Advertisement

ಕೋವಿಡ್ ಎಫೆಕ್ಟ್ : ವೆಂಟಿಲೇಟರ್‌ಗೆ ಪರ್ಯಾಯ ಹುಡುಕಿದರು

09:25 AM Apr 04, 2020 | sudhir |

ಹೈದರಾಬಾದ್‌: ಜಗತ್ತಿನೆಲ್ಲೆಡೆ ಕೋವಿಡ್ ನ್ನು ಮಟ್ಟಹಾಕಲು ನೆರವಾಗುವಂತಹ ಔಷಧ ತಯಾರಿಕೆಯಲ್ಲಿ ವಿಶ್ವದ ಸಾಕಷ್ಟು ರಾಷ್ಟ್ರಗಳ ಸಂಶೋಧಕರು ನಿರತರಾಗಿದ್ದಾರೆ. ಮತ್ತೂಂದೆಡೆ ಅಗತ್ಯ ಚಿಕಿತ್ಸೋಪಕರಣವಾದ ವೆಂಟಿಲೇಟರ್‌ ಸಮಸ್ಯೆಯಿಂದ ಕೋವಿಡ್ 19 ಪೀಡಿತ ರಾಷ್ಟ್ರಗಳು ಪರದಾಡುತ್ತಿವೆ. ಅಮೆರಿಕಾ ಕೂಡ ವೆಂಟಿಲೇಟರ್‌ ಅಭಾವದಿಂದ ಬಳಲುತ್ತಿದ್ದು, ನೆರೆಹೊರೆಯ ರಾಷ್ಟ್ರಗಳ ಮುಂದೆ ಸಹಾಯ ಹಸ್ತ ಚಾಚಿದೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಅಗತ್ಯ ವಸ್ತುಗಳನ್ನು ಪೂರೈಕೆಗೆ ಮುಂದಾಗಿರುವ ಹೈದರಾಬಾದ್‌ ಐಐಟಿ ಕಡಿಮೆ ವೆಚ್ಚದಲ್ಲಿ ವೆಂಟಿಲೇಟರ್‌ಗಳನ್ನು ರೂಪಿಸಲು ಮುಂದಾಗಿದೆ.

Advertisement

ಅಗ್ಗದ ದರದಲ್ಲಿ ವೆಂಟಿಲೇಟರ್‌
ಹೈದರಾಬಾದ್‌ನ ಐಐಟಿ ಸಂಶೋಧಕರು ಅಗ್ಗದ ವೆಂಟಿಲೇಟರ್‌ಗಳನ್ನು ಅಭಿವೃದ್ಧಿಪಡಿಸಿದ್ದು, ಕೋವಿಡ್ ಸೋಂಕಿತರು ಸೇರಿದಂತೆ, ಹಲವು ಉಸಿರಾಟದ ತೊಂದರೆಯಿರುವ ರೋಗಿಗಳಿಗೆ ಅನುಕೂಲವಾಗಲಿದೆ ಎಂಬ ಭರವಸೆ ಮೂಡಿದೆ.

ಅಂಬು ಬ್ಯಾಗ್‌ ಎಂದು ನಾಮಕರಣ
ಈ ವೆಂಟಿಲೇಟರ್‌ಗಳನ್ನು ತುರ್ತು ಸಂದರ್ಭದಲ್ಲಿ ಬಳಸಬಹುದಾಗಿದ್ದು, ಸುಲಭವಾಗಿ ತಯಾರಿಸಬಹುದು. ಕಡಿಮೆ ಖರ್ಚು ತಗಲುವುದರಿಂದ ಅಗ್ಗದ ದರದಲ್ಲಿ ಕೈಗೆಟುಕಲಿದೆ. ದೆಹಲಿ ಐಐಟಿ ಈ ವೆಂಟಿಲೇಟರ್‌ಗಳಿಗೆ ಅಂಬು ಬ್ಯಾಗ್‌ ಎಂದು ನಾಮಕರಣ ಮಾಡಿದೆ.

5 ಸಾವಿರ ರೂ.ಗಳಿಗೆ ಲಭ್ಯ
ಇವುಗಳ ಖರೀದಿಗೆ 5 ಸಾವಿರ ರೂ.ಗಳ ವೆಚ್ಚ ತಗುಲಲಿದ್ದು, ಒಂದು ಬಾರಿಗೆ ಓರ್ವ ರೋಗಿ ಮಾತ್ರ ಬಳಸಬಹುದು. ಪುನರ್ಬಳಕೆ ಮಾಡಲು ಸಾಧ್ಯವಿಲ್ಲ. ಮುಂಬರುವ ತಿಂಗಳಲ್ಲಿ ಮಿಲಿಯನ್‌ಗಟ್ಟಲೇ ಉತ್ಪಾದನೆ ಮಾಡುವುದಾಗಿ ತಿಳಿಸಿರುವ ಐಐಟಿ ತಜ್ಞರು ಕೋವಿಡ್‌-19 ವಿರುದ್ಧ ಹೋರಾಡಲು ಸಾಥ್‌ ನೀಡುವುದಾಗಿ ತಿಳಿಸಿದ್ದಾರೆ.

ನೆರೆಯ ರಾಷ್ಟ್ರಗಳಿಗೂ ನೆರವಾಗಿ
ಕೇಂದ್ರ ಸರಕಾರ ಇವುಗಳ ಉಪಯೋಗ ಮಾಡಿಕೊಂಡು ಪರಿಸ್ಥಿತಿಯನ್ನು ನಿಭಾಯಿಸಲು ಚಿಂತನೆ ನಡೆಸಿದೆ. ಪ್ರಸ್ತುತ ಇರುವ ವೆಂಟಿಲೇಟರ್‌ ಕೊರತೆಯನ್ನು ಅಂಬು ಬ್ಯಾಗ್‌ ಅಳವಡಿಸಿಳ್ಳುವ ಮೂಲಕ ಬಗೆಹರಿಸಿಕೊಳ್ಳಬಹುದು. ಇವುಗಳ ಬಳಕೆಯಿಂದ ಕೇವಲ ದೇಶ ಮಾತ್ರವಲ್ಲದೇ ಹೊರದೇಶಗಳಲ್ಲಿರುವ ವೆಂಟಿಲೇಟರ್‌ ಸಮಸ್ಯೆಯನ್ನು ನೀಗಿಸಬಹುದು ಎಂದು ಸರಕಾರ ಅಭಿಪ್ರಾಯಪಟ್ಟಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next