Advertisement

ಇ-ಕಾಮರ್ಸ್‌ ಕಂಪನಿಗಳ ಮೇಲಿನ ನಿರ್ಬಂಧ: ಅಮೆಜಾನ್‌ ಅಸಮಾಧಾನ

04:20 PM Apr 22, 2020 | Hari Prasad |

ನವದೆಹಲಿ: ಲಾಕ್‌ ಡೌನ್‌ ಸಡಿಲಿಸಿದ ಹೊರತಾಗಿಯೂ ಇ-ಕಾಮರ್ಸ್‌ ಕಂಪನಿಗಳ ಮೇಲಿನ ನಿರ್ಬಂಧ ಮುಂದುವರಿಸಿರುವ ಸರಕಾರದ ನಿರ್ಧಾರದಿಂದ ಗ್ರಾಹಕರು ಮಾತ್ರವಲ್ಲದೆ, ಸಣ್ಣ ಉದ್ದಿಮೆಗಳು ಮತ್ತು ಉತ್ಪಾದಕರಿಗೂ ಬೇಸರವಾಗಿದೆ ಎಂದು ಅಮೆಜಾನ್‌ ಇಂಡಿಯಾ ಹೇಳಿದೆ.

Advertisement

ಜೀವನಾವಶ್ಯಕವಲ್ಲದ ಉತ್ಪನ್ನಗಳ ಮಾರಾಟಕ್ಕೆ ಅನುಮತಿ ನೀಡಿ ಮತ್ತೆ ಹಿಂಪಡೆದ ಕೇಂದ್ರ ಸರಕಾರದ ನಡೆ ಕುರಿತು ಪ್ರತಿಕ್ರಿಯಿಸಿರುವ ಸಂಸ್ಥೆ, ಮನೆಯಿಂದಲೇ ಕೆಲಸ ಮಾಡುವ ಓದುತ್ತಿರುವ ಗ್ರಾಹಕರು ಕೆಲ ಅಗತ್ಯ ವಸ್ತುಗಳನ್ನು ಕೊಳ್ಳುವವರಿದ್ದರು.

ಜತೆಗೆ ಸಣ್ಣ ಉದ್ದಿಮೆದಾರರೂ ಈಗಾಗಲೇ ಉತ್ಪನ್ನಗಳ ತಯಾರಿ, ಸರಬರಾಜಿಗೆ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಸರಕಾರದ ಹೊಸ ಮಾರ್ಗ ಸೂಚಿಗಳಿಂದ ಅವರೆಲ್ಲರಿಗೂ ಬೇಸರವಾಗಿದೆ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next