Advertisement

ಅ.ತೃತೀಯ ವಾರ “ಅಂಬರ್‌ ಕ್ಯಾಟರರ್’ಸಿನೆಮಾ ತೆರೆಗೆ

02:04 PM Oct 04, 2017 | Team Udayavani |

ಮುಂಬಯಿ: ತುಳುವರ ಬಹು ನಿರೀಕ್ಷೆಯ ನಾಗೇಶ್ವರ ಸಿನಿ ಕಂಬೈನ್ಸ್‌ ಪ್ರಸ್ತುತಿಯ “ಅಂಬರ್‌ ಕ್ಯಾಟರರ್’ ತುಳು ಸಿನೆಮಾ ಅಕ್ಟೋಬರ್‌ ತೃತೀಯ ವಾರದಲ್ಲಿ ತೆರೆ ಕಾಣಲಿದೆ ಎಂದು ಮುಂಬಯಿಯ ಸಮಾಜ ಸೇವಕ, ಕೊಡುಗೈದಾನಿ, ಶ್ರೀ ಕಚ್ಚಾರು ಶ್ರೀ ನಾಗೇಶ್ವರ ದೇವಸ್ಥಾನ ಆಡಳಿತ ಮತ್ತು ಸೇವಾ ಟ್ರಸ್ಟ್‌ ಬಾಕೂìರು ಅಧ್ಯಕ್ಷ ನಾಗೇಶ್ವರ ಸಿನಿ ಕಂಬೈನ್ಸ್‌ನ ನಿರ್ದೇಶಕ ಕಡಂದಲೆ ಸುರೇಶ್‌ ಎಸ್‌. ಭಂಡಾರಿ ತಿಳಿಸಿದರು.

Advertisement

ಮಂಗಳೂರು ತೊಕ್ಕೊಟ್ಟು ಇಲ್ಲಿನ ಅಸೆ„ಗೋಳಿ ಅಭಯಾಶ್ರಮದಲ್ಲಿ ಸೆ. 30ರಂದು ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಚಿತ್ರದ  ಚಿತ್ರೀಕರಣ ಪೂರ್ಣಗೊಂಡು ಇದೀಗ ಸೆನ್ಸಾರ್‌ ಬೋರ್ಡ್‌ನಲ್ಲಿದೆ. ಬಹುವೆಚ್ಚದ ದುಬಾರಿ ತುಳು ಚಲನಚಿತ್ರ ಇದಾಗಿದ್ದು,  ಹಿಂದಿ ಚಲನಚಿತ್ರದ ಶೈಲಿಯಲ್ಲಿ ಸಂಪೂರ್ಣವಾಗಿ ಚಿತ್ರವನ್ನು ಚಿತ್ರೀಕರಿಸಲಾಗಿದೆ. ತುಳು ಚಲನಚಿತ್ರದ ಇತಿಹಾಸದಲ್ಲೇ ಇದೊಂದು ಪ್ರಥಮ ಪ್ರಯತ್ನ. ಪರಶುರಾಮನ ಸೃಷ್ಟಿಯ ತುಳುನಾಡಿನ ಪ್ರಾದೇಶಿಕ ಭಾಷೆ ಅದಕ್ಕಿಂತಲೂ ಮೊದಲಾಗಿ ನನ್ನ ಮಾತೃಭಾಷೆಯಲ್ಲಿ ಸಿನೆಮಾವೊದಂದನ್ನು ನಿರ್ಮಿಸುವ ಕನಸು ನನ್ನಲ್ಲಿತ್ತು. ಪ್ರತಿಭಾನ್ವಿತ ಉದಯೋನ್ಮುಖ ಕಲಾವಿದನಾಗಿರುವ ಪುತ್ರ ಕಡಂದಲೆ ಸೌರಭ್‌ ಸುರೇಶ್‌ ಭಂಡಾರಿ ಈ ಚಿತ್ರದ ನಾಯಕ ನಟನಾಗಿ ಮತ್ತು ಹೆಸರಾಂತ ಯುವಕಲಾವಿದೆ ಸಿಂಧು ಲೋಕನಾಥ್‌ ನಾಯಕಿ ನಟಿಯಾಗಿ ಅಭಿನಯಿಸಿದ ಅಭಿಮಾನ ನನಗಿದೆ. ಜೈ ಪ್ರಸಾದ್‌ ಬಜಾಲ್‌ ರಚಿಸಿ, ನಿರ್ದೇಶನ ಹಾಗೂ ಸತೀಶ್‌ ಬ್ರಹ್ಮಾವರ್‌ ನಿರ್ಮಾಣ ನಿರ್ವಹಣೆ ಮತ್ತು ಸಂತೋಷ್‌ ರೈ ಪಾತಾಜೆ ಛಾಯಾಗ್ರಹಣದಲ್ಲಿ ಚಿತ್ರೀಕರಿಸಲ್ಪಟ್ಟ ಈ ಚಿತ್ರಕ್ಕೆ  ಕದ್ರಿ ಮಣಿಕಾಂತ್‌ ಸಂಗೀತ ನೀಡಿದ್ದು ಚಿತ್ರೀಕರಣ ಪೂರ್ಣಗೊಂಡು, ಚಿತ್ರವು ಅತ್ಯುತ್ತಮವಾಗಿ ಮೂಡಿ ಬಂದಿದೆ. ತುಳು ಭಾಷೆ ಬೆಳೆಯುತ್ತಿದೆ. ತುಳು ಚಲನಚಿತ್ರಗಳಿಂದ ಭಾಷೆಯ ಮೇಲಿನ ಪ್ರೀತಿಯೂ  ಹೆಚ್ಚಾಗುವುದರ ಜತೆಗೆ ಹೊಸ ಕಲಾವಿದರಿಗೆ ವೇದಿಕೆ ಕಲ್ಪಿಸಿದಂತಾಗುತ್ತದೆ ಅನ್ನುವ ಉದ್ದೇಶದೊಂದಿಗೆ ಚಿತ್ರ ನಿರ್ಮಿಸಲಾಗಿದೆ ಎಂದು ನುಡಿದರು.

