Advertisement

ಕೋವಿಡ್ ಆತಂಕದ ನಡುವೆ ಅಂಬಿ 69ನೇ ಜನ್ಮದಿನಾಚರಣೆ

09:24 AM May 29, 2021 | Team Udayavani |

ಇಂದು ಮಂಡ್ಯದ ಗಂಡು, ರೆಬಲ್‌ಸ್ಟಾರ್‌ ಖ್ಯಾತಿಯ ನಟ ಅಂಬರೀಶ್‌ ಅವರ 69ನೇ ಹುಟ್ಟು ಹಬ್ಬ. ಪ್ರತಿವರ್ಷ ಅಂಬರೀಶ್‌ ಅವರ ಹುಟ್ಟುಹಬ್ಬವನ್ನು ಅವರ ಕುಟುಂಬ ವರ್ಗ, ಸ್ನೇಹಿತರು, ಚಿತ್ರರಂಗದವರು, ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಅಂಬರೀಶ್‌ ನಿಧನದ ಬಳಿಕ ಅವರಿಲ್ಲದೆ ನಡೆಯುತ್ತಿರುವ ಮೂರನೇ ಜನ್ಮದಿನ ಇದಾಗಿದ್ದು, ತಮ್ಮ ನೆಚ್ಚಿನ ನಟನನ್ನು ಅಂಬಿ ಅಭಿಮಾನಿಗಳು ಸ್ಮರಿಸಿ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಸಾಮಾನ್ಯವಾಗಿ ಅಂಬರೀಶ್‌ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳು ಹಲವು ದಿನಗಳಿಂದಲೇ ತಯಾರಿ ಮಾಡಿಕೊಳ್ಳುತ್ತಿದ್ದರು. ಆದರೆ ಕಳೆದ ವರ್ಷದಿಂದ ರೆಬಲ್‌ಸ್ಟಾರ್‌ ಅಂಬರೀಶ್‌ ಹುಟ್ಟುಹಬ್ಬಕ್ಕೆ ಕೊರೊನಾ ಕರಿಛಾಯೆ ಆವರಿಸುತ್ತಿದೆ.

Advertisement

ಕಳೆದ ವರ್ಷ ಕೋವಿಡ್ ಲಾಕ್‌ಡೌನ್‌ ಇದ್ದಿದ್ದರಿಂದ ರೆಬಲ್‌ಸ್ಟಾರ್‌ ಹುಟ್ಟುಹಬ್ಬವನ್ನು ಅವರ ಕುಟುಂಬವರ್ಗ ಮತ್ತು ಅಭಿಮಾನಿಗಳು ಸರಳವಾಗಿ ಆಚರಿಸಿದ್ದರು. ಇನ್ನು ಈ ವರ್ಷ ಕೂಡ ಈಗಾಗಲೇ ಕೊರೊನಾ ಎರಡನೇ ಅಲೆಯ ಆತಂಕದಿಂದ ಲಾಕ್‌ಡೌನ್‌ ಘೋಷಣೆಯಾಗಿದೆ. ಹೀಗಾಗಿ, ಈ ವರ್ಷ ಕೂಡ ಅಂಬರೀಶ್‌ ಹುಟ್ಟುಹಬ್ಬವನ್ನ ಅದ್ಧೂರಿಯಾಗಿ ಆಚರಿಸಲು ಕುಟುಂಬವರ್ಗ ಮತ್ತು ಅಭಿಮಾನಿಗಳಿಗೆ ಸಾಧ್ಯವಾಗುತ್ತಿಲ್ಲ.

ಇನ್ನು ಈ ವರ್ಷ ಕೊರೊನಾ 2ನೇ ಅಲೆಯ ಅಬ್ಬರ ಜೋರಾಗಿರುವುದರಿಂದ ಅಭಿಮಾನಿಗಳು ಒಂದಷ್ಟು ಸಾಮಾಜಿಕ ಕಾರ್ಯಗಳ ಮೂಲಕ ತಮ್ಮ ನೆಚ್ಚಿನ ನಟನ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಿದ್ದಾರೆ. ಅಂಬರೀಶ್‌  ಸಮಾಧಿಗೆ ಪೂಜೆ ಸಲ್ಲಿಸಿ ಬಳಿಕ ಕೋವಿಡ್‌ ಸೋಂಕಿತರಿಗೆ ನೆರವು ನೀಡುವುದು, ಕೊರೊನಾ ವಾರಿಯರ್ಗೆ ಆಹಾರ ಪೂರೈಕೆ, ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾದವರಿಗೆ ದಿನಸಿ ಕಿಟ್‌ಗಳ ವಿತರಣೆ, ವೃದ್ಧಾಶ್ರಮಗಳಿಗೆ ಹಣ್ಣು-ಔಷಧಿ ವಿತರಣೆ, ಮಾಸ್ಕ್ವಿ ತರಣೆ ಹೀಗೆ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡಲು ಯೋಚಿಸಲಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next