Advertisement

ಅಂಬೇಡ್ಕರ್‌ ವಿಚಾರಧಾರೆ ವಿಶ್ವಕ್ಕೆ ಮಾದರಿ

01:01 PM May 02, 2017 | Team Udayavani |

ಹೊನ್ನಾಳಿ: ಸಂವಿಧಾನ ಶಿಲ್ಪಿ ಭಾರತರತ್ನ ಡಾ| ಬಿ.ಆರ್‌ ಅಂಬೇಡ್ಕರ್‌ರವರ ವಿಚಾರಧಾರೆಗಳನ್ನು ಇಂದು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದು, ಅವರ ಮೇರು ವ್ಯಕ್ತಿತ್ವವನ್ನು ದೇಶದ ಜನತೆಗೆ ಮುಟ್ಟಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿಜಿ ಅವರಿಗೆ ಸಲ್ಲುತ್ತದೆ ಎಂದು ಕೇಂದ್ರದ ಮಾಜಿ ಸಚಿವ ಸಂಸದ ಜಿ.ಎಂ. ಸಿದ್ದೇಶ್ವರ್‌ ಹೇಳಿದರು. 

Advertisement

ತಾಲೂಕಿನ ಬೇಲಿಮಲ್ಲೂರು ಗ್ರಾಮದ ಆಂಜನೇಯ ಸಭಾ ಭವನದಲ್ಲಿ ತಾಲೂಕು ಬಿಜೆಪಿ ವತಿಯಿಂದ ನಡೆದ ಡಾ| ಬಿ.ಆರ್‌ ಅಂಬೇಡ್ಕರ್‌ ಜನ್ಮ ದಿನೋತ್ಸವ ಮತ್ತು ಜಿಪಂ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಿಜೆಪಿ ಇಂದು ತನ್ನ ಸಮರ್ಥ ಕಾರ್ಯವೈಖರಿ, ಕಾರ್ಯಕರ್ತರ ಪರಿಶ್ರಮದಿಂದ ಹಂತ ಹಂತವಾಗಿ ಎಲ್ಲಾ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದೆ. 

ಕಾಂಗ್ರೆಸ್ಸಿನ ದುರಾಡಳಿತವನ್ನು ಕಾರ್ಯಕರ್ತರು ಮನೆಮನೆಗೆ ತಿಳಿಸಿ ಬಿಜೆಪಿಯನ್ನು ಮುಂಬರುವ ದಿನಗಳಲ್ಲಿ ಆಡಳಿತವನ್ನು ತರುವಲ್ಲಿ ಈಗಿನಿಂದಲೇ ಕಾರ್ಯಪ್ರವೃತ್ತರಾಗಬೇಕೆಂದು ತಿಳಿಸಿದರು. ಮಾಜಿ ಸಚಿವ ರೇಣುಕಾಚಾರ್ಯ ಮಾತನಾಡಿ, ಸಮಾಜದ ಅತ್ಯಂತ ಹಿಂದುಳಿದವರೂ ಕೂಡ ಆರ್ಥಿಕ ಸದೃಢತೆ ಹೊಂದಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂಬ ಉದ್ದೇಶದಿಂದ ಅಂಬೇಡ್ಕರ್‌ ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿದ್ದಾರೆ ಎಂದರು. 

ಪ್ರಧಾನಿ ನರೇಂದ್ರ ಮೋಧೀಜಿಯವರ ಪರಿಶ್ರಮದಿಂದ ಅಂಬೇಡ್ಕರ್‌ ಜಯಂತಿಯನ್ನು ಪ್ರಪ್ರಥಮವಾಗಿ ವಿಶ್ವಸಂಸ್ಥೆಯಲ್ಲಿ ಆಚರಿಸುವಂತಾಯಿತು. ಅವರ ಹುಟ್ಟೂರು ಮಹಾರಾಷ್ಟ್ರದ ವೇವು ಗ್ರಾಮವನ್ನು 200 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.

ಜನ ಸಂಘದ ಕಾಲದಿಂದಲೂ ಬಿಜೆಪಿ ದೇಶಾದ್ಯಂತ ತನ್ನದೇ ಆದ ಸಿದ್ಧಾಂತದ ಮೇಲೆ ಜನಪರ ಹೋರಾಟಗಳನ್ನು ಮಾಡುತ್ತಾ ಬಂದಿದೆ. ಕಾರ್ಯಕರ್ತರ ಹಗಲಿರುಳೂ ಪರಿಶ್ರಮ ಜನತೆಯ ಸಹಕಾರದಿಂದ ಪಕ್ಷ ಇಂದು ದೇಶದ ಬಹುತೇಕ ರಾಜ್ಯಗಳಲ್ಲಿ ಆಡಳಿತ ಚುಕ್ಕಾಣಿ ಹಿಡಿಯುತ್ತಿದ್ದು, ಪ್ರಧಾನಿಯವರ ಹಗಲಿರುಳು ಪರಿಶ್ರಮದ ಜನಪರ ಕಾರ್ಯಗಳೇ ಸಾಕ್ಷಿಯಾಗಿವೆ. 

Advertisement

ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರು ಮುಂಬರುವ ಮಹಾ ಚುನಾವಣೆಯಲ್ಲಿ ರಾಜ್ಯದಲ್ಲಿ ಪಕ್ಷವನ್ನು ಆಡಳಿತಕ್ಕೆ ತರುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದರು. ತಾಲೂಕು ಬಿಜೆಪಿ ಅಧ್ಯಕ್ಷ ಡಿ.ಜಿ. ರಾಜಪ್ಪ, ಜಿಪಂ ಅಧ್ಯಕ್ಷೆ ಉಮಾ ರಮೇಶ್‌, ಜಿಪಂ ಸದಸ್ಯರಾದ ಸಿ.ಸುರೇಂದ್ರನಾಯ್ಕ, ಎಂ.ಆರ್‌. ಮಹೇಶ್‌, ತಾಪಂ ಅಧ್ಯಕ್ಷೆ ಸುಲೋಚನಮ್ಮ,

ದೇವಾಲಯ ಸಮಿತಿ ಅಧ್ಯಕ್ಷ ತೊಳಕಿ ಹಾಲೇಶಪ್ಪ, ಯುವ ಮೋರ್ಚಾ ಅಧ್ಯಕ್ಷ ಸಿ.ಆರ್‌. ಶಿವಾನಂದ್‌, ಮಹಿಳಾ ಮೋರ್ಚಾ ಅಧ್ಯಕ್ಷೆ ರಾಜೇಶ್ವರಿ, ಎಸ್ಸಿ ಮೋರ್ಚಾ ಅಧ್ಯಕ್ಷ ಮಾರುತಿ ನಾಯ್ಕ, ಎಸ್ಟಿ ಮೋರ್ಚಾ ಅದ್ಯಕ್ಷ ರಂಗಪ್ಪ, ಸ್ಲಂ ಮೋರ್ಚಾ ಅಧ್ಯಕ್ಷ ರಂಗಪ್ಪ, ಮುಖಂಡರಾದ ಉಮಾ ಓಂಕಾರ್‌, ಪ್ರಭುಗೌಡ ಇನ್ನು ಅನೇಕ ಮುಖಂಡರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next