Advertisement

ಕಾಡುವ ಕಾಡು!

10:18 AM Aug 30, 2019 | mahesh |

“ಅಮೇಜಾನ್‌’ ಎಂದ ಕೂಡಲೆ ಹಚ್ಚಹಸಿರು ಕಾಡು, ಅಲ್ಲಿನ ನಿಗೂಢ ಕಾಡುಮನುಷ್ಯರು ನಮಗೆ ನೆನಪಾಗುತ್ತಾರೆ. ಅಲ್ಲಿನ ಜೀವ ವೈವಿಧ್ಯವೂ ಅಗಾಧವಾದುದು. ಜಗತ್ತಿನಲ್ಲಿ ಎಲ್ಲೂ ಕಾಣದ ಸಸ್ಯ ಮತ್ತು ವನ್ಯಜೀವಿ ಪ್ರಭೇದಗಳನ್ನು ಅಲ್ಲಿ ಕಾಣಬಹುದು. ಕೆಲ ಸಮಯದಿಂದ, ಕಾಡ್ಗಿಚ್ಚಿನಿಂದ ಹೊತ್ತಿ ಉರಿಯುತ್ತಿರುವ ಈ ಕಾಡು ಅನೇಕ ಕಾರಣಗಳಿಂದ ಬಹಳ ವಿಶೇಷ ಎನ್ನಿಸಿಕೊಳ್ಳುತ್ತದೆ.

Advertisement

ಅಮೇಜಾನ್‌ ವಿಶ್ವದ ಅತಿದೊಡ್ಡ ಉಷ್ಣವಲಯದ ಮಳೆಕಾಡಾಗಿದ್ದು, ಇದು ಐದೂವರೆ ದಶಲಕ್ಷ ಚ.ಕಿಮೀ ಇದೆ. ಇದು ಹೆಚ್ಚು ಕಮ್ಮಿ ಒಂಭತ್ತು ರಾಷ್ಟ್ರಗಳ ಭೂಪ್ರದೇಶಗಳನ್ನು ಒಳಗೊಂಡಿದೆ. ಅರ್ಧದಷ್ಟು ಭಾಗ ಬ್ರೆಜಿಲ್‌ನಲ್ಲಿದೆ. ಇದು ಪೆರು, ವೆನಿಜುವೆಲಾ, ಈಕ್ವೆಡಾರ್‌, ಕೊಲಂಬಿಯಾ, ಗಯಾನಾ, ಬೊಲಿವಿಯಾ, ಸುರಿನಾಮ್‌ ಮತ್ತು ಫ್ರೆಂಚ್‌ ಗಯಾನಾ ಸೇರಿದಂತೆ ದಕ್ಷಿಣ ಅಮೆರಿಕಾದಲ್ಲೂ ಹರಡಿದೆ.

ಪ್ರಾಣಿ ಪ್ರಭೇದ ಹಾಗೂ ಸಸ್ಯ ರಾಶಿ
ನಮಗೆ ಪರಿಚಿತವಿರುವ ಪ್ರಾಣಿ ಪ್ರಭೇದಗಳ ಪೈಕಿ ಶೇ.10ರಷ್ಟು ಅಮೇಜಾನ್‌ ಮಳೆಕಾಡಿನಲ್ಲಿ ವಾಸಿಸುತ್ತವೆ. ವಿಶ್ವದ ಶೇ.20ರಷ್ಟು ಪಕ್ಷಿ ಪ್ರಭೇದಗಳು ಅಮೇಜಾನ್‌ ಮಳೆಕಾಡಿನಲ್ಲಿ ವಾಸಿಸುತ್ತವೆ. ಅಮೇಜಾನ್‌ ಮಳೆಕಾಡು ಸುಮಾರು 2.5 ದಶಲಕ್ಷ ಕೀಟ ಪ್ರಭೇದಗಳು, ಹತ್ತು ಸಾವಿರಕ್ಕಿಂತಲೂ ಹೆಚ್ಚು ಸಸ್ಯಗಳು ಹಾಗೂ 2,000 ಪಕ್ಷಿಗಳು ಮತ್ತು ಸಸ್ತನಿಗಳಿಗೆ ಅಮೇಜಾನ್‌ ಆವಾಸಸ್ಥಾನ. ಇದುವರೆಗೂ, ಈ ಪ್ರದೇಶದಲ್ಲಿ ಕನಿಷ್ಠ 40,000 ಸಸ್ಯಪ್ರಭೇದಗಳು, 3,000 ಮೀನುಗಳು, 1,294 ಹಕ್ಕಿಗಳು, 427 ಸಸ್ತನಿಗಳು, 428 ಉಭಯಚರಿಗಳು ಹಾಗೂ 378 ಸರಿಸೃಪಗಳನ್ನು ವೈಜ್ಞಾನಿಕವಾಗಿ ವಿಂಗಡಿಸಲಾಗಿದೆ. ವಿಶ್ವದ ಪ್ರತಿ ಐದು ಹಕ್ಕಿ ಪ್ರಭೇದಗಳಲ್ಲಿ ಒಂದು ಅಮೇಜಾನ್‌ ಮಳೆಕಾಡುಗಳಲ್ಲಿ ವಾಸಿಸುತ್ತದೆ.

