Advertisement

ಅಂಬಿ ಕಂಡು ಬಿಕ್ಕಿ ಬಿಕ್ಕಿ ಅತ್ತ ಮೋಹನ್‌ಬಾಬು

11:40 AM Nov 26, 2018 | |

ತೆಲುಗು ನಟ ಮೋಹನ್‌ಬಾಬು ಮತ್ತು ಅಂಬರೀಷ್‌ ಅವರ ಗೆಳೆತನ ಹಲವು ದಶಕಗಳದ್ದು. ಅಂಬರೀಷ್‌ ಅವರ ಮನೆಯ ಯಾವುದೇ ಸಮಾರಂಭವಿರಲಿ, ಅಲ್ಲಿ ಮೋಹನ್‌ಬಾಬು ಹಾಜರಾಗುತ್ತಿದ್ದರು. ಪರಸ್ಪರ ಅದೆಷ್ಟೋ ಖುಷಿಯ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರು.

Advertisement

ಅಂಬರೀಷ್‌ ಅವರ ಗೆಳೆತನ ಬಗ್ಗೆ ಸಾಕಷ್ಟು ಸಲ ಹೇಳಿಕೊಳ್ಳುತ್ತಿದ್ದ ಮೋಹನ್‌ಬಾಬು, ಇಂದು ಅಂಬರೀಷ್‌ ಅವರ ಮುಖ ನೋಡುತ್ತಿದ್ದಂತೆಯೇ, ಬಿಕ್ಕಿ ಬಿಕ್ಕಿ ಅತ್ತರು. ದುಃಖ ತಡೆಯಲಾರದೆ, ಅಂಬರೀಷ್‌ ಅವರ ಪುತ್ರ ಅಭಿಷೇಕ್‌ ಅವರನ್ನು ತಬ್ಬಿ ಜೋರಾಗಿ ಅಳುವ ಮೂಲಕವೇ ಅಭಿಷೇಕ್‌ ಅವರಿಗೆ ಸಾಂತ್ವನ ಹೇಳಿದರು.

ಕ್ಷಣಕಾಲ ಮೌನಗೊಂಡು, ಅಂಬರೀಷ್‌ ಅವರ ಮುಖವನ್ನೇ ದಿಟ್ಟಿಸಿ ನೋಡುತ್ತಿದ್ದರು. ತಮ ಹಿಂದಿನ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಮೋಹನ್‌ಬಾಬು, ಒಳ್ಳೆಯ ಹೃದಯವಂತನನ್ನು ಕಳೆದುಕೊಂಡೆ ಎಂದು ದುಃಖ ತೋಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next