ಹೈದರಾಬಾದ್ : ಜನನಿಬಿಡ ಪ್ರದೇಶದಲ್ಲಿ ಆಂಬ್ಯುಲೆನ್ಸ್ ಒಂದು ಸೈರನ್ ಹಾಕಿಕೊಂಡು ಬರುತ್ತಿರುವುದನ್ನು ಕಂಡ ಟ್ರಾಫಿಕ್ ಪೊಲೀಸ್ ಕೂಡಲೇ ಎಚ್ಚೆತ್ತುಕೊಂಡು ಟ್ರಾಫಿಕ್ ಕ್ಲಿಯರ್ ಮಾಡಿ ಆಂಬ್ಯುಲೆನ್ಸ್ ಹೋಗಲು ಅನುವು ಮಾಡಿಕೊಟ್ಟ ಕೆಲವೇ ಹೊತ್ತಿನಲ್ಲಿ ಆಂಬ್ಯುಲೆನ್ಸ್ ಚಾಲಕನ ಕಾರ್ಯ ನೋಡಿ ಟ್ರಾಫಿಕ್ ಪೊಲೀಸ್ ದಿಗ್ಬ್ರಮೆಗೊಂಡ ಘಟನೆ ಹೈದರಾಬಾದ್ ನಲ್ಲಿ ಬೆಳಕಿಗೆ ನಡೆದಿದೆ.
ಏನಿದು ಘಟನೆ: ಹೈದರಾಬಾದ್‌ನ ಜನನಿಬಿಡ ಬಶೀರ್‌ಬಾಗ್ ಜಂಕ್ಷನ್‌ನಲ್ಲಿ ಖಾಸಗಿ ಆಸ್ಪತ್ರೆಯ ಆಂಬ್ಯುಲೆನ್ಸ್ ಚಾಲಕನೊಬ್ಬ ಸೈರನ್ ಹಾಕಿಕೊಂಡು ವೇಗವಾಗಿ ಬಂದಿದ್ದಾನೆ. ಇತ್ತ ಸೈರನ್ ಸದ್ದು ಕೇಳಿದ ಟ್ರಾಫಿಕ್ ಪೊಲೀಸ್ ಕೂಡಲೇ ಕಾರ್ಯಪ್ರವೃತ್ತರಾಗಿ ಜನನಿಬಿಡ ಸ್ಥಳದಲ್ಲಿ ವಾಹನಗಳನ್ನು ತಡೆದು ಆಂಬ್ಯುಲೆನ್ಸ್ ಹೋಗಲು ಅನುವು ಮಾಡಿಕೊಟ್ಟಿದ್ದಾನೆ ಇದಾದ ಕೆಲವೇ ಹೊತ್ತಿನಲ್ಲಿ ಆಂಬ್ಯುಲೆನ್ಸ್ ನೇರವಾಗಿ ಎದುರಿಗಿದ್ದ ಹೋಟೆಲ್ ಪಕ್ಕ ಹೋಗಿ ನಿಂತಿದೆ. ಈ ವೇಳೆ ಓರ್ವ ನರ್ಸ್ ಹಾಗೂ ಆಂಬ್ಯುಲೆನ್ಸ್ ಚಾಲಕ ತಿಂಡಿ ತಿನ್ನಲು ಹೋಗಿದ್ದಾರೆ, ಇದನ್ನು ನೋಡಿದ ಟ್ರಾಫಿಕ್ ಪೊಲೀಸ್ ಗೆ ಅನುಮಾನ ಬಂದು ಆಂಬ್ಯುಲೆನ್ಸ್ ಪಕ್ಕಕ್ಕೆ ಹೋಗಿದ್ದಾನೆ ಆಂಬ್ಯುಲೆನ್ಸ್ ಸೈರನ್ ಮೊಳಗುತ್ತಲೇ ಇತ್ತು ಆದರೆ ಆಂಬ್ಯುಲೆನ್ಸ್ ಒಳಗೆ ಯಾವ ರೋಗಿಯೂ ಇರಲಿಲ್ಲ ಬದಲಿಗೆ ಒಬ್ಬರು ಹಿರಿಯ ನರ್ಸ್ ಮಾತ್ರ ಕುಳಿತಿದ್ದರು.
ಹೋಟೆಲ್ ಗೆ ಹೋಗಿದ್ದ ಆಂಬ್ಯುಲೆನ್ಸ್ ಚಾಲಕನನ್ನು ಹೋಗಿ ವಿಚಾರಿಸಿದ ಟ್ರಾಫಿಕ್ ಪೊಲೀಸ್, ರೋಗಿ ಎಲ್ಲಿದ್ದಾರೆ ಎಂದು ಕೇಳಿದ್ದಾರೆ ಅದಕ್ಕೆ ಉತ್ತರಿಸಿದ ಚಾಲಕ ನರ್ಸ್ ಒಬ್ಬರು ಅನಾರೋಗ್ಯಕ್ಕೆ ಒಳಗಾಗಿದ್ದರು ಎಂದು ಹೇಳಿದ್ದಾನೆ, ಚಾಲಕನ ಆ ಮಾತಿಗೆ ಒಪ್ಪದ ಟ್ರಾಫಿಕ್ ಪೊಲೀಸ್ ಹೋಟೆಲ್ ನಲ್ಲಿ ತಿಂಡಿ ತಿನ್ನಲು ಅನವಶ್ಯಕ ಸೈರನ್ ಹಾಕಿ ಬಂದಿದ್ದೀರಾ ಎಂದು ಚಾಲಕನಿಗೆ ಗದರಿದ್ದಾನೆ, ಅಲ್ಲದೆ ಮೋಟಾರು ವಾಹನ ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ಚಾಲಕನ ವಿರುದ್ಧ 1,000 ರೂ. ದಂಡ ಹಾಕಿದ್ದಾರೆ.
ಇದನ್ನೂ ಓದಿ: Health; ಪೋಷಕರೇ ಎಚ್ಚರ;ಮಕ್ಕಳಲ್ಲಿ ಹೆಚ್ಚುತ್ತಿರುವ Online Game ಚಟ… ವೈದ್ಯರ ಸಲಹೆ ಏನು?