Advertisement

ಶಿಕ್ಷಣದಿಂದ ಪ್ರಬುದ್ಧ  ಸಮಾಜ ನಿರ್ಮಾಣ

11:49 AM Mar 02, 2019 | Team Udayavani |

ಚಿತ್ತಾಪುರ: ಸಮಾಜದ ಪ್ರತಿಯೊಬ್ಬ ಪ್ರಜೆಯೂ ಸಾಮಾಜಿಕ ಹಾಗೂ ಆರ್ಥಿಕ ಸ್ಥಿರತೆ ಹೊಂದಿದಾಗ ಮಾತ್ರ ಸಮಾಜ ಕಲ್ಯಾಣವಾಗುತ್ತದೆ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

Advertisement

ಪಟ್ಟಣದ ನಾಗಾವಿ ದೇವಸ್ಥಾನದ ಹತ್ತಿರ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಅಂಬಿಗರ ಚೌಡಯ್ಯ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು, ಸಮಾಜದ ಜನರಲ್ಲಿ ಅರಿವು ಬರಬೇಕಾದರೆ ಶಿಕ್ಷಣ ಅವಶ್ಯಕ. ಹೀಗಾಗಿ ರಾಜ್ಯದಲ್ಲಿ 820 ಆಂಗ್ಲ ಮಾಧ್ಯಮ ವಸತಿ ಶಾಲೆಗಳನ್ನು ಪ್ರಾರಂಭಿಸಲಾಗಿದೆ ಮತ್ತು 3200 ವಸತಿ ನಿಲಯಗಳು ನಡೆಯುತ್ತಿವೆ ಇದರ ಲಾಭವನ್ನು 10ಲಕ್ಷಕ್ಕಿಂತ ಹೆಚ್ಚು ಮಕ್ಕಳು ಪಡೆಯುತ್ತಿದ್ದಾರೆ. ಶಿಕ್ಷಣದಿಂದ ಮಾತ್ರ ಪ್ರಬುದ್ಧ ಸಮಾಜ ನಿರ್ಮಾಣವಾಗಲು ಸಾಧ್ಯ. ಹೀಗಾಗಿ ಎಲ್ಲರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಪ್ರಾಮಾಣಿಕತೆಯಿಂದ ಮಾಡುತ್ತಿದ್ದೇನೆ ಎಂದು ಹೇಳಿದರು.

ತಾಲೂಕಿನಲ್ಲಿ ಎಲ್ಲ ಸಮಾಜಗಳನ್ನು ಸಮಾನವಾಗಿ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಬಸವ ಭವನ, ಕನಕ ಭವನ, ಜಗಜೀವನರಾಂ ಭವನ, ವಾಲ್ಮೀಕಿ ಭವನ, ಅಂಬಿಗರ ಚೌಡಯ್ಯ ಭವನ, ಸೇವಾಲಾಲ್‌ ಭವನಗಳನ್ನು ನಿರ್ಮಾಣ ಮಾಡುವ ಮೂಲಕ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದೇನೆ ಎಂದರು.

ಖರ್ಗೆ ಅವರು ಕೋಲಿ ಸಮಾಜಕ್ಕೆ ಯಾವುದೇ ಅಭಿವೃದ್ಧಿ ಮಾಡಿಲ್ಲ, ಕಡೆಗಣಿಸಿದ್ದಾರೆ ಎಂದು ಹೇಳಿದ್ದ ಮಾಜಿ ಸಚಿವ ಬಾಬುರಾವ ಚಿಂಚನಸೂರ ಮಾತಿಗೆ, ನಾನು ಕೋಲಿ ಸಮಾಜದ ತೊನಸನಳ್ಳಿಯ ಅಲ್ಲಮ್ಮಪ್ರಭು ಮಠಕ್ಕೆ ಒಂದು ಕೋಟಿ, ಜಿಲ್ಲಾ ಕೇಂದ್ರ ಚೌಡಯ್ಯ ಭವನಕ್ಕೆ 4 ಕೋಟಿ, ಚೌಡದಾನಾಪುರ ಮಠಕ್ಕೆ 3 ಕೋಟಿ, ಮಾತಾಮಾಣಿಕೇಶ್ವರಿ ಕ್ಷೇತ್ರಕ್ಕೆ 50ಲಕ್ಷ, ಈಗ ತಾಲೂಕು ಕೇಂದ್ರ ಸ್ಥಾನದಲ್ಲಿ ಚೌಡಯ್ಯ ಭವನಕ್ಕೆ 2 ಕೋಟಿ ಅನುದಾನ ನೀಡಿದ್ದೇನೆ. ಇದು ನಿಮ್ಮಿಂದ ಏಕೆ ಆಗಲಿಲ್ಲ ಎಂದು ಪ್ರಶ್ನಿಸಿದರು.

