Advertisement

ನಿಜಶರಣ ಅಂಬಿಗರ ಚೌಡಯ್ಯ ಸ್ಮರಣೆ

03:55 PM Jan 22, 2021 | Team Udayavani |

ಕಲಬುರಗಿ: ಮಹಾನಗರ ಸೇರಿ ಜಿಲ್ಲಾದ್ಯಂತ ಗುರುವಾರ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು. ಜಿಲ್ಲಾಡಳಿತ, ಸಂಘ-ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳ ಕಚೇರಿಯಲ್ಲಿ ಆಚರಿಸಲಾಯಿತು. ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅಂಬಿಗರ ಚೌಡಯ್ಯ ಜಯಂತಿಯನ್ನು ಕೊರೊನಾ ಮಾರ್ಗಸೂಚಿಗಳ ಪ್ರಕಾರ ಆಚರಿಸಲಾಯಿತು. ಅಪರ ಡಿಸಿ ಡಾ| ಶಂಕರ ವಣಿಕ್ಯಾಳ ಚೌಡಯ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

Advertisement

ಕನ್ನಡ ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಕೃಷ್ಣಾ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ಮುಖಂಡರಾದ ಶಿವಶರಣಪ್ಪ ಕೋಬಾಳ, ಲಚ್ಚಪ್ಪ ಜಮಾದಾರ, ಡಾ| ಮಲ್ಲಿಕಾರ್ಜುನ ಮುಕ್ಕಾ, ಶಿವಶರಣಪ್ಪ ಬೆಣ್ಣೂರ, ಅಭಿಷೇಕ ರೆಡ್ಡಿ, ಮಹೇಶ ಶಿವಣಗಿ, ಮಲ್ಲಿಕಾರ್ಜುನ ನಾಯ್ಕೋಡಿ, ವಸಂತ ನರಬೋಳ, ಕೃಷ್ಣ ನಾಯ್ಕೋಡಿ, ಶಿವು ಏಣಿ, ಶಾಂತಪ್ಪ ಕೂಡಿ ಇದ್ದರು.

ಬಿಜೆಪಿ ಕಚೇರಿಯಲ್ಲಿ ಒಬಿಸಿ ಮೋರ್ಚಾ ಹಾಗೂ ದಕ್ಷಿಣ ಮಂಡಲ ವತಿಯಿಂದ ಚೌಡಯ್ಯ ಜಯಂತಿ ಆಚರಿಸಲಾಯಿತು. ಪಕ್ಷದ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ನಗರಾಧ್ಯಕ್ಷ ಸಿದ್ದಾಜಿ ಪಾಟೀಲ, ಪ್ರಧಾನ ಕಾರ್ಯದರ್ಶಿ ಮಹಾದೇವ ಬೆಳಮಗಿ, ಕೃಷ್ಣಾ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ರಾಮಚಂದ್ರ ಗುಮ್ಮುಟ, ರಮೇಶ ಗುತ್ತೇದಾರ, ಮಲ್ಲಿಕಾರ್ಜುನ, ಮಹೇಶ ರೆಡ್ಡಿ, ಸಂಗು ಮನ್ನಳ್ಳಿ, ಡಾ| ಶಂಭುಲಿಂಗ ಪಾಟೀಲ, ವಿಜಯಲಕ್ಷ್ಮಿ ಗೊಬ್ಬೂರಕರ್‌,
ಶೋಭಾ ಭಾಗೆವಾಡಿ, ಚಂದ್ರಕಲಾ ಮಾನು, ಮಾಯಾ ಕಾಂಬಳೆ, ಕಸ್ತೂರಿ ಮಠ, ಶಾರದಾ ಕಾಂಬಳೆ, ಶ್ರೀಕಾಂತ ಆಲೂರ, ಲಿಂಗರಾಜ ಕಣ್ಣಿ, ಶಿವಶರಣಪ್ಪ ಕವಲಗಿ ಇದ್ದರು.

