Advertisement

Puttur; ಯುವಗಾಯಕಿ ಸೂರ್ಯಗಾಯತ್ರಿ ಸಂಗೀತ ವೈಭವ

10:19 PM Jan 21, 2024 | Team Udayavani |

ಪುತ್ತೂರು: ಅಂಬಿಕಾ ವಿದ್ಯಾಲಯದ ಸಿಬಿಎಸ್‌ಇ ಸಂಸ್ಥೆಯ 10ನೇ ವರ್ಷಾಚರಣೆ -ದಶಾಂಬಿಕೋತ್ಸವ ಪ್ರಯುಕ್ತ ಬಪ್ಪಳಿಗೆಯ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಯುವಗಾಯಕಿ ಸೂರ್ಯಗಾಯತ್ರಿ ಹಾಗೂ ತಂಡದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ಶನಿವಾರ ನಡೆಯಿತು.

Advertisement

ಹನುಮಾನ್‌ ಚಾಲೀಸಾವನ್ನು ಹಾಡಿ ಇಡಿಯ ಸಭೆ ತನ್ನೊಂದಿಗೆ ಹಾಡುವಂತೆ ಪ್ರೇರೇಪಿಸಿದರು.ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೂರ್ಯಗಾಯತ್ರಿ ಅವರ ರಾಮಚಂದ್ರ ಕೃಪಾಳು ಹಾಡಿನ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದು ಆ ಹಾಡನ್ನು ಪ್ರಸ್ತುತಪಡಿಸಿದರು. ಅಯೋಧ್ಯೆ ಶ್ರೀರಾಮಮಂದಿರ ಪ್ರಾಣಪ್ರತಿಷ್ಠೆಯ ಹಿನ್ನೆಲೆಯಲ್ಲಿ ಶ್ರೀ ರಾಮ ಜಯರಾಮ ಜಯಜಯ ರಾಮ ಸ್ತುತಿ, ಕೆಲವು ಕನ್ನಡದ ಹಾಡುಗಳನ್ನು ಹಾಡಿದರು.

ವಯಲಿನ್‌ನಲ್ಲಿ ಗಣರಾಜ್‌ ಕಾರ್ಲೆ, ಮೃದಂಗದಲ್ಲಿ ಪಿ.ವಿ. ಅನಿಲ್‌ ಕುಮಾರ್‌, ತಬಲದಲ್ಲಿ ಪ್ರಶಾಂತ್‌ ಶಂಕರ್‌ ಹಾಗೂ ರಿದಂಪ್ಯಾಡ್‌ನ‌ಲ್ಲಿ ಶೈಲೇಶ್‌ ಮರಾರ್‌ ಸಹಕರಿಸಿದರು.

ಸಮ್ಮಾನ
ಸೂರ್ಯಗಾಯತ್ರಿ ಅವರನ್ನುಅಂಬಿಕಾ ಸಂಸ್ಥೆಗಳ ವತಿಯಿಂದ ಸಂಗೀತವಿದ್ವಾಂಸ ವಿದ್ವಾನ್‌ ಕಾಂಚನ ಈಶ್ವರ
ಭಟ್ಟರ ನೇತೃತ್ವದಲ್ಲಿ ಸಮ್ಮಾನಿಸಲಾಯಿ ತು. ಸೂರ್ಯಗಾಯತ್ರಿ ತಾಯಿ ಪಿ.ಕೆ. ದಿವ್ಯಾ ಹಾಗೂ ಎಲ್ಲ ಸಹಕಲಾವಿದರನ್ನು ಗೌರವಿಸಲಾಯಿತು. ದಶಾಂಬಿಕೋತ್ಸವ ಸಮಿತಿ ವತಿಯಿಂದ ಸುಬ್ರಹ್ಮಣ್ಯ ನಟ್ಟೋಜ ಹಾಗೂ ರಾಜಶ್ರೀ ಎಸ್‌. ನಟ್ಟೋಜ ದಂಪತಿಯನ್ನು ಗೌರವಿಸಲಾಯಿತು.

ಸಂಗೀತ ಕಾರ್ಯಕ್ರಮವನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹಾಗೂ ಕೋಶಾಧಿಕಾರಿ ರಾಜಶ್ರೀ ಎಸ್‌. ನಟ್ಟೋಜ ದಂಪತಿ ಉದ್ಘಾಟಿಸಿದರು. ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ಸಂಸ್ಕೃತಿ, ಸಂಸ್ಕಾರಗಳ ಸಹಿತವಾದ ಶಿಕ್ಷಣಕ್ಕೆ ನಮ್ಮಆದ್ಯತೆ. ನಮ್ಮ ವಿದ್ಯಾರ್ಥಿಗಳು ಭಾರತೀಯತೆಯನ್ನು ವಿಸ್ತರಿಸುವ ಹಿನ್ನೆಲೆಯಲ್ಲಿ ಸೂರ್ಯಗಾಯತ್ರಿ ಅವರಿಂದ ಪ್ರೇರಣೆ ಪಡೆದು ಕೊಳ್ಳುವಂತಾಗಬೇಕು ಎಂದರು.

Advertisement

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್‌ ಮುಳಿಯ, ಆಡಳಿತ ಮಂಡಳಿ ಸದಸ್ಯರಾದ ಪುರಂದರ ಭಟ್‌, ಸುರೇಶ ಶೆಟ್ಟಿ, ಡಾ| ಎಚ್‌. ಮಾಧವ ಭಟ್‌, ಡಾ| ಎಂ.ಎಸ್‌. ಶೆಣೈ, ಬಾಲಕೃಷ್ಣ ಬೋರ್ಕರ್‌, ಪ್ರಸನ್ನ ಭಟ್‌, ಉದ್ಯಮಿ ಸತ್ಯಶಂಕರ್‌, ಜಿ.ಎಲ್‌. ಆಚಾರ್ಯ ಜುವೆಲರ್ ಮಾಲಕ ಬಲರಾಮ ಆಚಾರ್ಯ, ನಗರಸಭಾ ಸದಸ್ಯ ಜಗನ್ನಿವಾಸ ರಾವ್‌, ವಿಶ್ರಾಂತ ಪ್ರಾಚಾರ್ಯ ವಿ.ಬಿ. ಅರ್ತಿಕಜೆ, ಶಾಲಾ ಪ್ರಾಂಶುಪಾಲೆ ಮಾಲತಿ ಡಿ. ಮೊದಲಾದವರು ಉಪಸ್ಥಿತರಿದ್ದರು.

ದಶಾಂಬಿಕೋತ್ಸವ ಸಮಿತಿ ಅಧ್ಯಕ್ಷ, ಹಿರಿಯ ನ್ಯಾಯವಾದಿ ಮಹೇಶ್‌ ಕಜೆ ವಂದಿಸಿದರು. ಉಪನ್ಯಾಸಕರಾದ ಸತೀಶ್‌ ಇರ್ದೆ, ಅಕ್ಷತಾ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next