ಜನರು ನನ್ನ ಜೇಬಿನಲ್ಲಿ ಇದ್ದಾರೆ ಎಂದು ತಿಳಿದುಕೊಂಡರೆ ಅದು ಮೂರ್ಖತನ. ಸಮಾಜದಲ್ಲಿ ಪ್ರತಿಯೊಬ್ಬರೂ ಸ್ವಾಭಿಮಾನದಿಂದ ಬದುಕಬೇಕು. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸ್ಥಿರತೆಯನ್ನು ಕಂಡುಕೊಳ್ಳುವ ಕೆಲಸ ಪ್ರಾಮಾಣಿಕತೆಯಿಂದ ಮಾಡುತ್ತಿದ್ದೇನೆ ಎಂದು ತಿರುಗೇಟು ನೀಡಿದರು. ಕಳೆದ ಅವ ಧಿಯಲ್ಲಿ ರೈತರ 8500 ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ. ಈ ಮೈತ್ರಿ ಸರ್ಕಾರದಲ್ಲಿಯೂ 48000 ರೈತರ ಸಾಲ ಮನ್ನಾ ಯಶಸ್ವಿಯಾಗಿದೆ. ಆದರೆ ಕೇಂದ್ರದಿಂದ ಯಾವುದೇ ಸಹಕಾರ ಸಿಗುತ್ತಿಲ್ಲ. ತೊಗರಿ ಹೊರದೇಶಗಳಿಂದ ಆಮದು ಮಾಡಿಕೊಳ್ಳುವ ಮೂಲಕ ಈ ಭಾಗದ ರೈತರಿಗೆ ಅನ್ಯಾಯ ಮಾಡಿದ್ದ ಕೇಂದ್ರ ಸರ್ಕಾರದ ಯಾವುದೇ ಯೋಜನೆಗಳು ಅನುಷ್ಠಾನಗೊಂಡಿಲ್ಲ ಮತ್ತು ಜನರಿಗೆ ಯಾವುದೇ ಲಾಭ ದೊರಕಿಲ್ಲ ಎಂದು ಹೇಳಿದರು.

Advertisement

ತೋನಸನಳ್ಳಿ ಶ್ರೀ ಮಲ್ಲಣ್ಣಪ್ಪ ಮಹಾಸ್ವಾಮೀಜಿ, ಸಿಂದಗಿಯ ಶ್ರೀ ಶಾಂತಗಂಗಾಧರ ಸ್ವಾಮೀಜಿ, ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು, ಅಶೋಕ ಬಸ್ತಿ ಹಾವೇರಿ, ಕಾಂಗ್ರೆಸ್‌ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ಸಾಲಿ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಮಾತನಾಡಿದರು. ಬ್ಲಾಕ್‌ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ವಾಡಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹೇಮೂದ್‌ ಸಾಹೇಬ್‌, ಜಿಪಂ ಸದಸ್ಯರಾದ ಶಿವರುದ್ರ ಭೀಣಿ, ಶಿವಾನಂದ ಪಾಟೀಲ, ಮಾಜಿ ಅಧ್ಯಕ್ಷ ರಮೇಶ ಮರಗೋಳ, ತಾಪಂ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ, ಹರಿನಾಥ ಚವ್ಹಾಣ, ಶಿವರೆಡ್ಡಿ ನಾಲವಾರ, ಹಣಮಂತ ಸಂಕನೂರ್‌, ಡಾ| ಪ್ರಭುರಾಜ ಕಾಂತಾ, ವೀರಣ್ಣಗೌಡ ಪರಸರೆಡ್ಡಿ, ರಾಜಗೋಪಾಲರೆಡ್ಡಿ ಮತ್ತಿತರರು ಇದ್ದರು. ಜಯಪ್ರಕಾಶ ಕಮಕನೂರ ಸ್ವಾಗತಿಸಿದರು. ವಕ್ತಾರ ಬಸವರಾಜ ಚಿನ್ನಮಳ್ಳಿ ನಿರೂಪಿಸಿ, ವಂದಿಸಿದರು.

ಕಲಬುರಗಿಯಲ್ಲೂ ಬುಕ್‌
 ಪ್ರತಿ ಚುನಾವಣೆ ಬಂದಾಗ ಹೊಸ ಸ್ಲೋಗನ್‌ ಹೇಳುವ ಪರಿಪಾಟ ಮಾಡಿಕೊಂಡ ಬಿಜೆಪಿಯರು ಈ ಬಾರಿ ಸಾಫ್‌ ನಿಯತ್ತ್ ಸಹಿ ವಿಕಾಸ ಎಂದು ಹೇಳುತ್ತಾರೆ. ಸಾಫ್‌ ನಿಯತ್ತ್ ಎಲ್ಲಿದೇ ಹೇಳಲಿ ನೋಡೋಣಾ? ಸಾಫ್‌ ನಿಯತ್ತ್ಇದ್ದವರು ಮೈತ್ರಿ ಸರ್ಕಾರಕ್ಕೆ ಏಕೆ ತೊಂದರೆ ಕೊಡುತ್ತಿದ್ದಾರೆ. ಹಣ ಮತ್ತು ತೋಳ್ಬಲದಿಂದ ಶಾಸಕರನ್ನು ಖರೀದಿ ಮಾಡುತ್ತಿರುವುದು ಸಾಫ್‌ ನಿಯತ್ತಾ? ಸ್ಪೀಕರ್‌ ಮತ್ತು ಜಡ್ಜ್ ಗಳನ್ನು ಬುಕ್‌ ಮಾಡುವ ಬಿಜೆಪಿಯವರು ಕಲಬುರಗಿಯಲ್ಲಿಯೂ ಒಬ್ಬರನ್ನು ಬುಕ್‌ ಮಾಡಿದ್ದಾರೆ. ಜಿಲ್ಲೆಯ ಬಿಜೆಪಿಯಲ್ಲಿ ಮೂಲ ನಾಯಕರ ಕಾಟ ನಿಂತಿದೆ. ಡುಬ್ಲಿಕೇಟ್‌ ಗಳ ಹಾವಳಿ ಹೆಚ್ಚಾಗಿದೆ. ಹೀಗಾಗಿ ಬಿಜೆಪಿಯಲ್ಲಿಯೂ ಅಸಮಾಧಾನ ಮನೆ ಮಾಡಿದೆ.
. ಪ್ರಿಯಾಂಕ್‌ ಖರ್ಗೆ,
ಸಮಾಜ ಕಲ್ಯಾಣ ಇಲಾಖೆ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next