Advertisement

ಅಂಬೇಡ್ಕರ್‌ ಆದರ್ಶ ಪಾಲಿಸಿ

01:25 PM Apr 17, 2017 | Team Udayavani |

ಹೊನ್ನಾಳಿ: ಸಂವಿಧಾನ ಶಿಲ್ಪಿ ಭಾರತರತ್ನ ಡಾ| ಬಿ.ಆರ್‌. ಅಂಬೆಡ್ಕರ್‌ ಅವರು ಪ್ರಬುದ್ಧ ಭಾರತ ನಿರ್ಮಾಣಕ್ಕೆ ಶ್ರಮಿಸಿದ ಮಹಾನ್‌ ಮಾನವತಾವಾದಿ. ಅವರ ವಿಚಾರಧಾರೆಗಳನ್ನು ದೇಶದ ಪ್ರತಿಯೊಬ್ಬ ಪ್ರಜೆಯೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಾಜಿ ಸಚಿವ, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಂ.ಪಿ. ರೇಣುಕಾಚಾರ್ಯ ಹೇಳಿದರು. 

Advertisement

ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಡಾ| ಬಿ.ಆರ್‌. ಅಂಬೆಡ್ಕರ್‌ 126ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ದೂರದೃಷ್ಠಿ ಆಡಳಿತದಲ್ಲಿ ಅಂಬೇಡ್ಕರ್‌ ವಿಚಾರಧಾರೆಗಳನ್ನು ಅಳವಡಿಸಿಕೊಂಡು ದೇಶದ ಮಾನವತಾವಾದಿಗೆ ಅಪ್ರತಿಮ ಗೌರವ ನೀಡಿ ಅವರ ಸಾಧನೆಗಳನ್ನು ಇಂದು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದಿದ್ದಾರೆ.

ಪ್ರಥಮ ಬಾರಿಗೆ ವಿಶ್ವ ಸಂಸ್ಥೆಯಲ್ಲಿ ಡಾ| ಅಂಬೇಡ್ಕರ್‌ ಅವರ ಜನ್ಮ ದಿನವನ್ನು ವಿಶ್ವಜ್ಞಾನ ದಿನವನ್ನಾಗಿ ಆಚಾರಿಸಿರುವುದು ಭಾರತೀಯರಿಗೆಲ್ಲರಿಗೂ ಹೆಮ್ಮೆ ತರುವ ವಿಚಾರ ಎಂದರು. ಇಂದು ಅಂಬೇಡ್ಕರ್‌ ಜನ್ಮದಿನವನ್ನು ದೇಶವಿದೇಶಗಳಲ್ಲಿ ಆಚರಿಸುತ್ತಿದ್ದು, ಅವರ ಆಶಯದಂತೆ ಎಲ್ಲರಿಗೂ ಸಮಾನ ಶಿಕ್ಷಣ ಬದುಕಲು ಸಮಾನ ಅವಕಾಶಗಳನ್ನು ಕಲ್ಪಿಸಿ ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ ಉದ್ದೇಶವಾಗಿದೆ ಎಂದರು. 

ಅಂಬೇಡ್ಕರ್‌ ಯುವಕ ಸಂಘದ ಅಧ್ಯಕ್ಷ ಕೆ.ಎನ್‌. ಶಿವಕುಮಾರ್‌, ಜಿಪಂ ಸದಸ್ಯರಾದ ಸಿ. ಸುರೇಂದ್ರ ನಾಯ್ಕ, ಎಂ.ಆರ್‌. ಮಹೇಶ್‌, ಗ್ರಾಪಂ ಸದಸ್ಯರಾದ ಮಹೇಂದ್ರಗೌಡ, ಜಗದೀಶ್‌ ಏ.ಕೆ. ಕರಿಯಪ್ಪ, ಪರಮೇಶ್ವರಪ್ಪ, ಮುಖಂಡರಾದ ಮಂಜಣ್ಣ, ಕರಿಬಸಪ್ಪ, ಎಸ್‌.ಟಿ. ಮಂಜುನಾಥ್‌, ಹಳದಪ್ಪ, ಬಂಗಾರಿ ಬಸಪ್ಪಗೌಡ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next