Advertisement

ಅಂಬೇಡ್ಕರ್‌ ಭವನ ಜಾಗಬದಲಿಗೆ ಒತ್ತಾಯ

05:27 PM Nov 05, 2017 | Team Udayavani |

ಹಟ್ಟಿ ಚಿನ್ನದ ಗಣಿ: ಹಟ್ಟಿ ಪಟ್ಟಣಕ್ಕೆ ಅಂಬೇಡ್ಕರ್‌ ಭವನ ಮಂಜೂರಾಗಿರುವುದು ಸ್ವಾಗತಾರ್ಹ. ಆದರೆ ಭವನ ನಿರ್ಮಿಸಲು ಉದ್ದೇಶಿಸಿರುವ ಸ್ಥಳ ಬದಲಿಸಿ ಬೇರೆಡೆ ಸ್ಥಳ ಆಯ್ಕೆ ಮಾಡಿ ಜನರಿಗೆ ಅನುಕೂಲವಾಗುವ ಸ್ಥಳದಲ್ಲಿ ಭವನ ನಿರ್ಮಾಣಕ್ಕೆ ಮುಂದಾಗಬೇಕೆಂದು ಪ್ರಗತಿಪರ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.

Advertisement

ಹಟ್ಟಿಯಿಂದ ಲಿಂಗಸುಗೂರಿಗೆ ಹೋಗುವ ಮಾರ್ಗ ಮಧ್ಯೆ ಗುಡದನಾಳ ಕ್ರಾಸ್‌ ಪಕ್ಕದಲ್ಲಿರುವ ಭವನ ನಿರ್ಮಾಣಕ್ಕೆ ಆಯ್ಕೆ ಮಾಡಿರುವ ಸ್ಥಳ ಪಟ್ಟಣದಿಂದ 3 ಕಿ.ಮೀ. ಅಂತರದಲ್ಲಿದೆ. ಅಲ್ಲದೆ ಸ್ಮಶಾನ, ಜೆಸ್ಕಾಂ ಕಚೇರಿ ಹಾದು ಹೋಗಬೇಕು. ಮಾತ್ರವಲ್ಲದೆ ಸಮೀಪದಲ್ಲಿಯೇ ಗಣಿ ತ್ಯಾಜ್ಯ ಸಂಗ್ರಹಿಸಿರುವ ಸೈನೇಡ್‌ ಬೂದಿ ಸಂಗ್ರಹವಿದ್ದರೆ, ಮತ್ತೂಂದೆಡೆ ಗಣಿಯಲ್ಲಿ ಸ್ಪೂಟಿಸುವ ಮದ್ದಿನ ಮನೆ ಇದೆ. ಇಂತಹ ಭಯಾನಕ ಭಯಾನಕ ಸ್ಥಳದಲ್ಲಿ ಭವನ ನಿರ್ಮಾಣ ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.

ಪಟ್ಟಣದ ರಾಘವೇಂದ್ರ ಸ್ವಾಮಿ ಮಠ ಹಾಗೂ ಬಸವ ಸೇವಾ ಸಮಿತಿ ಮಧ್ಯೆ ಇರುವ ಖಾಲಿ ಸ್ಥಳ, ಕೋ-ಅಪರೇಟಿವ್‌ ಸ್ಟೋರ್‌, ನಾಗಲಿಂಗೇಶ್ವರ ದೇವಸ್ಥಾನ ಸಮೀಪ ಹಾಗೂ ಅಬ್ದುಲ್ಲಾ ಕಿರಾಣಿ ಅಂಗಡಿ ಮುಂಭಾಗ, ಇಲ್ಲವೇ ಹೊಸ ಬಸ್‌ ನಿಲ್ದಾಣ ಹತ್ತಿರ ಹಾಗೂ ಮಳಿಗೆಗಳ ಹಿಂದೆ ಅನೇಕ ಖಾಲಿ ಸ್ಥಳಗಳಿವೆ. ಇವುಗಳನ್ನು ಪರಿಶೀಲಿಸಿ ಸೂಕ್ತ ಜಾಗೆಯಲ್ಲಿ ಭವನ ನಿರ್ಮಿಸಬೇಕು ಎಂದು ಜೈ ಭೀಮ ಯುವಸೇನೆಯ ಮಲ್ಲಿಕಾರ್ಜುನ ಚಿತ್ರನಾಳ, ಮಲ್ಲೇಶ ಹೆಮ್ಮಡಗಿ, ಸುರೇಶ ಮಾಚನೂರು, ಎಸ್‌ ಎಫ್‌ಐನ ಮಲ್ಲಿಕಾರ್ಜುನ, ದಸಂಸ ಹನುಮಂತಪ್ಪ ತವಗ, ಛಲವಾದಿ ಮಹಾಸಭಾದ ಗುಡದಪ್ಪ ಭಂಡಾರಿ, ಅಂಬೇಡ್ಕರ್‌ ಯುವಕ ಮಂಡಳಿ ಎಚ್‌.ಎ. ಲಿಂಗಪ್ಪ, ಲಿಂಗರಾಜ, ಮಂಜುನಾಥ, ಶಿವರಾಜಕುಮಾರ ಇತರರು ಹಟ್ಟಿ ಚಿನ್ನದ ಗಣಿ ಕಂಪನಿ ವ್ಯವಸ್ಥಾಪಕ ನಿರ್ದೇಶಕರಿಗೆ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next