Advertisement

14ರಿಂದ ಅಂಬಿಗರ ಚೌಡಯ್ಯ ಶರಣ ಸಂಸ್ಕೃತಿ ಉತ್ಸ ವ

09:14 PM Jan 05, 2022 | Team Udayavani |

ಬ್ಯಾಡಗಿ: ಪ್ರತಿ ವರ್ಷದ ಪದ್ಧತಿಯಂತೆ ಪ್ರಸಕ್ತ ವರ್ಷ ನಿಜಶರಣ ಅಂಬಿಗರ ಚೌಡಯ್ಯನವರ 4ನೇ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮಗಳು ಜ.14 ಮತ್ತು 15 ರಂದು ಎರಡು ದಿನಗಳ ಕಾಲ ಸುಕ್ಷೇತ್ರ ಹಾವೇರಿ ತಾಲೂಕಿನ ನರಸೀಪುರದಲ್ಲಿ ಬಹು ವಿಜೃಂಭಣೆಯಿಂದ ನಡೆಯಲಿವೆ ಎಂದು ಅಂಬಿಗರ ಚೌಡಯ್ಯ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಶ್ರೀಗಳು ಹೇಳಿದರು.

Advertisement

ಪಟ್ಟಣದ ಗಂಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 12ನೇ ಶತಮಾನದ ಶಿವಶರಣರಿಗೆ ತಮ್ಮ ದೋಣಿ ಮೂಲಕ ಅನುಭವ ಮಂಟಪಕ್ಕೆ ಸಾಗಿಸುವ ಕಾಯಕ ಮಾಡುತ್ತಿದ್ದ ನಿಜ ಶರಣ ಅಂಬಿಗರ ಚೌಡಯ್ಯನವರು, ತಮ್ಮ ಹರಿತವಾದ ವಚನಗಳ ಮೂಲಕ ಮೂಢನಂಬಿಕೆ, ಕಂದಾಚಾರ ತೊಲಗಿಸಲು ಪ್ರಯತ್ನಿಸಿದ್ದಾರೆ.

ಅವರ ಅನುಯಾಯಿ ಗಂಗಾಮತ ಸಮಾಜವನ್ನು 39 ಪರ್ಯಾಯ ಪದಗಳಿಂದ ಸಂಬೋಧಿಸಲಾಗುತ್ತಿದೆ. ಆದರೆ ಏಕೈಕ ಗುರುಪೀಠವಾದ ನರಸೀಪುರದಲ್ಲಿ ಇವರನ್ನು ಸ್ಮರಿಸಿಕೊಳ್ಳುವ ಕೆಲಸ ನಡೆಯಲಿದೆ ಎಂದು ಹೇಳಿದರು. ಕಾರ್ಯಕ್ರಮದ ಅಂಗವಾಗಿ ನಿಜಶರಣ ಅಂಬಿಗರ ಚೌಡಯ್ಯನವರ 902ನೇ ಜಯಂತ್ಯುತ್ಸವ ಸೇರಿದಂತೆ ವಚನ ಗ್ರಂಥ ಮಹಾ ರಥೋತ್ಸವ, ಲಿಂ. ಪೂಜ್ಯ ಶಾಂತಮುನಿ ಮಹಾಸ್ವಾಮಿಗಳವರ 6ನೇ ಸ್ಮರಣೋತ್ಸವ, ಜಗದ್ಗುರು ಪೂಜ್ಯ ಶಾಂತಭೀಷ್ಮ ಚೌಡಯ್ಯ ಶ್ರೀಗಳ 5ನೇ ಪೀಠಾರೋಹಣ, ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮ ಸೇರಿದಂತೆ ಎರಡು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿ ಸುವಂತೆ ಮನವಿ ಮಾಡಿದರು.

ಸಭೆಯಲ್ಲಿ ಗಂಗಾಮತ ಸಮಾಜದ ಜಿಲ್ಲಾಧ್ಯಕ್ಷ ಮಂಜುನಾಥ ಬೋವಿ, ತಾಲೂಕು ಅಧ್ಯಕ್ಷ ಯಲ್ಲಪ್ಪ ಓಲೇಕಾರ, ಮಂಜುನಾಥ ಶಿಡಗನಾಳ, ಯೋಗರಾಜ್‌, ಹೊನ್ನಪ್ಪ ಸಣ್ಣಬಾರ್ಕಿ, ಚಂದ್ರು ಮುಳಗುಂದ, ಶಂಕರ ಬಾರ್ಕಿ, ಚಂದ್ರಪ್ಪ ದೊಡ್ಮನಿ, ನಿಂಗಪ್ಪ ಹೆಗ್ಗಣ್ಣನವರ, ಜೀತೇಂದ್ರ ಸುಣಗಾರ, ಮಂಜಪ್ಪ ಬಾರ್ಕಿ, ಜಯಪ್ಪ ಸುಣಗಾರ ಇನ್ನಿತರರಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next