Advertisement

UNO: ಜಗತ್ತಿನಲ್ಲಿ ಈಗಲೂ ದ್ವಂದ್ವ ನಿಲುವು: ಜೈಶಂಕರ್‌ 

10:19 PM Sep 24, 2023 | Team Udayavani |

ನ್ಯೂಯಾರ್ಕ್‌: ಜಗತ್ತಿನಲ್ಲಿ ಈಗಲೂ ಹಲವು ರಾಷ್ಟ್ರಗಳು ದ್ವಂದ್ವ ನಿಲುವುಗಳನ್ನು ಹೊಂದಿವೆ. ಉನ್ನತ ಹಾಗೂ ಪ್ರಭಾವಯುತ ಸ್ಥಾನಗಳಲ್ಲಿ ಇದ್ದರೂ ವ್ಯವಸ್ಥೆಯಲ್ಲಿ ಬದಲಾವಣೆ ತರಲು, ಅದಕ್ಕೆ ಒಗ್ಗಲು ಸಿದ್ಧರಿಲ್ಲ. ಬದಲಾವಣೆ ಸಾಧ್ಯವಾಗದಂತೆ ಅವುಗಳು ಪ್ರಭಾವ ಬೀರುತ್ತಿವೆ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಆರೋಪಿಸಿದ್ದಾರೆ.
ನ್ಯೂಯಾರ್ಕ್‌ನಲ್ಲಿ ಆಬ್ಸರ್ವರ್‌ ರಿಸರ್ಚ್‌ ಫೌಂಡೇಷನ್‌, ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಪ್ರತಿನಿಧಿ ಕಚೇರಿ ಜತೆಗೂಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರ್ಥಿಕವಾಗಿ ಹಾಗೂ ಐತಿಹಾಸಿಕವಾಗಿ ಪ್ರಬಲ ಸ್ಥಾನಗಳನ್ನು ಹೊಂದಿರುವವರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿದ್ದಾರೆ.

Advertisement

ಅವರು ಜಗತ್ತಿನ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬದಲಾವಣೆ ಆಗಬೇಕು ಎಂಬ ರಾಜಕೀಯ ಒತ್ತಾಸೆಗಿಂತ ಆ ರೀತಿ ಆಗಲೇಬಾರದು ಎಂಬ ಒತ್ತಡಗಳೂ ಹೆಚ್ಚಿವೆ ಎಂದು ಸಚಿವರು ಹೇಳಿದ್ದಾರೆ. ಕೊರೊನಾ ಕಾಲದಲ್ಲಿ ಜಗತ್ತಿನಲ್ಲಿ ದಕ್ಷಿಣದ ರಾಷ್ಟ್ರಗಳಿಗೆ ಈ ಮನೋಭಾವ ಹೆಚ್ಚು ಅನುಭವಕ್ಕೆ ಬಂದಿದೆ ಎಂದರು.

ಜಗತ್ತಿನ ವ್ಯವಸ್ಥೆಯಲ್ಲಿ ಬದಲಾವಣೆಯಾಗಬೇಕು ಎಂದು ಮುಖ ಸ್ತುತಿಗಾಗಿ ಹೇಳಿಕೊಳ್ಳುತ್ತಾರೆ. ಯಥಾಸ್ಥಿತಿಯಲ್ಲಿ ಅವರಿಗೆ ಅಂಥ ಇಚ್ಛಾಶಕ್ತಿಯೇ ಇಲ್ಲ. ಜಗತ್ತು ಈಗಲೂ ದ್ವಂದ್ವ ನೀತಿಯನ್ನೇ ಹೊಂದಿದೆ ಎಂದಿದ್ದಾರೆ ಜೈಶಂಕರ್‌. ನವದೆಹಲಿಯಲ್ಲಿ ಸೆ.9, 10ರಂದು ಮುಕ್ತಾಯವಾದ ಜಿ20 ರಾಷ್ಟ್ರಗಳ ಸಮ್ಮೇಳನದಲ್ಲಿ ಸಾಂಸ್ಕೃತಿಕವಾಗಿ ಸಮನ್ವಯ ಸಾಧಿಸಲಾಗಿತ್ತು ಎಂಬುದಕ್ಕೆ ಸಿರಿಧಾನ್ಯಗಳನ್ನು ಯಶಸ್ವಿಯಾಗಿ ಆಹಾರ ಪದ್ಧತಿಯಲ್ಲಿ ಅಳವಡಿಸಲಾಗಿರುವುದೇ ಸಾಕ್ಷಿ ಎಂದೂ ಅವರು ಹೇಳಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next