Advertisement

ಅಂಬರ್‌ನಾಥ್‌ ಶ್ರೀ ಮಂಜುನಾಥ ಶಿವಾಲಯದ ರಜತ ಮಹೋತ್ಸವ 

03:33 PM Nov 08, 2017 | |

ಅಂಬರ್‌ನಾಥ್‌: ಹೆತ್ತ ತಂದೆ-ತಾಯಿಗಳನ್ನೆ ಅವರ ವೃದ್ಧಾಪ್ಯದ ದಿನಗಳಲ್ಲಿ ವೃದ್ಧಾಶ್ರಮ ದಾರಿ ತೋರಿಸುತ್ತಿರುವ ಇಂದಿನ ದಿನಗಳಲ್ಲಿ ಹೆತ್ತ ತಾಯಿಯ ಆಸೆಯಂತೆ ದೇವಾಲಯ, ಶೈಕ್ಷಣಿಕ ಸಂಸ್ಥೆಗಳನ್ನು ಪ್ರಾರಂಭಿಸಿ ಆತಾಯಿಯನ್ನು ಹೃದಯ ಸಿಂಹಾಸನದಲ್ಲಿ ಕುಳ್ಳಿರಿಸಿ ಪೂಜಿಸುತ್ತಿರುವ ಉದ್ಯಮಿ ಆರ್‌. ಬಿ. ಹೆಬ್ಬಳ್ಳಿ ಅವರ ಮಾತೃಭಕ್ತಿ ಅಭಿನಂದನೀಯ ಮತ್ತು ಅನುಕರಣೀಯ ವಾಗಿದೆ ಎಂದು ಕಾಶಿಯ ಡಾ| ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.

Advertisement

ನ. 5ರಂದು ಅಂಬರ್‌ನಾಥ್‌ನಲ್ಲಿ ಪ್ರಸಿದ್ಧ ಉದ್ಯಮಿ ಆರ್‌. ಬಿ. ಹೆಬ್ಬಳ್ಳಿ ಅವರು ತಮ್ಮ ಮಾತೋಶ್ರೀ ಲಿಂ. ಸಾವಿತ್ರಿ ದೇವಿ ಹೆಬ್ಬಳ್ಳಿ ಅವರ ಸಂಸ್ಮರಣೆಗಾಗಿ ನಿರ್ಮಿಸಿದ ಶ್ರೀ ಮಂಜುನಾಥ ಶಿವಾಲಯದ ರಜತ ಮಹೋತ್ಸವ ಹಾಗೂ ಹೆಬ್ಬಳ್ಳಿ ಅವರ ಹುಟ್ಟುಹಬ್ಬದ ವಜ್ರಮಹೋತ್ಸವ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಹೆಬ್ಬಳ್ಳಿ ಅವರು ತ್ರಿವೇಣಿ ಸಂಗಮದಂತಹ ಅರ್ಥಪೂರ್ಣವಾದ ಸಮಾರಂಭಕ್ಕೆ ವೀರಶೈವ ಸಮಾಜದ ಮೂವರು ಮಠಾಧೀಶರು ಪಾಲ್ಗೊಂಡಿರುವುದು ವಿಶೇಷವಾಗಿದೆ. ಮಾತೃಭಕ್ತಿಗೆ ಹೆಬ್ಬಳ್ಳಿ ಅವರು ಇನ್ನೊಂದು ಹೆಸರಾಗಿದ್ದಾರೆ ಎಂದು ನುಡಿದು, ತಮ್ಮ ಕಾಶೀ ಮಠದ ಹಾಗೂ ಹೆಬ್ಬಳ್ಳಿ ಅವರ ಅವಿನಾಭಾವ ಸಂಬಂಧವನ್ನು ವಿವರಿಸಿ, ಹೆಬ್ಬಳ್ಳಿ ದಂಪತಿಗೆ ಶುಭ ಹಾರೈಸಿದರು.

