ಸಿಡ್ನಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದ ವೇಳೆ ರಾಯುಡು ಎರಡು ಓವರ್ ಬೌಲಿಂಗ್ ನಡೆಸಿದ್ದರು. ಈ ವೇಳೆ ರಾಯುಡು ಬೌಲಿಂಗ್ ಶೈಲಿ ಮಾಜಿ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಶೈಲಿಯನ್ನು ಹೋಲುವಂತಿತ್ತು. ಈ ಬೌಲಿಂಗ್ ಶೈಲಿ ‘ಚೆಂಡನ್ನು ಥ್ರೋ’ ಮಾಡುವಂತಿತ್ತು ಎಂದು ಪಂದ್ಯದ ನಂತರ ಸಂಬಂಧಪಟ್ಟ ಅಧಿಕಾರಿಗಳು ರಾಯುಡು ಬೌಲಿಂಗ್ ಬಗ್ಗೆ ಸಂಶಯ ವ್ಯಕ್ತಪಡಿಸಿ ತನಿಖೆಗೆ ಆದೇಶಿಸಿದ್ದಾರೆ.
Advertisement
ಈ ಪ್ರಕರಣದಿಂದಾಗಿ ಹೈದರಾಬಾದ್ ಮೂಲದ ಆಟಗಾರ 14 ದಿನಗಳ ಒಳಗೆ ಐಸಿಸಿಯ ಬೌಲಿಂಗ್ ಟೆಸ್ಟ್ ಗೆ ಪಾಲ್ಗೊಳ್ಳಬೇಕು. ಆದರೆ ತನಿಖೆ ಮುಗಿಯುವವರೆಗೆ ಅಂತಾರಾಷ್ತ್ರೀಯ ಪಂದ್ಯಗಳಲ್ಲಿ ಬೌಲಿಂಗ್ ಮಾಡಬಹುದು ಎಂದು ಐಸಿಸಿ ಅಭಿಪ್ರಾಯ ಪಟ್ಟಿದೆ.