Advertisement

ಸೂಕ್ತ ಸಮಯಕ್ಕೆ ಸಿಗುತ್ತಿಲ್ಲ ಆಂಬ್ಯುಲೆನ್ಸ್‌!

12:03 PM Dec 16, 2018 | |

ಬೀದರ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಡಿಯಲ್ಲಿ ಜಿಲ್ಲೆಯ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ 34 ಆಂಬ್ಯುಲೆನ್ಸ್‌ ಕಾರ್ಯ ನಿರ್ವಹಿಸುತ್ತಿದ್ದು, ಈ ಪೈಕಿ 7 ಆಂಬ್ಯುಲೆನ್ಸ್‌ಗಳಲ್ಲಿ ವೆಂಟಿಲೇಟರ್‌ ವ್ಯವಸ್ಥೆ ಇದೆ. 39 ಆಂಬ್ಯುಲೆನ್ಸ್‌ಗಳಲ್ಲಿ ಎರಡು ವಾಹನಗಳು ದುರಸ್ತಿಗೆ ಬಂದಿವೆ. ಎರಡು ವಾಹನಗಳು ಗುಜುರಿಗೆ ಹಾಕುವ ಸ್ಥಿತಿಯಲ್ಲಿದ್ದು, ಒಟ್ಟಾರೆ 34 ವಾಹನಗಳು ಚಾಲ್ತಿಯಲ್ಲಿವೆ. ಅಲ್ಲದೆ, ಜಿಲ್ಲೆಯ ಐದು ತಾಲೂಕುಗಳಲ್ಲಿ “108′ ಸಂಖ್ಯೆ ಐದು ಆಂಬ್ಯುಲೆನ್ಸ್‌ಗಳು ಕೂಡ ಕಾರ್ಯ ನಿರ್ವಹಿಸುತ್ತಿವೆ.

Advertisement

ಪ್ರತಿ 30 ಕಿ.ಮೀ. ಅಂತರದಲ್ಲಿ ಒಂದು ಆಂಬ್ಯುಲೆನ್ಸ್‌ ಇರಬೇಕು ಎಂಬ ನಿಯಮವಿದ್ದು, ಅದರಂತೆ ವಾಹನಗಳು ಇವೆ. ಆದರೆ, ವಿವಿಧೆಡೆ ಆಂಬ್ಯುಲೆನ್ಸ್‌ಗಳು ಸೂಕ್ತ ಸಮಯಕ್ಕೆ ಸಿಗುತ್ತಿಲ್ಲ ಎಂಬ ಗೋಳು ಕೂಡ ಕೇಳಿ ಬರುತ್ತಿದೆ.

ಸದ್ಯ ಜಿಲ್ಲೆಯಲ್ಲಿ 7 ಆಂಬ್ಯುಲೆನ್ಸ್‌ಗಳಲ್ಲಿ ವೆಂಟಿಲೇಟರ್‌ ಸೇರಿದಂತೆ ಇತರೆ ವ್ಯವಸ್ಥೆಗಳು ಇವೆ. ಕಳೆದ ತಿಂಗಳು ಬೀದರ್‌ ಬ್ರಿಮ್ಸ್‌ ಬೋದನಾ ಸಂಸ್ಥೆಯ ಅನುದಾನ ಅಡಿಯಲ್ಲಿ ಮೊದಲ ಬಾರಿಗೆ ಎರಡು ಅತ್ಯಾಧುನಿಕ ಆಂಬ್ಯುಲೆನ್ಸ್‌ ಖರೀದಿಸಲಾಗಿದೆ. ಸುಮಾರು 42 ಲಕ್ಷ ರೂ. ವೆಚ್ಚದಲ್ಲಿ ಖರೀದಿಸಿದ ಆಂಬ್ಯುಲೆನ್ಸ್‌ಗಳಲ್ಲಿ ವೆಂಟಿಲೇಟರ್‌, ಮಲ್ಟಿ ಪ್ಯಾರ
ಮಾನಿಟರ್‌ ವ್ಯವಸ್ಥೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒಳಗೊಂಡ ಆಂಬ್ಯುಲೆನ್ಸ್‌ ಇವಾಗಿವೆ.

ಅತ್ಯಾಧುನಿಕ ಆಂಬ್ಯುಲೆನ್ಸ್‌: ವೈದ್ಯರ ಪ್ರಕಾರ ಹೊಸ ಮಾದರಿಯ “ಅಡ್ವಾನ್‌ಸ್ಡ ಲೈಫ್‌ ಸರ್ಪೋಟ್‌’ ಆಂಬ್ಯುಲೆನ್ಸ್‌ ಈ ಭಾಗದ ರೋಗಿಗಳ ತುರ್ತು ಚಿಕಿತ್ಸೆ ಹಾಗೂ ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಸಾಗಿಸುವ ಸೇತುವೆಯಾಗಿ ಕೆಲಸ ಮಾಡಲಿದೆ. ಗಂಭೀರ ಗಾಯಗೊಂಡವರು, ಕೋಮಾ ಸ್ಥಿತಿಯಲ್ಲಿರುವ ರೋಗಿಗಳನ್ನು ಇನ್ನೊಂದು ಆಸ್ಪತ್ರೆಗೆ ಸಾಗಿಸುವ ಎಲ್ಲ ವ್ಯವಸ್ಥೆಗಳು ಹಾಗೂ ರೋಗಿಯ ಚಿಕಿತ್ಸೆಯನ್ನು ಆಂಬ್ಯುಲೆನ್ಸ್‌ನಲ್ಲಿಯೇ ಮಾಡುವ ವ್ಯವಸ್ಥೆಯನ್ನು
ಹೊಸ ಮಾದರಿ ಆಂಬ್ಯುಲೆನ್ಸ್‌ನಲ್ಲಿ ಅಳವಡಿಸಲಾಗಿದೆ.

