ನ್ಯೂಯಾರ್ಕ್: ಪ್ರೈಮ್ ವಿಡಿಯೋ ಸರ್ವಿಸ್ ಮೂಲಕ ಜನಮನ್ನಣೆ ಪಡೆದ ಅಮೇಜಾನ್ ಪ್ರೈಮ್ ಇದೀಗ 24/7 ಲೈವ್ ಕಾರ್ಯಕ್ರಮಗಳನ್ನು ಬಿತ್ತರಿಸಲು ಯೋಜನೆ ರೂಪಿಸುತ್ತಿದೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಈಗಾಗಲೇ ಅಮೇಜಾನ್ ಪ್ರೈಮ್, ವೆಬ್ ಸೀರೀಸ್, ಸಿನಿಮಾ, ಮುಂತಾದವುಗಳ ಮೂಲಕ ಜನರ ಮೆಚ್ಚುಗೆ ಗಳಿಸಿದ್ದು, ಲಾಕ್ ಡೌನ್ ಸಮಯದಲ್ಲಿ ಹಲವಾರು ಹೊಸ ಚಿತ್ರಗಳು ಈ ಓಟಿಟಿ (ಓವರ್ ದ ಟಾಪ್) ಫ್ಯ್ಯಾಟ್ ಫಾರ್ಮ್ ಮೂಲಕ ಬಿಡುಗಡೆಗೊಂಡಿದೆ.
ಇದೀಗ ಬಂದ ಮಾಹಿತಿಯ ಪ್ರಕಾರ ಅಮೇಜಾನ್ ಪ್ರೈಮ್ ನಲ್ಲಿ ಇನ್ನು ಮುಂದೆ ಲೈವ್ ನ್ಯೂಸ್, ಮ್ಯೂಸಿಕ್, ಸ್ಪೋರ್ಟ್ಸ್, ಟಿವಿ ಮತ್ತು ಸಿನಿಮಾಗಳಿಗೆ ಸಂಬಂಧಿಸಿದ ವಿಶೇಷ ಕಾರ್ಯಕ್ರಮಗಳು ನೇರ ಪ್ರಸಾರಗೊಳ್ಳಲಿದೆ. ಸದ್ಯ ಅಮೇಜಾನ್ ಲೈವ್ ಮತ್ತು ಲೀನಿಯರ್ ಪ್ರೋಗ್ರಾಂ ಗಳಿಗೆ ಲೈಸನ್ಸ್ ಪಡೆಯಲು ಯತ್ನಿಸುತ್ತಿದೆ ಎಂದು ಮಾಧ್ಯಮ ತಿಳಿಸಿದೆ.
ಲೀನಿಯರ್ ಟಿವಿ, ಬಳಕೆದಾರರಿಗೆ ನೆಚ್ಚಿನ ಟಿವಿ ಕಾರ್ಯಕ್ರಮಗಳನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಇದರಲ್ಲಿ ಪ್ರಮುಖವಾಗಿ ಕ್ರೀಡೆ, ಸಿನಿಮಾ, ಅವಾರ್ಡ್ ಕಾರ್ಯಕ್ರಮಗಳು, ವಿಶೇಷ ಕಾರ್ಯಕ್ರಮಗಳು ಪ್ರಸಾರವಾಗುತ್ತದೆ.
ಅದಾಗ್ಯೂ ಅಮೇಜಾನ್ ಅಧಿಕೃತವಾಗಿ ಈ ಮಾಹಿತಿ ನೀಡಿಲ್ಲವಾಗಿದ್ದು, ಒಂದು ವೇಳೆ 24/7 ಕಾರ್ಯಕ್ರಮಗಳು ಜಾರಿಗೆ ಬಂದರೇ ನೆಟ್ ಫ್ಲಿಕ್ಸ್, ಡಿಸ್ನಿ ಗೆ ಪೈಪೋಟಿ ನೀಡುವುದು ಸುಳ್ಳಲ್ಲ ಎದು ವರದಿಯಾಗಿದೆ.