Advertisement
ಶುಕ್ರವಾರ ಅಮೆಜಾನ್ ತನ್ನ ಉದ್ಯೋಗಿಗಳಿಗೆ ಟಿಕ್ ಟಾಕ್ ಆ್ಯಪ್ ಬಳಸದಂತೆ ಮಾತ್ರವಲ್ಲದೆ ಕೂಡಲೇ ಡಿಲೀಟ್ ಮಾಡುವಂತೆ ಇ-ಮೇಲ್ ಮೂಲಕ ಸೂಚನೆ ನೀಡಿತ್ತು. ತದನಂತರದಲ್ಲಿ ತನ್ನ ನಿರ್ಧಾರವನ್ನು ಹಿಂತೆಗೆದುಕೊಂಡಿದ್ದಲ್ಲದೆ ಕಣ್ತಪ್ಪಿನಿಂದ ಮೇಲ್ ಕಳುಹಿಸಲಾಗಿದೆ ಎಂದು ತಿಳಿಸಿದೆ. ಮಾತ್ರವಲ್ಲದೆ ಟಿಕ್ ಟಾಕ್ ಗೆ ಸಂಬಂಧಿಸಿದಂತೆ ನಮ್ಮ ನೀತಿಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ತಿಳಿಸಿದೆ.
Related Articles
Advertisement
ಟಿಕ್ ಟಾಕ್ ಗೆ ಚೀನದ ಬೈಟೇಡ್ಯಾನ್ಸ್ ಸಂಸ್ಥೆಯೂ ಮಾಲೀಕತ್ವವನ್ನು ಹೊಂದಿದ್ದು ಅತೀ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದೆ, ಆದರೇ ಬಳಕೆದಾರರ ಡೇಟಾವನ್ನು ಕಾಪಾಡಲು ಭಾರತ ಸರ್ಕಾರ ಟಿಕ್‌ಟಾಕ್ ಸೇರಿದಂತೆ 59 ಚೀನೀ ಅಪ್ಲಿಕೇಶನ್‌ಗಳನ್ನು ಜೂನ್ ನಲ್ಲಿ ನಿಷೇಧಿಸಿತು.