Advertisement
ಅಫಜಲಪುರ ತಾಲೂಕಿನ ಭೈರಾಮಡಗಿ ಗ್ರಾಮದಲ್ಲಿ ಡಾ| ಬಿ.ಆರ್. ಅಂಬೇಡ್ಕರ್‌ಅವರ ನೂತನ ಪಂಚಲೋಹದ ಪ್ರತಿಮೆ ಅನಾವರಣಗೊಳಿಸಿ ಅವರು ಮಾತನಾಡಿದರು. ಬುದ್ಧ, ಬಸವ, ಅಂಬೇಡ್ಕರ್, ರವೀಂದ್ರನಾಥ ಟ್ಯಾಗೋರ್, ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ಇತರರನ್ನು ಅವರ ವರ್ಗಕ್ಕೆ ಹಾಗೂ ಆಯಾ ಭಾಗಕ್ಕೆ ಸಿಮೀತ ಮಾಡಲಾಗಿದೆ ಎಂದರು.
Related Articles
Advertisement
ಸಮಾಜ ಸೇವಕ ಜೆ.ಎಂ. ಕೊರಬು ಮಾತನಾಡಿ, ಚುನಾವಣೆಯಲ್ಲಿ ಅನ್ಯ ವಿಷಯಗಳತ್ತ ಗಮನ ಕೊಡದೇ ಅಭಿವೃದ್ಧಿ ವಿಷಯಗಳ ಗಮನ ಕೊಟ್ಟಿದ್ದೆಯಾದರೆ ಸರ್ವ ನಿಟಿxನಲ್ಲೂ ಅಭಿವೃದ್ಧಿ ಆಗುತ್ತದೆ ಎಂದರು. ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ ಮಾತನಾಡಿ, ಸರ್ಕಾರ ಅತಿವೃಷ್ಟಿಗೆ ಪರಿಹಾರವಾಗಿ ನಯಾ ಪೈಸೆ ಕೊಟ್ಟಿಲ್ಲ ಎಂದು ಹೇಳಿದರು. ವಿಧಾನ ಪರಿಷತ್ ಮಾಜಿ ಸದಸ್ಯತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ಶೋಷಿತರು ತೀವ್ರ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಕಷ್ಟಕ್ಕೆ ನಾಂದಿ ಹಾಡಬೇಕೆಂದರು.
ಜಿ.ಪಂ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ತಾ.ಪಂ ಉಪಾಧ್ಯಕ್ಷ ಸಿದ್ಧರಾಮ ಹೊನ್ನಿಕೇರಿ, ಶಿವಕುಮಾರ ನಾಟಿಕಾರ, ಮಹಾಂತೇಶ ಪಾಟೀಲ, ಗುರುಶಾಂತ ಪಟ್ಟೇದಾರ, ರಾಜಕುಮಾರ ಕಪನೂರ, ರಾಜೇಂದ್ರ ಪಾಟೀಲ, ಜಿ.ಪಂ ಸದಸ್ಯರಾದ ಶರಣಗೌಡ ಪಾಟೀಲ, ವಿ.ಕೆ. ಸಲಗರ, ದಿಲೀಪ ಪಾಟೀಲ, ಸಿದ್ದರಾಮ ಪ್ಯಾಟಿ, ಶಿವಾನಂದ ಪಾಟೀಲ ಮರತೂರ, ಪ್ರಮುಖರಾದ ಸಿದ್ದಾರ್ಥ ಬಸರಿಗಿಡ, ಪ್ರಕಾಶ ಜಮಾದಾರ, ಡಾ| ಎಂ.ಎಸ್. ಜೋಗದ ಮುಂತಾದವರಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಶರಣ ಗೌಡ ಪಾಟೀಲ ಪ್ರಾಸ್ತಾವಿಕ ಮಾತನಾಡಿ, ಡಾ| ಅಂಬೇಡ್ಕರ್ ಜೀವನ ಚರಿತ್ರೆಯನ್ನು ಎಲ್ಲರೂ ಓದಿ ತಿಳಿದುಕೊಳ್ಳಬೇಕು ಎಂದರು. ಶರಣಬಸಪ್ಪ ಚಕ್ರವರ್ತಿ ನಿರೂಪಿಸಿದರು. ಮಚೇಂದ್ರ ಎಸ್. ಅಳ್ಳಗಿ ನಿರೂಪಿಸಿದರು.