Advertisement

ಅಮೆಜಾನ್‌: ಹಿಂದೂ ದೇವರಿಗೆ ಅಪಮಾನ

09:05 AM May 18, 2019 | mahesh |

ವಾಷಿಂಗ್ಟನ್‌: 2017ರಲ್ಲಿ ಹಿಂದೂ ದೇವತೆಗಳ ಫೋಟೋಗಳನ್ನು ಮ್ಯಾಟ್‌ಗಳ ಮೇಲೆ, ಚಪ್ಪಲಿಗಳ ಮೇಲೆ ಹಾಕಿ ಭಾರತ ಸರಕಾರದಿಂದ ಛೀಮಾರಿಗೊಳಗಾಗಿದ್ದ ಅಮೆರಿಕದ ದೈತ್ಯ ಇ-ಮಾರಾಟ ಜಾಲತಾಣ ಅಮೆಜಾನ್‌, ಈ ಬಾರಿಯೂ ಉದ್ಧಟತನ ಪುನರಾವರ್ತಿಸಿದೆ.

Advertisement

ಹಿಂದೂ ದೇವರುಗಳ ಫೋಟೋಗಳು ಮುದ್ರಿತಗೊಂಡಿರುವ ಟಾಯ್ಲೆಟ್‌ ಮುಚ್ಚಳಗಳು ಹಾಗೂ ಇತರ ಸಾಮಗ್ರಿಗಳನ್ನು ತನ್ನ ಅಮೆರಿಕದ ಆವೃತ್ತಿಯ ಜಾಲತಾಣದಲ್ಲಿ ಕಂಪನಿ ಮಾರಾಟಕ್ಕಿಟ್ಟಿದ್ದು, ಇದು ವಿಶ್ವದ ಎಲ್ಲಾ ಹಿಂದೂಗಳನ್ನು ಕೆರಳಿಸಿದೆ.

ಕಂಪನಿ ವಿರುದ್ಧ ಟ್ವಿಟರ್‌ನಲ್ಲಿ ಮುಗಿಬಿದ್ದಿರುವ ಸಾವಿರಾರು ಮಂದಿ, ತಕ್ಷಣವೇ ಇವುಗಳ ಮಾರಾಟ ನಿಲ್ಲಿಸದಿದ್ದರೆ ಅಮೆಜಾನ್‌ನನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next