯವರನ್ನು ಎಬ್ಬಿಸಿ, ಕುಟ್ಟಿ ನಸುಕಿನಲ್ಲಿ ರವಾವನ್ನು ವಿಜಯಪುರಕ್ಕೆ ತೆಗೆದುಕೊಂಡು ಬಂದು ದೇಸಾಯಿ ಉಪ್ಪಿಟ್ಟು ಬಡಿಸಿದ್ದರು. ಉಪ್ಪಿಟ್ಟು ರುಚಿ ಸವಿದ ಅಂಬರೀಷ್ ಪರವಾಗಿಲ್ಲ ಕಣಯ್ಯ, ಉತ್ತರ ಕರ್ನಾಟಕದವರು ಒಳ್ಳೆ ಟೇಸ್ಟಿ ಜನ ಎಂದಿದ್ದರು ಎಂದು ಬಸವರಾಜ ದೇಸಾಯಿ ಅಂದಿನ ದಿನ ನೆನಪಿಸಿಕೊಂಡು ಕಣ್ಣೀರಿಟ್ಟರು.
ಮಾಮಾ ಊರು ಬಂತು 2008ರ ವಿಧಾನಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಸುಶೀಲಕುಮಾರ ಶಿಂಧೆ, ಅಂಬರೀಷ್ ಮತ್ತು ಕುಮಾರ ಬಂಗಾರಪ್ಪನವರು ಜೊತೆಗೂಡಿ ಬಬಲೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ಎಂ.ಬಿ. ಪಾಟೀಲ ಪರ ಪ್ರಚಾರಕ್ಕೆ ಆಗಮಿಸಿದ್ದರು. ಸಂಜೆ ವಿಜಯಪುರದಿಂದ ಹೊರಟು ಮೊದಲು ತಿಕೋಟಾದಲ್ಲಿ ಕಾರ್ಯಕ್ರಮ ಮುಗಿಸಿದೇವು. ನಂತರ ಮಮದಾಪುರ ಕಡೆ ಇನ್ನೊಂದು ಕಾರ್ಯಕ್ರಮಕ್ಕೆ ಹೊರಟೆವು. ಬಬಲೇಶ್ವರ ದಾಟಿದ ನಂತರ ಎಲ್ಲಯ್ಯ ನಿನ್ನ ಊರು ಇನ್ನೂ ಬರ್ತಾನೇ ಇಲ್ಲ. ರಾತ್ರಿಯಾಯಿತು ಸಾಕು ನಡೀರಿ ಎಂದು ಎಂ.ಬಿ. ಪಾಟೀಲರನ್ನು ದಬಾಯಿಸಹತ್ತಿದರು. ನಾನು ಅದು ನೋಡಿ ಲೈಟ್ಸ್ ಕಾಣುತ್ತಿವೆ ಅದೇ ಮಮದಾಪುರ ಎಂದೇ ಆ..ಆ.. ಲೈಟ್ಸ್ ಕಾಣ್ತೆವೆ.. ಕಾಣ್ತೆವೆ… ತಡಾ ಆದರೆ ಇನ್ನೂ ನಿನ್ನ ಲೈಟ್ಸ್ ಹಚಿ¤ನಿ ಎಂದರು. ಕುಮಾರ ಬಂಗಾರಪ್ಪ ಊರು ಬಂತು ಮಾಮಾ… ಊರು ಬಂತು ಮಾಮಾ… ಎಂದು ಸಮಾಧಾನ ಮಾಡುತ್ತಿದ್ದರು ಎಂದು ಎಂ.ಬಿ. ಪಾಟೀಲರ ಆಪ್ತರು ನೆನಪಿಸಿಕೊಳ್ಳುತ್ತಾರೆ.