ಜೆಡಿಎಸ್‌ ಕಚೇರಿಯಲ್ಲಿ ಚೌಡಯ್ಯನವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಪಕ್ಷದ ಮಹಾ ಪ್ರಧಾನ ಕಾರ್ಯದರ್ಶಿ ಶಾಮರಾವ ಸೂರನ್‌, ಮಹಮದ್‌ ಅಲಿಂ ಇನಾಂದಾರ, ಮನೋಹರ ಪೋದ್ದಾರ, ಶಂಕರ ಕಟ್ಟಿ ಸಂಗಾವಿ, ಗುರುನಾಥ ಪೂಜಾರಿ, ಶಿವಲಿಂಗಪ್ಪ ಪಾಟೀಲ, ಮಾಣಿಕ ಶಾಪೂರಕರ್‌, ಪಾರ್ವತಿ ಪುರಾಣಿಕ, ಸುನೀತಾ ಕೋರವಾರ ಪಾಲ್ಗೊಂಡಿದ್ದರು.

ಶಾಹಬಜಾರ ನಾಕಾನಲ್ಲಿ ಅಂಬಿಗರ ಚೌಡಯ್ಯನವರ ಜಯಂತಿ ಅಂಗವಾಗಿ ಕೃಷ್ಣಾ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಮಾಡಿದರು. ಬಸವರಾಜ ಬಿದನೂರ, ಶಾಂತಪ್ಪ ಕೂಡಿ ಇದ್ದರು. ಬ್ರಹ್ಮಪುರ ಬಡಾವಣೆ: ಶ್ರೀ ಚೌಡೇಶ್ವರ ವಿದ್ಯಾವರ್ಧಕ ಸಂಘದ ಶಾಲೆ ಯಲ್ಲಿ ಚೌಡಯ್ಯ ಜಯಂತಿ ಆಚರಿಸಲಾಯಿತು. ಸಂಘದ ಅಧ್ಯಕ್ಷೆ ಡಾ| ಇಂದಿರಾ ಶಕ್ತಿ, ವಿಜಯಕುಮಾರ ಶಹಾಬಾದ್‌, ಶಿವಪ್ಪ ನಾಯಿಕೋಡಿ, ರಾಣೇಶ, ಶರಣಪ್ಪ ಹಳ್ಳಿ, ದತ್ತಪ್ಪ ಮಿಣಜಗಿ ಇದ್ದರು.

Advertisement

ಅಪರೂಪದ ಶರಣ ಚೌಡಯ್ಯ
ಕಲಬುರಗಿ: ಸಮಾಜದ ಅಂಕು-ಡೊಂಕುಗಳನ್ನು ತಿದ್ದಲು ಪ್ರಯತ್ನಿಸಿದ ಅಪರೂಪದ ಶರಣ ಅಂಬಿಗರ ಚೌಡಯ್ಯನವರು ಎಂದು ಅನನ್ಯ ಪದವಿ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದ ಅಧ್ಯಕ್ಷೆ ಸುಷ್ಮಾವತಿ ಎಸ್‌. ಎಚ್‌. ಹೇಳಿದರು. ಮಹಾವಿದ್ಯಾಲಯದಲ್ಲಿ ಗುರುವಾರ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ ಅವರು, 12ನೇ ಶತಮಾನದ ವಚನಕಾರ ಬಸವಾದಿ ಶಿವಶರಣರ ಮಹಾಕ್ರಾಂತಿಯಲ್ಲಿ ಹೊರಹೊಮ್ಮಿದ ಚೌಡಯ್ಯನವರು ದಿಟ್ಟ ನಡೆ ನುಡಿ ಹೊಂದಿದ್ದರು. ನಿಷ್ಠುರ ವಚನಗಳ ಮೂಲಕ ಶಿವಶರಣರರಿಂದ ಲೇವೀರಗಣಾಚಾರಿ ಎಂದು ಕರೆಯಿಸಿಕೊಂಡವರು ಎಂದು ಹೇಳಿದರು. ಪ್ರಾಂಶುಪಾಲ ಶರಣಪ್ಪ ಬಿ.ಎಚ್‌., ಇಂದುಮತಿ ಪಾಟೀಲ, ರೇಣುಕಾ, ಸುಜಾತ, ಸುಧಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next