ಮಾತೃಶಕ್ತಿಗಿಂತ ಯಾವ ಶಕ್ತಿಯೂ ಶ್ರೇಷ್ಠವಲ್ಲ: ಶಿವಾಚಾರ್ಯ ಮಹಾಸ್ವಾಮಿ
ಗೌರವ ಅತಿಥಿಯಾಗಿ ಪಾಲ್ಗೊಂಡ ಉಜ್ಜೆ$çನಿಯ ಸಿದ್ಧಲಿಂಗ ರಾಜದೇಸಿ ಕೇಂದ್ರ ಶಿವಾಚಾರ್ಯ ಮಹಾ ಸ್ವಾಮಿಗಳು ಆಶೀರ್ವಚನ ನೀಡಿ, ನಾವು ಇವತ್ತು ಜೀವನದಲ್ಲಿ ಏನನ್ನಾದರೂ ಸಾಧಿಸಿದ್ದರು ಅದು ನಮ್ಮ ತಂದೆ-ತಾಯಿಯ ಕೊಡುಗೆ. ನಾವು ಜೀವನದಲ್ಲಿ ಎಲ್ಲರ ಋಣ ತೀರಿಸಬಹುದು. ಆದರೆ ಮತ್ತೆ ನೂರು ಜನ್ಮ ಪಡೆದರೂ ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ. ಮಾತೃಶಕ್ತಿಗಿಂತ ಯಾವ ಶಕ್ತಿಯೂ  ಶ್ರೇಷ್ಠವಲ್ಲ. ಆದ್ದರಿಂದ ಹೆತ್ತವರನ್ನು ಗೌರವಿಸಿ. ಅವರ ಮನಸ್ಸು ನೋಯಿಸದಿರಿ. ಯಾರು ದಿನಾಲು ಬೆಳಗ್ಗೆ ಎದ್ದು ತಂದೆ-ತಾಯಿಗೆ ಕೈಮುಗಿವರೋ ಅವರು ಇನ್ನೊಬ್ಬರಿಗೆ ಕೈಮುಗಿ
ಯುವ ಪ್ರಸಂಗ ಎದುರಾಗುವುದಿಲ್ಲ. ತಂದೆ-ತಾಯಿ, ಗುರುಗಳನ್ನು ಗೌರವಿಸುವ ಹೃದಯ ಶ್ರೀಮಂತಿಕೆ ಹೊಂದಿರುವ ರಾಮುಶೇs… ಹೆಬ್ಬಳ್ಳಿ ಪರಿವಾರದ ಕಾರ್ಯ ಅಭಿನಂದನೀಯವಾಗಿದೆ ಎಂದರು.

ಮಕ್ಕಳನ್ನೇ ಆಸ್ತಿಯನ್ನಾಗಿಸಬೇಕು: ಡಾ| ಚನ್ನಸಿದ್ಧರಾಮ ಪಂಡಿತಾರಾಧ್ಯ ಇನ್ನೋರ್ವ ಅತಿಥಿ ಶ್ರೀ ಶೈಲದ ಡಾ| ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಗೃಹಸ್ಥಾಶ್ರಮದಲ್ಲಿ ವಿವಾಹದ ಮಹತ್ವವನ್ನು ವಿವರಿಸಿ, ವಿವಾಹದಿಂದ ಎರಡು ಜೀವಗಳು, ಎರಡು ಪರಿವಾರಗಳು, ಎರಡು ಊರುಗಳು ಒಂದಾಗುತ್ತವೆ. ನಮ್ಮ ಜೀವನದ ನಾಲ್ಕು ಆಶ್ರಮಗಳಲ್ಲಿ ಗೃಹಸ್ಥಾಶ್ರಮ ಅತ್ಯಂತ ಶ್ರೇಷ್ಠವಾಗಿದ್ದು, ನಾವು ನಮ್ಮ ಮಕ್ಕಳಿಗಾಗಿ ಆಸ್ತಿ-ಪಾಸ್ತಿಯನ್ನು  ಮಾಡದೇ ಅವರು ರಾಷ್ಟ್ರದ ಆಸ್ತಿಯಾಗುವಂತೆ ಅವರನ್ನು ಬೆಳೆಸಬೇಕು ಎಂದು ನುಡಿದು,  ಹೆಬ್ಬಳ್ಳಿ ಪರಿವಾರಕ್ಕೆ ಶುಭ ಹಾರೈಸಿದರು.

