Advertisement

ಬಳಕೆಗಿಲ್ಲದೆ ಪಾಳುಬಿದ್ದಿದೆ ಅಂಬೇಡ್ಕರ್‌ ಭವನ!

12:10 PM Aug 08, 2018 | |

ನೆಹರೂನಗರ : ಇಲ್ಲಿನ ಕಾರುಕ್ಕಾಡುನಲ್ಲಿ 15 ವರ್ಷಗಳ ಹಿಂದೆ ನಿರ್ಮಾಣಗೊಂಡ ಸುಸಜ್ಜಿತ ಅಂಬೇಡ್ಕರ್‌ ಭವನ ಇಂದು ನಿರುಪಯೋಗಿಯಾಗಿ ಪಾಳುಬಿದ್ದಿದೆ. ಅಂಬೇಡ್ಕರ್‌ ಭವನ ನಿರ್ಮಾಣಗೊಂಡ ಆರಂಭದ ಹಂತದಲ್ಲಿ ಇಲ್ಲಿ ನಿರಂತರ ಕಾರ್ಯಕ್ರಮಗಳು ನಡೆಯುತ್ತಿದ್ದವು. ಬಳಿಕ ನಿರ್ವಹಣೆ ಇಲ್ಲದೆ ಭವನ ಗಿಡಗಂಟಿಗಳಿಂದ ಆವೃತವಾಗಿದೆ.

Advertisement

ಪಡೀಲು ಸಂಪರ್ಕ ರಸ್ತೆಯ ನಡು ಭಾಗದಲ್ಲಿ ಬರುವ ಕಾರೆಕ್ಕಾಡು ಎಂಬಲ್ಲಿ ರಸ್ತೆ ಬದಿಯೇ ಈ ಅಂಬೇಡ್ಕರ್‌ ಭವನ ಇದೆ. ಐದೂವರೆ ಸೆಂಟ್ಸ್‌ ಜಾಗದಲ್ಲಿರುವ ಈ ಭವನವು ವೇದಿಕೆ, ಶೌಚಾಲಯ, ಸ್ನಾನದ ಕೋಣೆ, ಆಲಂಕಾರಿಕ ಕೊಠಡಿ, ಭವನದ ಎದುರು ಇಂಟರ್‌ಲಾಕ್‌ ನೆಲಹಾಸು, ಕಾಂಪೌಂಡ್‌, ಹಾಲ್‌, ಗೇಟ್‌ ಮುಂತಾದ ಎಲ್ಲ ಸೌಲಭ್ಯಗಳನ್ನು ಹೊಂದಿದ್ದರೂ 10-15 ವರ್ಷಗಳಿಂದ ನಿರ್ವಹಣೆ ಮಾಡದೆ ಉಪಯೋಗಕ್ಕೆ ಸಿಗುತ್ತಿಲ್ಲ.

ಭವನದ ಹಿಂಭಾಗದ ಮೂಲೆ ಹಂಚುಗಳು ಕೆಳಕ್ಕೆ ಉರುಳಿದ್ದು, ಮಳೆ ನೀರು ಹೀರಿಕೊಂಡ ಹಿಂಬದಿಯ ಗೋಡೆ ಕುಸಿತದ ಭೀತಿಯಲ್ಲಿದೆ. ಭವನದ ಸುತ್ತಲೂ ಗಿಡಗಂಟಿಗಳು ಬೆಳೆದಿವೆ. ಭವನದ ಒಳಾಂಗಣ ಬಲೆ, ಕಸಗಳಿಂದ ಕೂಡಿದೆ. ಧ್ವಜ ಕಟ್ಟೆಯೂ ಜೀರ್ಣಾವಸ್ಥೆಗೆ ತಲುಪಿದೆ. ಪ್ರಸ್ತುತ ಈ ಭವನ ಹೊಸ ವರ್ಷಾಚರಣೆ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಿದೆ. ಉಳಿದಂತೆ ಇಲ್ಲಿ ಯಾವುದೇ ಕಾರ್ಯಕ್ರಮಗಳು ನಡೆದದ್ದು ನಮ್ಮ ಗಮನಕ್ಕೆ ಬಂದಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

ದಲಿತ ಸಂಘಟನೆಗಳು ತಾಲೂಕಿಗೆ ಅಂಬೇಡ್ಕರ್‌ ಭವನ ಒದಗಿಸುವಂತೆ ಶಾಸಕರು, ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತಾ, ಆಗ್ರಹಿಸುತ್ತಾ ಬಂದಿದ್ದಾರೆ. ಆದರೆ ಇರುವ ವ್ಯವಸ್ಥೆಯನ್ನು ಬಳಸಿಕೊಳ್ಳುವ, ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ನೋವಿನಿಂದಲೇ ಹೇಳುತ್ತಿದ್ದಾರೆ.

ಸ್ಪಂದನೆಯಿಲ್ಲ
ಅಂಬೇಡ್ಕರ್‌ ಭವನವನ್ನು ಸಮುದಾಯ ಅಂಬೇಡ್ಕರ್‌ ಭವನವಾಗಿ ಪರಿವರ್ತಿಸಿ ದುರಸ್ತಿ ಕಾರ್ಯಗಳನ್ನು ಮಾಡಿ ಸುಸಜ್ಜಿತ ಭವನ ರೂಪಿಸಬೇಕೆಂದು ಶಾಸಕರು, ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ ಯಾರೂ ಸ್ಪಂದನೆ ನೀಡುತ್ತಿಲ್ಲ. ತಾಲೂಕಿನಲ್ಲಿ ಅಂಬೇಡ್ಕರ್‌ ಭವನಗಳ ನಿರ್ಮಾಣಕ್ಕೆ 8 ಕೋಟಿ ರೂ. ಬಿಡುಗಡೆಗೊಂಡಿದ್ದು, ಆ ಭವನ ನಿರ್ಮಾಣದ ಜತೆಗೆ ಕಾರೆಕ್ಕಾಡಿನಲ್ಲಿರುವ ಅಂಬೇಡ್ಕರ್‌ ಭವನವನ್ನೂ ದುರಸ್ತಿ ಮಾಡಿಕೊಡಬೇಕು ಎಂಬುದು ನಮ್ಮ ಬೇಡಿಕೆ.
– ಅಧ್ಯಕ್ಷರು, ದಲಿತ ಸೇವಾ
ಸಮಿತಿ ತಾಲೂಕು ಘಟಕ

Advertisement
Advertisement

Udayavani is now on Telegram. Click here to join our channel and stay updated with the latest news.

Next