Advertisement

“ಸಮಸ್ತರನ್ನೊಳಗೊಂಡ ಸಮಾಜ ನಿರ್ಮಾಣಕ್ಕೆ ಅಂಬೇಡ್ಕರ್‌ ಶ್ರಮ’

07:40 AM Apr 15, 2018 | |

ಉಡುಪಿ: ಸ್ವತಂತ್ರ ಭಾರತದಲ್ಲಿ ಎಲ್ಲ ವರ್ಗದವರನ್ನೊಳಗೊಂಡ ಸಮಾಜ ನಿರ್ಮಾಣಕ್ಕಾಗಿ ಡಾ|  ಬಿ.ಆರ್‌.ಅಂಬೇಡ್ಕರ್‌ ಅವರು ಶ್ರಮಿಸಿ ದ್ದರು. ಅದಕ್ಕಾಗಿ ಅವರು ಕೇವಲ ಹೋರಾಟ ಮಾತ್ರವೇ ಮಾಡದೆ ಮನವೊಲಿಕೆಗೂ ಆದ್ಯತೆ ನೀಡಿದ್ದರು ಎಂದು ಜಿ.ಪಂ. ಸಿಇಒ ಶಿವಾನಂದ ಕಾಪಶಿ ಅಭಿಪ್ರಾಯಪಟ್ಟರು.

Advertisement

ಜಿಲ್ಲಾಡಳಿತ, ಜಿ.ಪಂ., ಸಮಾಜ ಕಲ್ಯಾಣ ಇಲಾಖೆ, ದಲಿತ ಸಂಘಟನೆಗಳ ಆಶ್ರಯದಲ್ಲಿ ಆದಿ ಉಡುಪಿ ಅಂಬೇಡ್ಕರ್‌ ಭವನದಲ್ಲಿ ಶನಿವಾರ ಜರಗಿದ ಡಾ| ಬಿ.ಆರ್‌. ಅಂಬೇಡ್ಕರ್‌ ಅವರ 127ನೇ ಜನ್ಮ ದಿನೋತ್ಸವ ಉದ್ಘಾಟಿಸಿ  ಮಾತನಾಡಿದರು.

ದಲಿತರ ನೋವನ್ನು ದಲಿತೇತರರಿಗೆ ಮನವರಿಕೆ ಮಾಡುವ ಪ್ರಯತ್ನವನ್ನು ಅಂಬೇಡ್ಕರ್‌ ನಡೆಸಿದ್ದರು. ಅವರು ಕೊಟ್ಟಿರುವ ಸಂವಿಧಾನದ ಅಂಶಗಳನ್ನು ಮೈಗೂಡಿಸಿ ದೇಶ ವನ್ನು ಮತ್ತಷ್ಟು  ಪ್ರಗತಿಯತ್ತ ಕೊಂಡೊಯ್ಯಬೇಕಾಗಿದೆ ಎಂದರು.

ಪ್ರಜಾಪ್ರಭುತ್ವಕ್ಕೆ ಭಾರತೀಯತೆ 
ಅಂಬೇಡ್ಕರ್‌ ಅವರ ವ್ಯಕ್ತಿತ್ವ ಮತ್ತು  ಜೀವನದ ಬಗ್ಗೆ ಉಪನ್ಯಾಸ ನೀಡಿದ ಮಂಗಳೂರು ಬೊಕ್ಕಪಟ್ಣ ಸರಕಾರಿ ಪ.ಪೂ. ಕಾಲೇಜಿನ ಉಪನ್ಯಾಸಕ ಡಾ| ವಾಸುದೇವ ಬೆಳ್ಳೆ, 
“ಪ್ರಜಾಪ್ರಭುತ್ವಕ್ಕೆ ಭಾರತೀಯ ತಂದುಕೊಟ್ಟವರಲ್ಲಿ ಅಂಬೇಡ್ಕರ್‌ ಅಗ್ರಗಣ್ಯರು. ಆಧುನಿಕ ಭಾರತದ ಪರಿಕಲ್ಪನೆ  ಸಾಕಾರ ಗೊಳಿಸುವುದಕ್ಕಾಗಿ ಮಹಿಳೆಯರು, ಕಾರ್ಮಿಕರು ಸೇರಿದಂತೆ ಎಲ್ಲರಿಗೂ ಅವಕಾಶ ದೊರೆಯುವಂತೆ ಮಾಡಿದರು. ಅಂಬೇಡ್ಕರ್‌ ಅವರನ್ನು ಸಾಮಾಜಿಕ ನ್ಯಾಯ ಶಿಲ್ಪಿಯನ್ನಾಗಿ ಸ್ವೀಕರಿಸಬೇಕು. ಸಂವಿಧಾನವನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು’ ಎಂದವರು ತಿಳಿಸಿದರು.

ಎಸ್ಪಿ  ಲಕ್ಷ್ಮಣ್‌ ಬ. ನಿಂಬರಗಿ, ನಗರಸಭೆ ಆಯುಕ್ತ ಜಿ.ಸಿ. ಜನಾರ್ದನ, ತಾ.ಪಂ. ಇಒ ಮೋಹನ್‌ರಾಜ್‌, ತಹಶೀಲ್ದಾರ್‌ ಪ್ರದೀಪ್‌ ಕುರುಡೇಕರ್‌, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಸ್‌.ಎನ್‌. ರಮೇಶ್‌ ಇದ್ದರು. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಭುಜಬಲಿ ಪಾಸಾನೆ ಸ್ವಾಗತಿಸಿದರು. ಕೆಎಎಸ್‌ ಪ್ರೊಬೆಷನರಿ ಅಧಿಕಾರಿ ರೇಣುಕಾ ದೇವಿ ಕಾರ್ಯಕ್ರಮ ನಿರೂಪಿಸಿದರು. 

Advertisement

ಮಹಿಳಾ ಸಶಸ್ತೀಕರಣದ ಮೊದಲ ಹೆಜ್ಜೆ
ಮಹಿಳಾ ಸಶಸ್ತೀಕರಣದ ಮೊದಲ ಹೆಜ್ಜೆ ಇಟ್ಟದ್ದು ಅಂಬೇಡ್ಕರ್‌ ಅವರು. ಸಂವಿಧಾನದ 325ನೇ ವಿಧಿಯ ಮೂಲಕ ಮಹಿಳೆಯರಿಗೂ ಮತದಾನದ ಹಕ್ಕು ದೊರೆತು ಸಮಾನತೆ ಬಂತು. ಮಹಿಳೆಯರು ಕೂಡ ಯಾವುದೇ ಆಮಿಷಕ್ಕೆ ಒಳಗಾಗದೆ ಮತದಾನ ಮಾಡಬೇಕು. ಆಗ ಪಾರದರ್ಶಕ ಆಡಳಿತ ದೊರೆತು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲು ಸಾಧ್ಯ.  
– ಪ್ರಿಯಾಂಕ ಮೇರಿ ಫ್ರಾನ್ಸಿಸ್‌, ಜಿಲ್ಲಾಧಿಕಾರಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next