ಚಿತ್ರದ ನಿರ್ದೇಶಕ  ಜೈಪ್ರಸಾದ್‌ ಬಜಾಲ್‌ ಮಾತನಾಡಿ,  ಚಿತ್ರದಲ್ಲಿ ಕನ್ನಡದ ದಿಗ್ಗಜರು, ಕರ್ನಾಟಕದ ಹಿರಿಯ ಅಭಿನೇತರರಾದ ಭಾರತಿ ವಿಷ್ಣುವರ್ಧನ್‌, ಶರತ್‌ ಲೋಹಿತಾಶ್ವ, ಸುಮಿತ್ರಾ ಪಂಡಿತ್‌,  ಪವನ್‌ ಕಲ್ಯಾಣ್‌, ತುಳು ಚಲನಚಿತ್ರಗಳ ಸೂಪರ್‌ಸ್ಟಾರ್‌ಗಳಾದ ನವೀನ್‌ ಡಿ. ಪಡೀಲ್‌, ಸುಂದರ್‌ ರೈ ಮಂದಾರ, ಭೋಜರಾಜ್‌ ವಾಮಂಜೂರು ಅಭಿನಯಿಸಿದ್ದಾರೆ.  ಅವರ ಧ್ವನಿಯ ಡಬ್ಬಿಂಗ್‌ ಕೂಡಾ  ಮಾಡಲಾಗಿದೆ  ಎಂದರು.

ನಾಯಕ ನಟ ಸೌರಭ್‌ ಸುರೇಶ್‌ ಭಂಡಾರಿ ಮಾತನಾಡಿ, ಚಲನಚಿತ್ರರಂಗದಲ್ಲಿ ಇದು ನನ್ನ ಮೊತ್ತಮೊದಲ ಹೆಜ್ಜೆ. ಆದರೂ ಎಲ್ಲೂ ಹಿಂಜರಿಯದೆ ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸಿದ ಅಭಿಮಾನ  ನನಗಿದೆ. ಇನ್ನುಳಿದ ಪಾತ್ರ ಚಿತ್ರ ವೀಕ್ಷಕರದ್ದು. ಅವರೆಲ್ಲರೂ ಚಿತ್ರವನ್ನು ನೋಡಿ ಪ್ರೋತ್ಸಾಹಿ
ಸುವ ಭರವಸೆ ನನಗಿದೆ ಎಂದರು. ಹರೀಶ್‌ ಕಟಪಾಡಿ, ಶ್ರೇಯಸ್‌ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಚಿತ್ರ-ವರದಿ: ರೊನಿಡಾ ಮುಂಬಯಿ

Advertisement
Advertisement

Udayavani is now on Telegram. Click here to join our channel and stay updated with the latest news.

Next