Advertisement

ಆರಂಭಿಕರಾಗಿ ರಾಯುಡು ?

06:20 AM Apr 24, 2018 | |

ಹೈದರಾಬಾದ್‌: ಎರಡು ವರ್ಷಗಳ ನಿಷೇಧದ ಬಳಿಕ ಐಪಿಎಲ್‌ಗೆ ಮರಳಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಭರ್ಜರಿ ಪ್ರದರ್ಶನ ನೀಡುತ್ತಿದೆ. ಆಡಿದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದಿರುವ ಚೆನ್ನೈ ಎಂಟಂಕದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ರವಿವಾರ ನಡೆದ ಪಂದ್ಯದಲ್ಲಿ ಹೈದರಾಬಾದ್‌ ತಂಡವನ್ನು 4 ರನ್ನಿನಿಂದ ಸೋಲಿಸುವ ಮೂಲಕ ಚೆನ್ನೈ ರನ್‌ಧಾರಣೆಯ ಆಧಾರದಲ್ಲಿ ಪಂಜಾಬ್‌ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ.

Advertisement

ಇಲ್ಲಿನ ರಾಜೀವ್‌ ಗಾಂಧಿ ಕ್ರೀಡಾಂಗಣದ ಪಿಚ್‌ ನಿಧಾನಗತಿಯಲ್ಲಿತ್ತು. ಚೆಂಡು ಸುಲಭವಾಗಿ ಬ್ಯಾಟ್‌ ಕಡೆಗೆ ಬರುತ್ತಿರಲಿಲ್ಲ. ಹೀಗಾಗಿ ಚೆನ್ನೈ ನಿಧಾನವಾಗಿ ಆಟ ಆರಂಭಿಸಿತ್ತು. ಆದರೆ ಅಂಬಾಟಿ ರಾಯುಡು ಅವರ ಭರ್ಜರಿ ಆಟದಿಂದಾಗಿ ಚೆನ್ನೈ ಉತ್ತಮ ಮೊತ್ತ ಪೇರಿಸುವಂತಾಯಿತು. ಅವರಿಗೆ ಸುರೇಶ್‌ ರೈನಾ ಕೂಡ ಉತ್ತಮ ಬೆಂಬಲ ನೀಡಿದರು. ರಾಯುಡು 39 ಎಸೆತಗಳಿಂದ 79 ರನ್‌ ಸಿಡಿಸಿದ್ದರಿಂದ ಚೆನ್ನೈ ಮೊತ್ತ 182ರ ತನಕ ಬೆಳೆಯಿತು.

ರಾಯುಡು ಅವರ ಆಟವನ್ನು ಮುಕ್ತಕಂಠದಿಂದ ಹೊಗಳಿದ ಎಂಎಸ್‌ ಧೋನಿ ಅವರು ರಾಯುಡು  ಇನ್ನಿಂಗ್ಸ್‌ ಆರಂಭಿಸುವುದನ್ನು ನಾನು ಇಷ್ಟಪಡುತ್ತೇನೆ ಎಂದರು. ರಾಯುಡು ಈ ಹಿಂದೆ ಚೆನ್ನೈ ಪರ ಆರಂಭಿಕರಾಗಿ ಆಡಿದ್ದರು. ಆದರೆ ಫಾ ಡು ಪ್ಲೆಸಿಸ್‌ ಅವರ ಸೇರ್ಪಡೆಯಿಂದಾಗಿ ರಾಯುಡು ನಾಲ್ಕನೇ ಕ್ರಮಾಂಕದಲ್ಲಿ ಆಡುತ್ತಿದ್ದಾರೆ.

ರಾಯುಡು ಯಾವುದೇ ಕ್ರಮಾಂಕದಲ್ಲಿ ಆಡಲು ಹೊಂದಿಕೊಳ್ಳುವ ಆಟಗಾರರಾಗಿದ್ದಾರೆ. ಆದರೆ ಅವು ಆರಂಭಿಕರಾಗಿ ಆಡುವುದನ್ನು ಇಷ್ಟಪಡುತ್ತೇನೆ. ದೊಡ್ಡ ಹೊಡೆತಗಳಿಗೆ ಯತ್ನಿಸುವ ವೇಳೆ ಅವರು ಹಿಡಿತ ತಪ್ಪುವುದಿಲ್ಲ. ಅದು ಮುಖ್ಯವಾಗಿ ಬೇಕಾಗಿದೆ. ಆರಂಭಿಕರಾಗಿ ಅವರು ಎದುರಾಳಿಗೆ ಅಪಾಯಕಾರಿಯಾಗುವಂತೆ ಬ್ಯಾಟಿಂಗ್‌ ಮಾಡುತ್ತಾರೆ ಎಂದು ಧೋನಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next