Advertisement

ಮನೆಗಳಲ್ಲೇ ಅಂಬೇಡ್ಕರ್‌ ಜಯಂತಿ ಆಚರಣೆಗೆ ಕರೆ

11:29 PM Apr 13, 2020 | Sriram |

ಬೆಂಗಳೂರು: ಸಂವಿಧಾನ ಶಿಲ್ಪಿ ಡಾ| ಭೀಮ ರಾವ್‌ ಅಂಬೇಡ್ಕರ್‌ ಅವರ 129ನೇ ಜಯಂತಿಯನ್ನು ಕೋವಿಡ್ 19 ಸೋಂಕು ತಡೆ ಹಿನ್ನೆಲೆಯಲ್ಲಿ ಮಂಗಳವಾರ ರಾಜ್ಯ ನಾಯಕರು, ಶಾಸಕರು, ಸಂಸದರು, ಎಲ್ಲ ಕಾರ್ಯಕರ್ತರು ತಮ್ಮ ಮನೆಗಳಲ್ಲೇ ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಆಚರಣೆ ಮಾಡಬೇಕು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಸೂಚಿಸಿದ್ದಾರೆ.

Advertisement

ಅನುಕೂಲಕರ ಸ್ಥಳಗಳಲ್ಲಿ ಕನಿಷ್ಠ ಒಂದು ಗಂಟೆ ಕಾಲ ಅಂಬೇಡ್ಕರ್‌ ಅವರ ಜೀವನ ಚರಿತ್ರೆ, ಅವರ ಬದುಕು, ಸಾಧನೆಗಳ ಕುರಿತ ಪುಸ್ತಕವನ್ನು ಅಧ್ಯಯನ ಮಾಡಬೇಕು. ನಮ್ಮ ಮನೆಗಳಿರುವ ಕ್ಷೇತ್ರದಲ್ಲಿ, ಬೀದಿಯಲ್ಲಿ ಸಾಮಾಜಿಕ ಅಂತರದೊಂದಿಗೆ ಕಾನೂನು, ನಿಯಮಗಳಿಗೆ ಭಂಗವಾಗದಂತೆ ಕೋವಿಡ್ 19 ಮುಕ್ತ ಕ್ಷೇತ್ರಕ್ಕೆ ಸಂಕಲ್ಪ ಮಾಡಬೇಕು ಎಂದು ತಿಳಿಸಿದ್ದಾರೆ.

ಮಂಗಳವಾರ ಸಂಜೆಯೊಳಗೆ ಕಾರ್ಯಕರ್ತರು ತಮ್ಮ ಸಾಮರ್ಥಯಕ್ಕನುಸಾರವಾಗಿ ಬಡವರು, ಕಾರ್ಮಿಕರ ಮನೆಗಳಿಗೆ ತೆರಳಿ ಆಹಾರ ಪೊಟ್ಟಣ, ದಿನಸಿ ಕಿಟ್‌, ಮಾಸ್ಕ್ ತಲುಪಿಸಬೇಕು. ಹಾಗೆಯೇ ಸಂಜೆಯೊಳಗೆ ವೀಡಿಯೋ ಸಂವಾದದ ಮೂಲಕ ಅಂಬೇಡ್ಕರ್‌ ಅವರ ಬಗ್ಗೆ ಭಾಷಣ, ಸಂವಾದ ಕಾರ್ಯಕ್ರಮಗಳನ್ನು ನಡೆಸಬಹುದು ಎಂದು ಅವರು ಕರೆ ನೀಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next