ಕೆ.ಆರ್.ನಗರ: ಸಮಾನತೆಯ ಆಶಯವುಳ್ಳ ಸಂವಿಧಾನ ರಚಿಸಿದ ಅಂಬೇಡ್ಕರ್ ಶೋಷಿತ ವರ್ಗದ ಜನತೆ ವಿದ್ಯಾವಂತರಾಗಿ ಸಮಾಜದಲ್ಲಿ ಉತ್ತಮ ಸ್ಥಾನಮಾನ ಪಡೆಯಬೇಕೆಂಬ ಮಹದಾಸೆ ಹೊಂದಿದ್ದರು ಎಂದು ಹೊಸೂರು ಕೃಷಿ ಪತ್ತಿ ಸಹಕಾರ ಸಂಘದ ಅಧ್ಯಕ್ಷ ಎಚ್.ಆರ್.ಮಹೇಶ್ ಹೇಳಿದರು.
ತಾಲೂಕಿನ ಹಳಿಯೂರು ಬಡಾವಣೆಯಲ್ಲಿ ನಡೆದ ಅಂಬೇಡ್ಕರ್ ಜಯಂತಿ ಹಾಗೂ ಅಂಬೇಡ್ಕರ್ ಯುವಕರ ಸಂಘ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ತತ್ವಾದರ್ಶಗಳು ಕೇವಲ ಒಂದು ವರ್ಗದವರಿಗೆ ಮಾತ್ರ ಸೀಮಿತವಾಗಿಲ್ಲ. ಇಂದಿನ ಯುವ ಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಅಂಬೇಡ್ಕರ್ ಭವನ: ಹಳಿಯೂರು ಬಡಾವಣೆಯ ದಲಿತ ಸಮುದಾಯದವರಿಗೆ ಅಂಬೇಡ್ಕರ್ ಭವನ ನಿರ್ಮಿಸಬೇಕೆಂಬ ಒತ್ತಾಸೆಯನ್ನು ಇಟ್ಟುಕೊಂಡಿದ್ದು, ಈ ಕಾರ್ಯಕ್ಕೆ ಅಗತ್ಯವಾದ ನಿವೇಶನ ಒದಗಿಸಿಕೊಟ್ಟರೆ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರಿಂದ ಹೆಚ್ಚಿನ ಅನುದಾನವನ್ನು ಕೊಡಿಸುವುದರ ಜೊತೆಗೆ ತಾವು ವೈಯಕ್ತಿಕವಾಗಿ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದರು.
ಹಳಿಯೂರು ಗ್ರಾಪಂ ಉಪಾಧ್ಯಕ್ಷ ಎಚ್.ಆರ್.ಕೃಷ್ಣಮೂರ್ತಿ ಮಾತನಾಡಿ, ಅಂಬೇಡ್ಕರ್ ಹೆಸರಿನಲ್ಲಿ ಸಂಘಟನೆ ಆರಂಭಿಸಿದರೆ ಸಾಲದು, ತುಳಿತಕ್ಕೊಳಗಾದವರನ್ನು ಮೇಲೆತ್ತುವ ಕೆಲಸ ಮಾಡಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ವಿದ್ಯಾವಂತರನ್ನಾಗಿಸಿದರೆ ಮಾತ್ರ ಸಂಘ ಸ್ಥಾಪನೆಗೆ ಅರ್ಥ ಬರುತ್ತದೆ ಎಂದರು.
ಎಪಿಎಂಸಿ ಮಾಜಿ ನಿರ್ದೇಶಕ ಎಸ್.ಎಸ್.ಶಿವಸ್ವಾಮಿ, ದಲಿತ ಮುಖಂಡ ಮಹಾಲಿಂಗು, ಹೊಸೂರು ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಎಚ್.ಎಲ್.ಸುದರ್ಶನ್, ಹಳಿಯೂರು ಗ್ರಾಪಂ ಸದಸ್ಯೆ ಮಮತಾ, ಮುಖಂಡರಾದ ಗೋಪಿ, ಸುಬ್ರಹ್ಮಣ್ಯ,
ಯುವಕರ ಸಂಘದ ಅಧ್ಯಕ್ಷ ಮನೋಹರ್‌ಪ್ರಸಾದ್, ಉಪಾಧ್ಯಕ್ಷ ಹೇಮಂತ್‌ಕುಮಾರ್, ಖಜಾಂಚಿ ತೇಜಮೂರ್ತಿ, ಕಾರ್ಯದರ್ಶಿ ಸಂಜಯ್‌ಪ್ರಸಾದ್, ಕ್ರೀಡಾ ಕಾರ್ಯದರ್ಶಿ ದರ್ಶನ್, ನಿರ್ದೇಶಕರಾದ ಆನಂದ್, ನವೀನ, ಸ್ವಾಮಿ, ಶ್ಯಮಂತ್, ಸಂಕೇತ್, ಚಂದನ್‌ಬಾಬು, ಮಧುಸೂದನ್, ಚಂದ್ರೇಶ್, ಸಚಿನ್ ಮತ್ತಿತರರು ಹಾಜರಿದ್ದರು.