ಬೆಂಗಳೂರು: ಅಮೆಜಾನ್ ಗ್ರಾಹಕರು ನಿರೀಕ್ಷಿಸುತ್ತಿದ್ದ ಪ್ರೈಮ್ ಡೇ ಮಾರಾಟ ಜುಲೈ 15 ಮತ್ತು 16ರಂದು ನಡೆಯಲಿದೆ. ಪ್ರೈಮ್ ಡೇ ಮಾರಾಟಕ್ಕೆ ತನ್ನದೇ ಆದ ಮಹತ್ವವಿದ್ದು ವರ್ಷಕ್ಕೊಮ್ಮೆ ಮಾತ್ರ ಪ್ರೈಮ್ ಡೇ ಮೇಳ ನಡೆಯಲಿದೆ.
ಇದರ ಪ್ರಯೋಜನ ಅಮೇಜಾನ್ ಪ್ರೈಮ್ ಸದಸ್ಯರಿಗೆ ಮಾತ್ರ ಲಭ್ಯವಿದ್ದು, ಈ ಮಾರಾಟ ಮೇಳದಲ್ಲಿ ಮೊಬೈಲ್ ಫೋನ್, ಲ್ಯಾಪ್ ಟಾಪ್ ಇತ್ಯಾದಿ ಗ್ಯಾಜೆಟ್ ಗಳು, ಗೃಹೋಪಯೋಗಿ ಉಪಕರಣಗಳು, ಫ್ಯಾಷನ್ ಉಡುಗೆ ತೊಡುಗೆಗಳು ಅತ್ಯಂತ ರಿಯಾಯಿತಿ ದರದಲ್ಲಿ ದೊರಕುತ್ತವೆ.
ಒನ್ ಪ್ಲಸ್, ಐಕ್ಯೂ , ರಿಯಲ್ ಮೀ ನಾರ್ಜೋ, ಸ್ಯಾಮ್ಸಂಗ್, ಮೊಟೊರೋಲ, ಬೋಟ್, ಸೋನಿ, ಆಲನ್ ಸೋಲ್ಲಿ, ಲೈಫ್ ಸ್ಟೈಲ್, ಟೈಟಾನ್, ಫಾಸಿಲ್, ಪ್ಯೂಮಾ, ಟಾಟಾ, ಡಾಬರ್ ನಂತಹ 400 ಕ್ಕೂ ಹೆಚ್ಚು ಭಾರತೀಯ ಮತ್ತು ಜಾಗತಿಕ ಬ್ರಾಂಡ್‌ಗಳು ತಮ್ಮಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಿವೆ. ಈ ಮಾರಾಟ ಮೇಳದಲ್ಲಿ ವಸ್ತುಗಳು ಎಂದಿಗಿಂತ ರಿಯಾಯಿತಿ ದೊರೆಯಲಿವೆ. ಅಲ್ಲದೇ ಎಸ್ ಬಿ ಐ ಮತ್ತು ಐಸಿಐಸಿಐ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಗಳಿಗೆ ಶೇ. 10ರಷ್ಟು ರಿಯಾಯಿತಿ ದೊರಕಲಿದೆ.
ಅಮೆಜಾನ್ ಪ್ರೈಮ್ ಸದಸ್ಯರಾಗಿಲ್ಲದವರು, ಈ ರಿಯಾಯಿತಿ ಮಾರಾಟದ ಪ್ರಯೋಜನ ಪಡೆಯಬೇಕಾದಲ್ಲಿ, ತಿಂಗಳಿಗೆ 299 ರೂ. ಅಥವಾ ವಾರ್ಷಿಕ 1499 ರೂ. ಪಾವತಿ ಮಾಡಿ ಪ್ರೈಮ್ ಸದಸ್ಯತ್ವ ಪಡೆದುಕೊಳ್ಳಬಹುದಾಗಿದೆ.
ಅಮೆಜಾನ್ ಪ್ರೈಮ್ ನ ಒಂದೇ ಸದಸ್ಯತ್ವದಲ್ಲಿ ಒಂದು ದಿನದ ಡೆಲಿವರಿ ಸೌಲಭ್ಯ, ಶೂನ್ಯ ಡೆಲಿವರಿ ಶುಲ್ಕ, ಪ್ರೈಮ್ ವಿಡಿಯೋ ಮೂಲಕ ಓಟಿಟಿ ಮನರಂಜನೆ ಪಡೆಯಬಹುದಾಗಿದೆ.
ಇದನ್ನೂ ಓದಿ: Btown: ಅಂದು ಹಣಕ್ಕಾಗಿ ಬಟರ್ ಚಿಕನ್ ಮಾರಾಟ ಮಾಡುತ್ತಿದ್ದವ ಇಂದು ಬಾಲಿವುಡ್‌ನ ಸ್ಟಾರ್ ನಟ