Advertisement

ಅಂಬಿ ನಾಮಫಲಕ ತೆರವು: ರೊಚ್ಚಿಗೆದ್ದ ಅಭಿಮಾನಿಗಳು

12:30 AM Mar 04, 2019 | Team Udayavani |

ಮಂಡ್ಯ: ಚಿತ್ರನಟ ಹಾಗೂ ಮಾಜಿ ಸಚಿವ ದಿ.ಅಂಬರೀಶ್‌ ಸ್ವಗ್ರಾಮ ಮದ್ದೂರು ತಾಲೂಕು ದೊಡ್ಡರಸಿನ ಕೆರೆ ಗ್ರಾಮದಲ್ಲಿ ಅಳವಡಿಸಲಾಗಿದ್ದ ಅಂಬಿ ನಾಮ ಫಲಕವನ್ನು ತೆರವುಗೊಳಿಸಿದ್ದರಿಂದ ಅಂಬರೀಶ್‌ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಈ ಪ್ರಕರಣ ಮತ್ತೂಂದು ವಿವಾದಕ್ಕೂ ಕಾರಣವಾಗಿದೆ.

Advertisement

ಗ್ರಾಮದ ಮುಟ್ಟನ ಹಳ್ಳಿ ರಸ್ತೆಗೆ ಅಂಬರೀಶ್‌ ಹೆಸರನ್ನಿಟ್ಟು ನಾಮ ಫಲಕವನ್ನು ಅಭಿಮಾನಿಗಳು ಅಳವಡಿಸಿದ್ದರು. ಫೆ.28ರಂದು ಸುಮ ಲತಾ ಉದ್ಘಾಟನೆ ಮಾಡಬೇಕಿತ್ತು. ಆದರೆ ನಾಮಫಲಕ ಅಳವಡಿಕೆಗೆ ಅನು ಮತಿ ಪಡೆದಿಲ್ಲ ಎಂಬ ಕಾರಣದಿಂದ ಉದ್ಘಾಟನೆಗೆ ಪೊಲೀಸರು ತಡೆಯೊಡ್ಡಿದ್ದರು. ಲೋಕಸಭಾ ಚುನಾವಣೆ ಬಳಿಕ ಉದ್ಘಾಟಿಸುವಂತೆ ಸೂಚಿಸಿದ್ದರು. ಈ ಹಿನ್ನೆಲೆ ಯಲ್ಲಿ ಅಂಬ ರೀಶ್‌ ಭಾವ ಚಿತ್ರ ಕಾಣ ದಂತೆ ಪೇಪರ್‌ನಿಂದ ಅಭಿಮಾನಿಗಳು ಮುಚ್ಚಿದ್ದರು. ಆದರೆ ಶನಿವಾರ ಗ್ರಾಮ ಪಂಚಾಯಿತಿ ಅಧಿಕಾರಿಗಳು ಏಕಾಏಕಿ ನಾಮಫಲಕವನ್ನು ತೆರವು ಮಾಡಿದ್ದಾರೆ. ಇದು ಸಹಜವಾಗಿ ಅಂಬಿ ಅಭಿಮಾನಿಗಳನ್ನು ಕೆರಳಿಸಿದೆ.

ನಾಮಫಲಕ ತೆರವು ಹಿಂದೆ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಅವರ ಕೈವಾಡ ಇದೆ ಎಂದು ಅಭಿಮಾನಿಗಳು ಆರೋಪಿಸಿದ್ದಾರೆ. ಡಿ.ಸಿ. ತಮ್ಮಣ್ಣ ಸಹ ಅಂಬರೀಶ್‌ ಅವರ ದೊಡ್ಡರಸಿನಕೆರೆ ಗ್ರಾಮದವರೇ ಆಗಿದ್ದಾರೆ. ಅಂಬಿಗೆ ಸೋದರ ಸಂಬಂಧಿಯೂ ಆಗಿದ್ದ ತಮ್ಮಣ್ಣ ಚುನಾವಣೆಗಳಲ್ಲಿ ಸಾಮಾನ್ಯವಾಗಿ ಅಂಬರೀಶ್‌ ಅವರೊಟ್ಟಿಗೆ ಬಂದು ಮತ ಚಲಾಯಿಸುತ್ತಿದ್ದರು. ಆವರ ಒತ್ತಡದಿಂದಲೇ ನಾಮಫಲಕವನ್ನು ತೆರವು ಮಾಡುವ ಮೂಲಕ ಕೀಳು ಮಟ್ಟದ ರಾಜ ಕೀಯ ಮಾಡುತ್ತಿದ್ದಾರೆ ಎಂಬುದು ಅಂಬಿ ಅಭಿಮಾನಿಗಳ ಆರೋಪವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next