Advertisement

ಅಂಬರೀಶ್‌ ಹುಟ್ಟುಹಬ್ಬ ಸಂಭ್ರಮ

10:55 AM May 30, 2018 | |

ಸೋಮವಾರ ಅಂಬರೀಶ್‌ ಅವರ ಪುತ್ರ ಅಭಿಷೇಕ್‌ “ಅಮರ್‌’ ಚಿತ್ರದ ಮೂಲಕ ಹೀರೋ ಆಗಿ ಲಾಂಚ್‌ ಆಗಿದ್ದು ನಿಮಗೆ ಗೊತ್ತೆ ಇದೆ. ತಮ್ಮ ಮಗನ ಚೊಚ್ಚಲ ಸಿನಿಮಾದ ಮುಹೂರ್ತ ಸಮಾರಂಭದಲ್ಲಿ ಖುಷಿ ಖುಷಿಯಾಗಿದ್ದ ಅಂಬರೀಶ್‌ ಅವರಿಗೆ ಮಂಗಳವಾರ ಮತ್ತೂಂದು ಸಂಭ್ರಮ. ಅದು ಅವರ ಹುಟ್ಟುಹಬ್ಬ.

Advertisement

ಹೌದು, ರೆಬೆಲ್‌ಸ್ಟಾರ್‌ ಅಂಬರೀಶ್‌ ಅವರು ಮಂಗಳವಾರ ತಮ್ಮ 66ನೇ ಹುಟ್ಟುಹಬ್ಬವನ್ನು ಕುಟುಂಬ ವರ್ಗ ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಂಡರು. ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಶುಭಕೋರಲು ಅಭಿಮಾನಿಗಳು ಮಂಗಳವಾರ ಬೆಳಗ್ಗೆಯಿಂದಲೇ ಜೆ.ಪಿ.ನಗರದ ಮನೆಮುಂದೆ ಸೇರಿದ್ದರು. ವಿವಿಧ ಬಗೆಯ ಕೇಕ್‌, ಅಂಬಿ ಅವರ ಸಿನಿಮಾ ಗೆಟಪ್‌ಗ್ಳ ಪೋಸ್ಟರ್‌ನೊಂದಿಗೆ ಆಗಮಿಸಿ ತಮ್ಮ ಅಭಿಮಾನ ಪ್ರದರ್ಶಿಸಿದರು. 

ಸದ್ಯ ಅಂಬರೀಶ್‌ ಅವರು “ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರತಂಡ, ಅಂಬಿ ಬರ್ತ್‌ಡೇಗೆ ಶುಭಕೋರಿ ಟೀಸರ್‌ವೊಂದನ್ನು ಬಿಡುಗಡೆ ಮಾಡಿದೆ. ಇದಲ್ಲದೇ ಚಿತ್ರರಂಗದ ಅನೇಕರು ಅಂಬರೀಶ್‌ ಅವರ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ದರ್ಶನ್‌, ಸುದೀಪ್‌, ಜಗ್ಗೇಶ್‌ ಸೇರಿದಂತೆ ಅನೇಕರು ರೆಬೆಲ್‌ಸ್ಟಾರ್‌ಗೆ ವಿಶ್‌ ಮಾಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next