ಹೆಬ್ಬಳ್ಳಿ ಅವರ ಹುಟ್ಟುಹಬ್ಬದ ನಿಮಿತ್ತ ಮೂವರು ಮಠಾಧೀಶರ ಉಪಸ್ಥಿತಿಯಲ್ಲಿ ಅವರ ತುಲಾಭಾರ ಸೇವೆ ನಡೆಯಿತು. ಈ ಸಂದರ್ಭದಲ್ಲಿ ಹೆಬ್ಬಳ್ಳಿ ದಂಪತಿ, ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು, ಅವರ ಅಭಿಮಾನಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆರ್‌. ಬಿ. ಹೆಬ್ಬಳ್ಳಿ ಅವರು, ಈ ಸಮಾರಂಭದಿಂದ ನನ್ನ ಹೃದಯ ತುಂಬಿ ಬಂದಿದೆ. ನಾನು ನನ್ನ ಜೀವನದಲ್ಲಿ ಏನಾದರೂ ಸಾಧಿಸಿದ್ದರೆ ಅದು ನನ್ನ ತಾಯಿಯ ಆಶೀರ್ವಾದ ಮತ್ತು ನನ್ನ ಪತ್ನಿಯ ಪ್ರೋತ್ಸಾಹ, ಸಹಕಾರವೇ ಕಾರಣವಾಗಿದೆ. ಆದರೂ ನಾನು ನಂಬಿದ ದೇವರ ಶ್ರೀರಕ್ಷೆಯನ್ನು ಮರೆಯುವಂತಿಲ್ಲ ಎಂದು ನುಡಿದರು. ಹೆಬ್ಬಳ್ಳಿ ಅವರ ಪತ್ನಿ ಸುಶೀಲಾ ಹೆಬ್ಬಳ್ಳಿ ಅವರು ಮಾತನಾಡಿ ಕೃತಜ್ಞತೆ ಸಲ್ಲಿಸಿದರು.

Advertisement

ಇದೇ ಸಂದರ್ಭ ಅಂಬರ್‌ನಾಥ್‌ ಶಿವಸೇನೆಯ ಪ್ರಮುಖ ಅರವಿಂದ ವಾಳೇಕರ್‌, ನಗರ ಸಭಾ ಸದಸ್ಯ ಮನೀಷಾ ವಾಳೇಕರ್‌, ಉದ್ಯಮಿ ಗುರುದೇವ್‌ ಭಾಸ್ಕರ್‌ ಶೆಟ್ಟಿ, ಡೊಂಬಿವಲಿ ಪಶ್ಚಿಮ ನವರಾತ್ರುéತ್ಸವ ಮಂಡಳಿಯ ಅಧ್ಯಕ್ಷ ಗೋಪಾಲ್‌ ಶೆಟ್ಟಿ, ಪ್ರಭಾಕರ ಶೆಟ್ಟಿ, ಲೋಕನಾಥ ಶೆಟ್ಟಿ, ಭೀಮಾಶಂಕರ್‌ ಜಂಗಮ ಮೊದಲಾದವರು ಹೆಬ್ಬಳ್ಳಿ ದಂಪತಿಯನ್ನು ಅಭಿನಂದಿಸಿ ಗೌರವಿಸಿದರು.

ಹೆಬ್ಬಳ್ಳಿ ಪರಿವಾರದ ವತಿಯಿಂದ ಮೂವರು ಮಠಾಧೀಶರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು, ರಜತ ಮತ್ತು ಸುವರ್ಣ ಕಾಣಿಕೆಯೊಂದಿಗೆ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಸತಾರಾ ಜಿಲ್ಲೆಯ ಧಾರೇಶ್ವರ ಮಠದ ಶ್ರೀ ನೀಲಕಂಠ ಶಿವಾಚಾರ್ಯ ಮಹಾರಾಜ ಹಾಗೂ ಮಹಾದೇವ ಶಿವಾಚಾರ್ಯ ಮಹಾರಾಜರು ಉಪನ್ಯಾಸ ನೀಡಿದರು. ಆನಂದ ಹೆಬ್ಬಳ್ಳಿ ಸ್ವಾಗತಿಸಿ, ಪ್ರಾಸ್ತಾವಿಕ ವಾಗಿ ಮಾತನಾಡಿ, ತಮ್ಮ ಹೆತ್ತವರು ಮಾಡಿದ ಕಾರ್ಯವನ್ನು ತಾವು ಮುಂದುವರಿಸಿಕೊಂಡು ಹೋಗುವ ಭರವಸೆ ನೀಡಿದರು. 

ಧಾರೇಶ್ವರ ಮಠದ ಮಣಿ ಕಂಠ ಸ್ವಾಮೀಜಿಯವರ ವೇದ-ಘೋಷದೊಂದಿಗೆ ಕಾರ್ಯಕ್ರಮ ಪ್ರಾರಂ ಭಗೊಂಡಿತು. ದೇವಲಿಂಗ ಸ್ವಾಮಿ ಕಾರ್ಯಕ್ರಮ ನಿರೂಪಿಸಿ ಅತಿಥಿಗಳನ್ನು ಪರಿಚಯಿಸಿದರು. ಗಿರೀಶ್‌ ಹೆಬ್ಬಳ್ಳಿವಂದಿಸಿದರು. ತುಳು- ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next