Advertisement

ಸೈಯದ್‌ ಚಿಂಚೋಳಿಯಲ್ಲಿ ಅಂಬೇಡ್ಕರ್‌ ಪುತ್ಥಳಿ

10:45 AM Jan 27, 2018 | Team Udayavani |

ಕಲಬುರಗಿ: ತಾಲೂಕಿನ ಸೈಯದ್‌ ಚಿಂಚೋಳಿ ಗ್ರಾಮದ ಜೈ ಭೀಮ ಕಾಲೋನಿಯಲ್ಲಿ ಗಣರಾಜ್ಯೋತ್ಸವ ದಿನದಂದು ಸಂವಿಧಾನ ಶಿಲ್ಪಿ ಡಾ| ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ ಪಂಚಲೋಹದ ಪುತ್ಥಳಿಯನ್ನು ಶ್ರೀಗುರು ವಿದ್ಯಾಪೀಠದ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಡಿಗ್ಗಾಂವಿ ಅನಾವರಣಗೊಳಿಸಿದರು.

Advertisement

ನಂತರ ಮಾತನಾಡಿದ ಅವರು ಭಾರತ ದೇಶದಲ್ಲಿರುವ ವಿವಿಧ ಜಾತಿ, ಧರ್ಮದವರಿಗೆ ಸಮಾನವಾಗಿ ಬಾಳಲು ಹಾಗೂ ಪ್ರಜೆಗಳೆ ಪ್ರಭುಗಳು ಎಂಬ ಸಂವಿಧಾನವನ್ನು ಬರೆದ ಡಾ| ಬಾಬಾ ಸಾಹೆಬ್‌ ಅಂಬೇಡ್ಕರ್‌ ಅವರ ಆಶಯದಂತೆ ಸರಕಾರ ಹಾಗೂ ಅದರ ಯೋಜನೆಗಳು ನಡೆದು ಎಲ್ಲರಿಗೂ ದೊರಕಬೇಕಾಗಿದೆ ಎಂದರು.

ಪ್ರತಿಭೆಗೆ ಬಡವ ಶ್ರೀಮಂತ ಎನ್ನುವ ಬೇಧ ಭಾವವಿಲ್ಲ. ಆದರೆ ಕಾಣದ ಕೈಗಳಿಂದ ಇಂದು ಸಿಗಬೇಕಾದ ಅವಕಾಶಗಳು ಬಡ ಮಕ್ಕಳ ಕೈತಪ್ಪಿ ಅವುಗಳು ಮರೀಚಿಕೆಯಾಗಿ ಉಳಿಯುತ್ತಿವೆ ಎಂದು ಖಳವಳ ವ್ಯಕ್ತಪಡಿಸಿದರು.

ಇದೆ ವೇಳೆ ಪ್ರತಿಭಾವಂತ ಸಂದೀಪ ಬೆಳಮಗಿ ಎನ್ನುವ ಬಡ ವಿದ್ಯಾರ್ಥಿಯ ಉನ್ನತ ಶಿಕ್ಷಣದ ಖರ್ಚು ವೆಚ್ಚ ತಾವೇ ಸಂಪೂರ್ಣವಾಗಿ ಭರಿಸುವುದಾಗಿ ಪ್ರಕಟಿಸಿದರು. ದಲಿತ ಹಿರಿಯ ಮುಖಂಡ ಡಾ| ವಿಠ್ಠಲ ದೊಡ್ಡಮನಿ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಗ್ಲೋಬಲ್‌ ವಾಯ್‌ ಆಫ್‌ ಲೈಫ್‌ ಮೆಡಿಟೇಷನ್‌ ಮಾಸ್ಟರ್‌ನ ಭಂತೆ ಮಾತಾ ಮೈತ್ರಿ, ಪ್ರಾಧ್ಯಾಪಕ ಆಯ್‌.ಎಸ್‌. ವಿದ್ಯಾಸಾಗರ ಮಾತನಾಡಿದರು.
 
ಮುಖಂಡರಾದ ಮಲ್ಲಿಕಾರ್ಜುನ ಖೇಮಜಿ, ಶಿವರಾಜ ಡಿಗ್ಗಾಂವಿ, ಪ್ರಮೀಳಾಬಾಯಿ ಡಿಗ್ಗಾಂವಿ, ದಲಿತ ಸೇನೆ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ, ಗ್ರಾಮೀಣ ಪೊಲೀಸ ಠಾಣೆ ಸಿಪಿಐ ವಾಜೀದ್‌ ಪಟೇಲ್‌, ಪಿಎಸ್‌ ಐ ಚಂದ್ರಶೇಖರ ತಿಗಡಿ, ಮುಖಂಡರಾದ ಅರ್ಜುನ ಭದ್ರೆ, ಸರ್ಜುನ ಗೋಬ್ಬುರ್‌, ರಾಜಕುಮಾರ ಎಚ್‌. ಕಪನೂರ, ಮಲ್ಲಿಕಾರ್ಜುನ ಗಾಯಕವಾಡ್‌, ಪವನಕುಮಾರ ವಳಕೇರಿ, ಅಂಬಾರಾಯ ಮಹಾಮನಿ, ಭವಾನಿಕುಮಾರ ವಳಕೇರಿ, ಅನೀತಾ ವಳಕೇರಿ, ಬಾಬು ಸಾಗರ, ವಿಜಯಲಕ್ಷ್ಮೀ ಕೋಟೆ, ಶ್ರೀಕಾಂತ ಒಂಟೆ, ಶರಣಬಸಪ್ಪ ಸಂಗೋಳಗಿ, ಮಹಾನಂದಾ
ಮುಗಳನಾಗಾಂವ, ಕಲ್ಯಾಣಿ ಆನಂದ, ವಿಠ್ಠಲ ಗೌಳಿ, ಸರಸ್ವತಿ ಎಲ್‌. ಸಾವಳಗಿ, ಯಶ್ವಂತ ವಾಮನಕರ್‌, ಶರಣು ಎಸ್‌. ಡಾಂಗೆ, ಅವಿನಾಶ ವಾರದ್‌, ಶಂಭುಲಿಂಗ ಡಿಗ್ಗಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next