Advertisement

ಸಾರ್ವಜನಿಕ ಆಸ್ಪತ್ರೆಗೆ ಆ್ಯಂಬುಲೆನ್ಸ್‌ ನೆರವು

05:30 PM May 31, 2021 | Team Udayavani |

ಮಾಗಡಿ: ತಾಲೂಕಿನ ಸಾರ್ವಜನಿಕಸರ್ಕಾರಿ ಆಸ್ಪತ್ರೆಗೆ ಮಾಜಿ ಶಾಸಕ ಎಚ್‌.ಸಿ.ಬಾಲಕೃಷ್ಣ ಉಚಿತವಾಗಿ ನೂತನಆ್ಯಂಬುಲೆನ್ಸ್‌ ಟಿ.ಎಚ್‌.ಒ ಡಾ. ಸತೀಶ್‌ಗೆ ಹಸ್ತಾಂತರಿಸಿದರು.ಪಟ್ಟಣದ ಶ್ರೀಸೋಮೇಶ್ವರ ಸ್ವಾಮಿದೇವಾಲಯದ ಬಳಿ ಆ್ಯಂಬುಲೆನ್ಸ್‌ಕೀಯನ್ನು ತಾಲೂಕು ವೈದ್ಯಾಧಿಕಾರಿಗೆಹಸ್ತಾಂತರಿಸಿ ಮಾತನಾಡಿದರು.

Advertisement

ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಅಗತ್ಯವಿರುವ ಆಕ್ಸಿಜನ್‌ ಬೆಡ್‌ ವ್ಯವಸ್ಥೆ ಮತ್ತುಎ.ಸಿ ವ್ಯವಸ್ಥೆ ಇರುವ ಆ್ಯಂಬುಲೆನ್ಸ್‌ನು°ಶಾಶ್ವತವಾಗಿ ನೀಡಿದ್ದೇನೆ. ಇದರಸಂಪೂರ್ಣ ಜವಾಬ್ದಾರಿಯನ್ನು ಭಾಗ್ಯಲಕ್ಷ್ಮೀ ಗ್ಯಾಸ್‌ ಏಜೆನ್ಸಿಯಿಂದ ನಿರ್ವಹಿಸಲಾಗುವುದು.ಆಶಾ ಕಾರ್ಯಕರ್ತೆಯರಿಗೆ ಪ್ರತಿತಿಂಗಳು 500 ರೂ. ಗಳನ್ನು ನೀಡುತ್ತೇನೆಎಂದು ನಾನು ಹಿಂದೆ ತಿಳಿಸಿದಂತೆಮಾಡಬಾಳ್‌, ಕಸಬಾ ಹೋಬಳಿಯಕೊರೊನಾ ವಾರಿಯರ್ಗಳಾದ ಆಶಾ ಕಾರ್ಯಕರ್ತೆಯರಿಗೆ ಎರಡು ತಿಂಗಳದು ಸೇರಿ 1 ಸಾವಿರ ರೂಗಳನ್ನು ಸ್ನೇಹಿತರ ಸಹಕಾರದಿಂದ ವಿತರಿಸಲಾಗುತ್ತಿದೆ.

ಉಪ ಮುಖ್ಯಮಂತ್ರಿ ಡಾ. ಸಿ.ಎನ್‌ಅಶ್ವಥ್‌ ನಾರಾಯಣ ಮತ್ತು ಶಾಸಕಎ.ಮಂಜುನಾಥ್‌ ಅವರು ಹುಲಿಕಟ್ಟೆಯ ಕೋವಿಡ್‌ ಕೇಂದ್ರಕ್ಕೆ ಭೇಟಿನೀಡಿದ ಸಂದರ್ಭದಲ್ಲಿ ರೋಗಿಗಳಸಮಸ್ಯೆಯನ್ನು ಆಲಿಸುವ ಕೆಲಸಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸಾಲ ಪಡೆದವರಿಗೆ ಮೈಕ್ರೋಪೈನಾನ್ಸ್‌ ವ್ಯವಸ್ಥಾಪಕರು ಲಾಕ್‌ಡೌನ್‌ಸಂದರ್ಭದಲ್ಲಿ ನೋಟಿಸ್‌ ನೀಡಿಕಿರುಕುಳ ನೀಡುತ್ತಿರುವುದುಸರಿಯಲ್ಲ ಎಂದರು.

ಬಮೂಲ್‌ ಅಧ್ಯಕ್ಷ ನರಸಿಂಹಮೂರ್ತಿ, ಮಾಜಿ ಜಿ.ಪಂ ಸದಸ್ಯ ಎಂ.ಕೆಧನಂಜಯ್ಯ, ತಾವರೆಕೆರೆ ಮೂರ್ತಿ,ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಸಿ.ಕೆ ರಾಜೇಶ್‌, ಟಿಎಚ್‌ಒಡಾ.ಸತೀಶ್‌, ಆಸ್ಪತ್ರೆಯ ಹಿರಿಯ ಶಿಕ್ಷಣಾ ಧಿಕಾರಿ ಆರ್‌.ರಂಗನಾಥ್‌, ತುಕಾರಾಂ, ಶಿವಸ್ವಾಮಿ, ಪುರಸಭಾ ಸದಸ್ಯರಾದ ಎಚ್‌.ಜೆ.ಪುರುಷೋತ್ತಮ್‌,ರಿಯಾಜ್‌,ಮಾಜಿ ಸದಸ್ಯ ಎಚ್‌.ಜೆಪ್ರವೀಣ್‌, ಯೂತ್‌ ಕಾಂಗ್ರೆಸ್‌ ಅಧ್ಯಕ್ಷವಿನಯ್‌ಗೌಡ, ಬಂಕ್‌ ತೇಜೇಶ್‌, ಎಂ.ಆರ್‌. ಮಂಜುನಾಥ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next