Advertisement

ದುಬಾರಿ ಎಸಿಯನ್ನುಶೇ. 94ರಷ್ಟು ರಿಯಾಯಿತಿ ದರದಲ್ಲಿ ಮಾರಿದ ಅಮೆಜಾನ್‌!

09:02 PM Jul 05, 2021 | Team Udayavani |

ನವದೆಹಲಿ: ಖ್ಯಾತ ಆನ್‌ಲೈನ್‌ ಮಾರಾಟ ಕಂಪನಿಯಾದ ಅಮೆಜಾನ್‌, ತೋಷಿಬಾ ಏರ್‌ಕಂಡೀಷನ್‌ನನ್ನು ಅಚಾತುರ್ಯದಿಂದ ಶೇ. 94ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಿ ಪೇಚಿಗೆ ಸಿಲುಕಿದೆ!

Advertisement

1.8 ಟನ್‌ ಸಾಮರ್ಥ್ಯದ 5 ಸ್ಟಾರ್‌ ರೇಟಿಂಗ್‌ ಇರುವ ಈ ಎಸಿಯ ಅಸಲಿ ಬೆಲೆ 96,700 ರೂ. ಆಗಿದ್ದು ಪ್ರತಿದಿನ ಯಾವ್ಯಾವ ಸಾಮಗ್ರಿಗಳಿಗೆ ತಮ್ಮಲ್ಲಿ ಡಿಸ್ಕೌಂಟ್‌ ಇದೆಯೆಂದು ಲಿಸ್ಟಿಂಗ್‌ ಮಾಡುವಾಗ, ಈ ಎಸಿ ಬೆಲೆಯನ್ನು 5,900 ರೂ.ಗಳಿಗೆ ಇಳಿಸಿರುವುದಾಗಿ ವೆಬ್‌ಸೈಟ್‌ನಲ್ಲಿ ನಮೂದಿಸಲಾಗಿತ್ತು.

ವೆಬ್‌ಸೈಟ್‌ನಲ್ಲಿ ಇದನ್ನು ನೋಡಿದ ಗ್ರಾಹಕರೊಬ್ಬರು ಕೂಡಲೇ ಆರ್ಡರ್‌ ಮಾಡಿ ಇದನ್ನು ಕೊಂಡಿದ್ದಾರೆ. ಕಂಪನಿಯ ಈ ಪ್ರಮಾದದಿಂದ ಗ್ರಾಹಕನಿಗೆ ಲಾಭವಾಗಿದೆ.

ಇದನ್ನೂ ಓದಿ :ಈ ನೆಲದ ಮಾಹಿತಿ ತಂತ್ರಜ್ಞಾನ ನಿಯಮ 2021 ನನ್ನು ಟ್ವೀಟರ್ ಪಾಲಿಸತಕ್ಕದ್ದು : ಕೇಂದ್ರ ಸರ್ಕಾರ

Advertisement

Udayavani is now on Telegram. Click here to join our channel and stay updated with the latest news.

Next