ಭಯಾನಕ ಜೀವಿಗಳು
ಅತಿ ದೊಡ್ಡ ಮಾಂಸಾಹಾರಿ ಪ್ರಾಣಿಗಳಲ್ಲಿ ಕಪ್ಪು ಕೇಮನ್‌ ಮೊಸಳೆ, ಜಾಗÌರ್‌ ಚಿರತೆ, ಕೂಗರ್‌ (ದೊಡ್ಡ ಗಾತ್ರದ ಕರಿ ಬೆಕ್ಕಿನಂಥ ಪ್ರಾಣಿ) ಹಾಗೂ ಅನಕೊಂಡಾ ಸೇರಿವೆ. ಅಮೆಜಾನ್‌ ನದಿಯಲ್ಲಿರುವ ಪಿರಾನ್ಹಾ ಮೀನುಗಳು ಮನುಷ್ಯರನ್ನು ಕಚ್ಚಿ ಗಾಯಗೊಳಿಸುತ್ತವೆ ಎನ್ನಲಾಗಿದೆ. ವಿಷ ಹಾರಿಸುವ ಕಪ್ಪೆಗಳ ವಿಭಿನ್ನ ಪ್ರಭೇದಗಳು, ತಮ್ಮ ಚರ್ಮಗಳ ಮೂಲಕ ಲಿಪೊಫಿಲಿಕ್‌ ವಿಷವನ್ನು ಸೂಸುತ್ತವೆ. ಅಮೆಜಾನ್‌ ಮಳೆಕಾಡಿನಲ್ಲಿ ವಾಸಿಸುವ ರಕ್ತಹೀರುವ ಬಾವಲಿಗಳು ರೇಬೀಸ್‌ ವೈರಸYಳನ್ನು ಹರಡಬಹುದು. ಮಲೇರಿಯಾ ಹಾಗೂ ಡೆಂಗ್ಯೂ ಜ್ವರವೂ ಸಹ ಅಮೆಜಾನ್‌ ಪ್ರದೇಶದಲ್ಲಿ ಹರಡುವ ಸಾಧ್ಯತೆ ಹೆಚ್ಚು.

ಮಳೆ ಕಾಡನ್ನೂ ಬಿಡದ ಬರಗಾಲ
ಅಮೆಜಾನ್‌ ಮಳೆಕಾಡಿನ ರಕ್ಷಣೆಯೇ ಒಂದು ಸಮಸ್ಯೆ. ಇದರ ಜೊತೆಗೆ 2005 ಮತ್ತು 2010 ರಲ್ಲಿ ಅಮೆಜಾನ್‌ ಮಳೆಕಾಡು ತೀವ್ರ ಬರಗಾಲವನ್ನು ಅನುಭವಿಸಿತು. ಆಗ ಬರಪೀಡಿತ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದ ಸಸ್ಯವರ್ಗಗಳು ನಶಿಸಿಹೋದವು.

Advertisement

ಅಲ್ಲಿವೆ ಮಾಂಸಾಹಾರಿ ಸಸ್ಯಗಳು
ಅಮೆಜಾನ್‌ ಮಳೆಕಾಡು ಸಜೀವ ಸಸ್ಯ , ಪ್ರಾಣಿವರ್ಗ ಪ್ರಭೇದಗಳ ದೊಡ್ಡ ಸಮೂಹವನ್ನೇ ಒಳಗೊಂಡಿದೆ. ಮಾಂಸಾಹಾರಿ ಸಸ್ಯಗಳು ಇಲಿ, ಕಪ್ಪೆ ಕೀಟಗಳನ್ನು ತಿನ್ನುತ್ತವೆ. ವೀನಸ್‌ ಫ್ಲೆ ಟ್ರಾಪ್‌, ಪಿಕ್ಚರ್ಸ್‌ ಪ್ಲಾಂಟ್ಸ್‌, ಬ್ಲಾರ್ಡ್‌ ವರ್ಟ್‌, ಸನ್‌ ಡ್ನೂ, ಜೆನ್ಲಿಸಿಯಾ ಮುಂತಾದವು ಭಕ್ಷಕ ಸಜೀವ ಸಸ್ಯವರ್ಗಕ್ಕೆ ಸೇರಿವೆ.

– ಅರ್ಚನಾ ಎಚ್‌.

Advertisement

Udayavani is now on Telegram. Click here to join our channel and stay updated with the latest news.

Next