ಒಂದು ದಿನಕ್ಕೆ ಖಾಸಗಿ ಆಸ್ಪತ್ರೆಯವರು ಕನಿಷ್ಟ 20 ಸಾವಿರ ಬಾಡಿಗೆ ಪಡೆಯುತ್ತಾರೆ. ಇದಿಗ ಕಡಿಮೆ ಖರ್ಚಿನಲ್ಲಿ ಸಾರ್ವಜನಿಕರಿಗೆ ಸೇವೆ ನೀಡುವುದಾಗಿ ಬ್ರಿಮ್ಸ್‌ ಆಸ್ಪತ್ರೆಯ ಡಾ| ಚಂದ್ರಪ್ರಕಾಶ ರಗಟೆ ಮಾಹಿತಿ ನೀಡಿದ್ದಾರೆ.

Advertisement

ಎಲ್ಲಿ ಎಷ್ಟು: ಬೀದರ್‌ ಜಿಲ್ಲಾಸ್ಪತ್ರೆಯಲ್ಲಿ 2, ಹುಮನಾಬಾದ ತಾಲೂಕಿನಲ್ಲಿ ಎರಡು ಹಾಗೂ ಇತರೆ ತಾಲೂಕುಗಳಲ್ಲಿ ತಲಾ ಒಂದು ವೆಂಟಿಲೇಟರ್‌ ವ್ಯವಸ್ಥೆ ಇರುವ ಆಂಬ್ಯುಲೆನ್ಸ್‌ಗಳು ಇವೆ. ಆದರೆ, ರೋಗಿಗಳನ್ನು ಸಾಗಿಸುವ ಸಂದರ್ಭ ಅಥವಾ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಸೂಕ್ತ ಸಮಯಕ್ಕೆ ವಾಹನಗಳು ಲಭ್ಯವಾಗುತ್ತಿಲ್ಲ. ತುರ್ತು ಸಂದರ್ಭದಲ್ಲಿ ಆಸ್ಪತ್ರೆಯವರು ವಾಹನ ವ್ಯವಸ್ಥೆಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪಗಳು ಕೂಡ ಇವೆ. ಆರೋಗ್ಯ ಅಧಿ ಕಾರಿಗಳು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುವ ಕೆಲಸ ಮಾಡಿ, ತುರ್ತು ಸಂದರ್ಭದಲ್ಲಿ ಆಂಬ್ಯುಲೆನ್ಸ್‌ ವ್ಯವಸ್ಥೆ
ಮಾಡುವ ನಿಟ್ಟಿನಲ್ಲಿ ಹೆಜ್ಜೆ ಹಾಕಬೇಕಾಗಿದೆ.

ಜಿಲ್ಲೆಯ ಆಸ್ಪತ್ರೆಗಳು: ಬೀದರ ನಗರದಲ್ಲಿ ಜಿಲ್ಲಾಸ್ಪತ್ರೆ, ನಾಲ್ಕು ತಾಲೂಕುಗಳಲ್ಲಿ ಸಾರ್ವಜನಿಕ ಆಸ್ಪತ್ರೆಗಳು, 8
ಸಮುದಾಯ ಆರೋಗ್ಯ ಕೇಂದ್ರಗಳು, 52 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.
ಎಲ್ಲ ತಾಲೂಕುಗಳಲ್ಲಿ ನಗುಮಗು ಯೋಜನೆಯ ವಾಹನಗಳು ಕೂಡ ಇದ್ದು, ಹೆರಿಗೆ ಹಾಗೂ ಬಾಣಂತಿಯರ ಸಂಚಾರಕ್ಕೆ ವಾಹನಗಳನ್ನು ಬಳಕೆ ಮಾಡಲಾಗುತ್ತಿದೆ. ಸದ್ಯ ಇರುವ ವಾಹನಗಳನ್ನು ಸೂಕ್ತವಾಗಿ ಬಳಸಿಕೊಂಡರೆ ಆರೋಗ್ಯ ಇಲಾಖೆ ಜಿಲ್ಲೆಯ ಜನರಿಗೆ ಉತ್ತಮ ಸೇವೆಗಳನ್ನು ನೀಡಬಹುದಾಗಿದೆ.

ಜಿಲ್ಲೆಯಲ್ಲಿ ಒಟ್ಟು 34 ಆಂಬ್ಯುಲೆನ್ಸ್‌ಗಳು ಸಾರ್ವಜನಿಕರ ಸೇವೆಯಲ್ಲಿ ಶ್ರಮಿಸುತ್ತಿವೆ. ಜಿಲ್ಲೆಯಲ್ಲಿ ಯಾವುದೇ ಕಡೆಗಳಲ್ಲಿ ಆಂಬ್ಯುಲೆನ್ಸ್‌ ಸಮಸ್ಯೆ ಇಲ್ಲ. ಆರೋಗ್ಯ ಇಲಾಖೆ ನಿಯಮದಂತೆ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಹುಮನಾಬಾದ ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ ಇರುವ ಕಾರಣ ಆಂಬ್ಯುಲೆನ್ಸ್‌ ವ್ಯವಸ್ಥೆ ಹೆಚ್ಚಿದೆ. ಆಯಾ ಪ್ರದೇಶದಲ್ಲಿನ ವಾಹನಗಳು ರೋಗಗಳನ್ನು ಸಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಯಾವುದೇ ಸಮಸ್ಯೆಗಳು ಇದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ದೂರು ನೀಡಬಹುದಾಗಿದೆ.
 ಡಾ| ಎಂ.ಎ. ಜಬ್ಟಾರ್‌, ಜಿಲ್ಲಾ ಆರೋಗ್ಯಾಧಿಕಾರಿ

„ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.