Advertisement

ಅಂಬೇಡ್ಕರ್‌ ತತ್ವಾದರ್ಶ ಯುವಕರಿಗೆ ದಾರಿದೀಪ

07:54 PM Feb 15, 2021 | Team Udayavani |

ಚಿಕ್ಕಬಳ್ಳಾಪುರ: ಸಮಾಜದಲ್ಲಿರುವ ಎಲ್ಲಾ ಜನರು ಸಮಾನರಾಗಿ ಬದುಕುವ ಜೊತೆಗೆ ಪ್ರತಿಯೊಬ್ಬರು ವಿದ್ಯಾವಂತರಾಗಬೇಕೆಂಬ ಉದ್ದೇಶದಿಂದ ರಚಿಸಿರುವ ಸಂವಿಧಾನವನ್ನು ಓದಿ ಜಾಗೃತರಾಗಿ ಆದರ್ಶ ಸಮಾಜ ನಿರ್ಮಿಸಬೇಕೆಂದು ಜಿಲ್ಲಾಧಿಕಾರಿ ಆರ್‌.ಲತಾ ಹೇಳಿದರು.

Advertisement

ನಗರದ ಡಾ.ಬಿ.ಆರ್‌.ಅಂಬಡ್ಕರ್‌ ಭವನದಲ್ಲಿ 72ನೇ ಗಣರಾಜ್ಯೋತ್ಸವ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಆಯೋಜಿಸಿದ್ದ ಸಂವಿಧಾನ ಸಂರಕ್ಷಣಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕದಸಂಸ ಪದಾಧಿಕಾರಿಗಳು ಸಂವಿಧಾನದ ಕುರಿತು ಜನರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ಕೋಟ್ಯಂತರ ರೂ. ಖರ್ಚು ಮಾಡುತ್ತಿವೆ. ಪೋಷಕರು ಸಹ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರ ಭವಿಷ್ಯವನ್ನು ಉಜ್ವಲಗೊಳಿಸಬೇಕೆಂದು ಸಲಹೆ ನೀಡಿದರು. ಈ ನಿಟ್ಟಿನಲ್ಲಿ ಸಮಾಜದಲ್ಲಿ ಮತ್ತಷ್ಟು ಜಾಗೃತಿ ಮೂಡಿಸಿ ಜಿಲ್ಲೆಯನ್ನು ಶೈಕ್ಷಣಿಕ ಕೇಂದ್ರ ಮಾಡಲು ಎಲ್ಲರು ಸಹಕರಿಸಿ ಕೈಜೋಡಿಸಬೇಕೆಂದರು.

ಜಗತ್ತಿನಲ್ಲಿ ಶ್ರೇಷ್ಠ ಸಂವಿಧಾನ ರಚಿಸಿದ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ತತ್ವಾದರ್ಶಗಳು ಯುವಕರಿಗೆ ದಾರಿದೀಪವಾಗಬೇಕೆಂದರು. ಜಿಲ್ಲಾ ವರಿಷ್ಠಾಧಿಕಾರಿಗಳು ಮಾತನಾಡಿ, ಸಂವಿಧಾನದ ಆಶಯಗಳು ಎಲ್ಲಾ ಜನರಿಗೆ ಮುಟ್ಟಬೇಕು ಆಗ ಮಾತ್ರ ದೇಶದ ಭವಿಷ್ಯ ಆದರ್ಶವಾಗಿರುತ್ತೆ ಎಂದರು. ಕದಸಂಸ ಜಿಲ್ಲಾ ಸಂಚಾಲಕರಾದ ಮೇಲೂರು ಮಂಜುನಾಥ್‌, ರಾಜ್ಯ ಸಂಘಟನಾ ಸಂಚಾಲಕರಾದ ವಿ.ನಾರಾಯಣಸ್ವಾಮಿ, ಸನಂದ್‌ಕುಮಾರ್‌, ಭಾಗ್ಯಮ್ಮ ನಾರಾಯಣಸ್ವಾಮಿ, ಕೇಶವ,

ಆಂಜಿನಪ್ಪ, ವಿಭಾಗೀಯ ಸಂಚಾಲಕ ಲಕ್ಷ್ಮೀ ನಾರಾಯಣ, ದೇವಮ್ಮ, ಉಪನ್ಯಾಸಕರಾದ ಡಾ.ಎಚ್‌.ವಿ.ವೆಂಕಟೇಶ್‌ ಉಪನ್ಯಾಸ ನೀಡಿದರು. ಜಿಲ್ಲಾ ಸಂಘಟನಾ ಸಂಚಾಲಕರಾದ ನಾರಾಯಣಸ್ವಾಮಿ, ದಡಂಘಟ್ಟ ತಿರುಮಲೇಶ್‌, ತಾಲೂಕು ಸಂಚಾಲಕರಾದ ಮೂರ್ತಿ, ಶಿಡ್ಲಘಟ್ಟ ಮುನಿಆಂಜಿನಪ್ಪ, ಗೌರಿಬಿದನೂರು ಗಂಗಾಧರ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next