ಮುಂಬಯಿ: ಕೋವಿಡ್ ವೈರಸ್ ಹಿನ್ನೆಲೆಯಲ್ಲಿ ಚಿತ್ರಮಂದಿರಗಳ ಪ್ರದರ್ಶನ ಸ್ಥಗಿತಗೊಂಡಿದ್ದರಿಂದ ಭಾರತೀಯ ಚಿತ್ರರಂಗದ ಐದು ಬಹು ನಿರೀಕ್ಷೆಯ ಚಿತ್ರಗಳು ಅಮೆಜಾನ್ ಪ್ರೈಮ್‌ನಲ್ಲಿ ನೇರ ಬಿಡುಗಡೆಯಾಗುತ್ತಿವೆ.
ಅಮಿತಾಭ್‌ಬಚ್ಚನ್ ಅವರ ‘ಗುಲಾಬೊ ಸೀತಾಬೊ’, ವಿದ್ಯಾಬಾಲನ್ ನಟನೆಯ ‘ಶಕುಂತಳಾ ದೇವಿ’ ಹಾಗೂ ಕನ್ನಡದ ‘ಲಾ’ ‘ಫ್ರೆಂಚ್ ಬಿರಿಯಾನಿ’, ತಮಿಳಿನ ‘ಪೊನ್ಮಗಲ್ ವಂಧಲ್ ‘ ಹಾಗೂ ತಮಿಳು, ತೆಲುಗಿನಲ್ಲಿ ಬಿಡುಗಡೆಗೆ ಸಿದ್ಧಗೊಂಡಿರುವ ‘ಪೆಂಗ್ವಿನ್’ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ನೇರ ಬಿಡುಗಡೆಯಾಗುತ್ತಿರುವ ಚಿತ್ರಗಳು.
ಮೇ 29ರಂದು ‘ಪೊನ್ಮಗಲ್ ವಂಧಲ್’, ಜೂನ್ 19ರಂದು ‘ಪೆಂಗ್ವಿನ್’, ಜೂನ್ 26ರಂದು ‘ಲಾ’ ಜೂ. 24ರಂದು ‘ಫ್ರೆಂಚ್ ಬಿರಿಯಾನಿ’ ಚಿತ್ರಗಳು ಬಿಡುಗಡೆಯಾಗಲಿವೆ. ಇನ್ನುಳಿದಂತೆ ‘ಸುಫಿಯಮ್ ಸುಜತಾಯಂ’ ಸಿನೆಮಾ ಬಿಡುಗಡೆ ದಿನಾಂಕ ಘೋಷಿಸಿಲ್ಲ. ಅಮಿತಾಬ್ ಬಚ್ಚನ್ ಅಭಿನಯದ ‘ಗುಲಾಬೊ ಸೀತಾಬೊ’ ಚಿತ್ರ ಜೂ. 12ರಂದು ಬಿಡುಗಡೆಯಾಗಲಿದೆ.
ಪಿವಿಆರ್ ಅಸಮಾಧಾನ: ಡಿಜಿಟಲ್ ಫ್ಲಾಟ್‌ಫಾರಂನಲ್ಲಿ ನೇರ ಚಿತ್ರಗಳು ಬಿಡುಗಡೆಯಾಗುತ್ತಿರುವುದರಿಂದ ಪಿವಿಆರ್ ಪಿಕ್ಚರ್ ಸಿಇಓ ಕಮಲ್ ಜಿಯಾಂಚಂದಾನಿ ಅವರು ಅಸಮಾಧಾನಗೊಂಡಿದ್ದಾರೆ.
ಪ್ರೇಕ್ಷಕರಿಗೆ ಸಿನಿಮಾ ನೋಡಲು ಚಿತ್ರಮಂದಿರಗಳು ಮಲ್ಟಿಫ್ಲೆಕ್ಸ್ ಸೂಕ್ತ. ಮನೋರಂಜನೆಗೆ ಅಲ್ಲಿ ಜಾಗವಿದೆ. ಲಾಕ್‌ಡೌನ್ ಸಮಸ್ಯೆಯಿಂದ ಚಿತ್ರಮಂದಿರಗಳು, ಮಲ್ಟಿಫ್ಲೆಕ್ಸ್ ಬಂದ್ ಆಗಿವೆ. ಅನಂತರ ಶುರುವಾಗಲಿವೆ. ಜನರು ಸಹ ಬರುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ ಅವರು.