Advertisement

ಶುಭಾ ಪೂಂಜಾ ಈಗ ಅಂಬುಜಾ

10:40 AM Aug 10, 2020 | Suhan S |

ಕನ್ನಡದಲ್ಲಿ ಇಲ್ಲಿಯವರೆಗೆ ಹಲವು ಚಿತ್ರಗಳಲ್ಲಿ, ಹತ್ತಾರು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟಿ ಶುಭಾ ಪೂಂಜಾ ಈಗ ಕ್ರೈಂ ರಿಪೋರ್ಟರ್‌ ಗೆಟಪ್‌ನಲ್ಲಿ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ.

Advertisement

ಹೌದು, ಇಲ್ಲಿಯವರೆಗೆ ಹೆಚ್ಚಾಗಿ ಬೋಲ್ಡ್‌ ಆ್ಯಂಡ್‌ ಗ್ಲಾಮರಸ್‌ ಪಾತ್ರ ಗಳಲ್ಲಿ ಮಿಂಚುತ್ತಿದ್ದ ಶುಭಾ ಪೂಂಜಾ ಈಗ ಪತ್ರಕರ್ತೆಯಾಗಿ ಗಂಭೀರ ಪಾತ್ರದತ್ತ ಚಿತ್ತ ಹರಿಸಿದ್ದಾರೆ. ಅಂದಹಾಗೆ, ಶುಭಾ ಪೂಂಜಾ ಕ್ರೈಂ ರಿಪೋರ್ಟರ್‌ ಆಗಿ ಕಾಣಿಸಿಕೊಳ್ಳುತ್ತಿರುವ ಹೊಸಚಿತ್ರದ ಹೆಸರು “ಅಂಬುಜಾ’.

ಈ ಹಿಂದೆ “ಕೆಲವು ದಿನಗಳ ನಂತರ’ ಚಿತ್ರವನ್ನು ನಿರ್ದೇಶಿಸಿದ್ದ ಶ್ರೀನಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ವಿಜಯಪುರದ ಲಂಬಾಣಿ ಕುಟುಂಬವೊಂದರಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದ ಚಿತ್ರ ಇದಾಗಿದ್ದು, ಚಿತ್ರವನ್ನು ಉದ್ಯಮಿ ಕಾಶೀನಾಥ್‌ ಡಿ. ಮಡಿವಾಳರ್‌ ಕಥೆ ಬರೆದು ನಿರ್ಮಾಣ ಮಾಡುತ್ತಿದ್ದಾರೆ. ಹಾರರ್‌, ಕಂ ರೊಮ್ಯಾಂಟಿಕ್‌ ಕಾಮಿಡಿ ಕಥಾಹಂದರ ಹೊಂದಿರುವ “ಅಂಬುಜಾ’ ಚಿತ್ರದ ಸ್ಕ್ರಿಪ್ಟ್ ಕೆಲಸಗಳು ಪೂರ್ಣಗೊಂಡಿದ್ದು, ಇತರೆ ಪ್ರೀ-ಪ್ರೊಡಕ್ಷನ್‌ ಕೆಲಸಗಳು ಭರದಿಂದ ನಡೆಯುತ್ತಿದೆ. ಸದ್ಯ ಚಿತ್ರದ ನಾಯಕಿಯಾಗಿ ಶುಭಾ ಪೂಂಜಾ ಮತ್ತೂಂದು ಪ್ರಮುಖ ಪಾತ್ರದಲ್ಲಿ ಗೋವಿಂದೇ ಗೌಡ ಅಭಿನಯಿಸುತ್ತಿದ್ದು, ಚಿತ್ರದ ಇತರ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ಇನ್ನಷ್ಟೆ ನಡೆಯಬೇಕಿದೆ. ಇನ್ನು “ಅಂಬುಜಾ’ ಚಿತ್ರದಲ್ಲಿ ಶುಭಾ ಹಿಂದೆಂದೂ ಕಾಣಿಸಿಕೊಳ್ಳದ ಪಾತ್ರದಲ್ಲಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರಂತೆ.

ಚಿತ್ರದಲ್ಲಿ ಕ್ರೈಂ ರಿಪೋರ್ಟರ್‌ ಆಗಿರುವ ಶುಭಾ ಪೂಂಜಾ ತಮ್ಮ ತನಿಖೆಯಿಂದ ಅಪರಾಧ ಪ್ರಕರಣವೊಂದನ್ನು ಭೇದಿಸುತ್ತಾರಂತೆ. ಸೆಪ್ಟೆಂಬರ್‌ ಅಥವಾ ಅಕ್ಟೋಬರ್‌ನಿಂದ ಚಿತ್ರೀಕರಣ ಶುರು.

Advertisement

Udayavani is now on Telegram. Click here to join our channel and stay updated with the latest news.