Advertisement

ವರ್ಷದೊಳಗೆ ಅಂಬಿಗರ ಚೌಡಯ್ಯ ವಚನಗಳ ಸಂಪುಟ

10:37 AM Jan 22, 2018 | |

ಬೆಂಗಳೂರು: ನಿಜಶರಣ ಅಂಬಿಗರ ಚೌಡಯ್ಯ ರಚಿಸಿರುವ ವಚನಗಳನ್ನು ಕ್ರೋಢೀಕರಿಸಿ ಸರ್ಕಾರದಿಂದಲೇ ಸಮಗ್ರ ಸಂಪುಟ
ಪ್ರಕಟಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್‌.ಆರ್‌. ವಿಶುಕುಮಾರ್‌ ಹೇಳಿದ್ದಾರೆ.

Advertisement

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಉದ್ಘಾಟಿಸಿ ಮಾತನಾಡಿ, ಅಂಬಿಗರ
ಚೌಡಯ್ಯ ಸಾವಿರಕ್ಕೂ ಅಧಿಕ ವಚನಗಳನ್ನು ರಚಿಸಿದ್ದು, ಅದರಲ್ಲಿ 350ಕ್ಕೂ ಅಧಿಕ ವಚನಗಳು ಲಭ್ಯವಿದೆ. ಸುಮಾರು 500 ವಚನಗಳನ್ನು ಕ್ರೋಢೀಕರಿಸಿ, ಒಂದು ವರ್ಷದೊಳಗೆ ಸಮಗ್ರ ಸಂಪುಟವನ್ನು ಪ್ರಕಟಿಸಲಾಗುವುದು. ಅಂಬಿಗರ ಚೌಡಯ್ಯರ ಆಧ್ಯಾತ್ಮಿಕ ಮತ್ತು ವೈಚಾರಿಕ ಚಿಂತನೆಗಳನ್ನು ದಾಖಲಿಸಲಾಗುವುದು. ಇದಕ್ಕಾಗಿ ಅಂಬಿಗರ ವಚನದ ಬಗ್ಗೆ ಅಧ್ಯಯನ ಮಾಡಿದವರ ಸಭೆ ಕರೆದು ಚರ್ಚೆ ಮಾಡಲಿದ್ದೇವೆ ಎಂದರು.

ಅಂಬಿಗರ ಚೌಡಯ್ಯನವರು ಹೇಳಿದಂತೆ ಆಂತರ್ಯದಲ್ಲಿ ಕೀಳು ಭಾವನೆ ಬಿಟ್ಟು, ಸ್ವಾಭಿ ಮಾನದಿಂದ ಬದುಕಬೇಕು. ಅಂಬಿಗರ ಚೌಡಯ್ಯನವರು ಸಮಾಜದ ತೊಡಕನ್ನು ನಿರ್ಭೀತವಾಗಿ ಗಟ್ಟಿತನದಿಂದ ಹೇಳಿದ್ದಾರೆ ಎಂದು ತಿಳಿಸಿದರು. ಹಾವೇರಿ ನರಸೀಪುರದ ನಿಜಶರಣ ಅಂಬಿಗರ ಚೌಡಯ್ಯ ಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಮಾತನಾಡಿ, ಹೆಣ್ಣು, ಹೊನ್ನು ಮತ್ತು ಮಣ್ಣಿಗಾಗಿ ಜಗತ್ತಿನಾದ್ಯಂತ ಕ್ರಾಂತಿ ನಡೆದಿದೆ ಎಂದು ತಿಳಿಸಿದರು. ಕಾರ್ಯ ಕ್ರಮಕ್ಕೂ ಮುನ್ನ, ಜಯಂತಿಯ ಅಂಗವಾಗಿ ಸ್ವಾತಂತ್ರ್ಯ ಉದ್ಯಾನವನದಿಂದ ರವೀಂದ್ರಕಲಾ ಕ್ಷೇತ್ರದ ವರೆಗೆ ಮೆರವಣಿಗೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next