Advertisement
ರೋಗಿಗಳಿಗೆ ಯಾವುದೇ ತೊಂದರೆ ಉಂಟಾಗ ದಂತೆ ಸೇವೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ವೇತನ ಪಾವತಿ ಮಾಡದಿದ್ದರೆ ಮುಷ್ಕರ ಮಾಡಲಾ ಗುವುದು ಎಂದು ಇಎನ್‌ಟಿ ರಾಜ್ಯ ಜಂಟಿ ಕಾರ್ಯದರ್ಶಿ ಸಂದೀಪ್ ಹಾಗೂ ಜಿಲ್ಲಾಧ್ಯಕ್ಷ ಸಂತೋಷ್ ತಿಳಿಸಿದ್ದಾರೆ.
108 ಸೇವೆ ಸಿಬಂದಿಯ ಬಾಕಿ ಇರುವ 3 ತಿಂಗಳ ವೇತನವನ್ನು ತತ್‌ಕ್ಷಣ ಪಾವತಿ ಮಾಡುವಂತೆ ಶಾಸಕ ಯಶ್‌ಪಾಲ್ ಎ. ಸುವರ್ಣ ಅವರು ಮುಖ್ಯಮಂತ್ರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ಸರಕಾರ ತತ್‌ಕ್ಷಣ ಸಿಬಂದಿಗಳ ವೇತನವನ್ನು ಪಾವತಿಸಿ ನ್ಯಾಯ ಬದ್ಧವಾದ ಬೇಡಿಕೆಯನ್ನು ಪರಿಗಣಿಸಿ ಮುಷ್ಕರ ಹಿಂಪಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ದಕ್ಷಿಣ ಕನ್ನಡ: ಇಂದು ನಿರ್ಧಾರ
ಮೂರು ತಿಂಗಳ ವೇತನ ಬಾಕಿ ಬಿಡುಗಡೆಗೆ ಆಗ್ರಹಿಸಿ 108 ಆ್ಯಂಬುಲೆನ್ಸ್ ನೌಕರರು ಕರೆಕೊಟ್ಟಿರುವ ಮುಷ್ಕರಕ್ಕೆ ದ.ಕ. ಜಿಲ್ಲೆಯ ಆ್ಯಂಬುಲೆನ್ಸ್ ನೌಕರರೂ ಬೆಂಬಲ ಸೂಚಿಸಿದ್ದಾರೆ. ಆದರೆ ಸೋಮವಾರ ರಾತ್ರಿ ವರೆಗೆ ಮುಷ್ಕರ ಪ್ರಾರಂಭಿಸಿಲ್ಲ. ಬೆಂಗಳೂರಿನಲ್ಲಿ ಸರಕಾರದ ಅಧಿಕಾರಿಗಳ ಜತೆ ಯೂನಿಯನ್ ಸಭೆ ಸೋಮವಾರ ನಡೆಯಬೇಕಿರುವುದು ಮಂಗಳ ವಾರ (ಮೇ7)ಕ್ಕೆ ಮುಂದೂಡಿಕೆ ಯಾಗಿರುವುದರಿಂದ ರಾಜ್ಯ ಮಟ್ಟದ ನಾಯಕರ ಸೂಚನೆ ಮೇಲೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಆ್ಯಂಬುಲೆನ್ಸ್ ನೌಕರರು ತಿಳಿಸಿದ್ದಾರೆ.
ಮೇ 5ರಿಂದ ಜಿಲ್ಲೆಯಲ್ಲಿ 108ಕ್ಕೆ ಬರುವ ಪ್ರಕರಣಗಳ ವಿವರಗಳನ್ನು ವರದಿ ಮಾಡುವುದನ್ನು ಸ್ಥಗಿತಗೊಳಿಸಿದ್ದೇವೆ. ಆದರೆ ರೋಗಿಗಳನ್ನು ಈಗಲೂ ಸ್ವೀಕರಿಸಲಾಗುತ್ತಿದೆ. ಮೇ 7ರ ಸಭೆಯ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು
ಎಂದು ತಿಳಿಸಿದ್ದಾರೆ.