Advertisement

ಅಮೇಜಾನ್‍ ನಿಂದ ಬೇಸಿಗೆ ಅಂಗವಾಗಿ ‘ಹೋಂ ಶಾಪಿಂಗ್‍ ಸ್ಪ್ರೀ’; ವಿಶೇಷ ಆಫರ್ ಗಳು ಲಭ್ಯ

03:56 PM Apr 07, 2022 | Team Udayavani |

ಬೆಂಗಳೂರು: ಅಮೆಜಾನ್‍. ಇನ್‍ ನಲ್ಲಿ ಬೇಸಿಗೆ ಅಂಗವಾಗಿ ಇಂದಿನಿಂದ ಏ.10ರವರೆಗೆ ಹೋಮ್‍ ಶಾಪಿಂಗ್‍ ಸ್ಪ್ರೀ ವಿಶೇಷ ಆಫರ್‍ ಗಳು ಗ್ರಾಹಕರಿಗೆ ಲಭ್ಯವಿದೆ.

Advertisement

ಇದರಲ್ಲಿ ಗೃಹೋಪಯೋಗಿ ವಸ್ತುಗಳು, ಅಡುಗೆಮನೆ ಸಲಕರಣೆಗಳು, ಪೀಠೋಪಕರಣಗಳು, ಆಟಿಕೆಗಳು ಮತ್ತಿತರ ಉಪಕರಣಗಳ ಮೇಲೆ ಅತ್ಯಾಕರ್ಷಕ ಕೊಡುಗೆಗಳು ಮತ್ತು ಡೀಲ್‌ಗಳು ಲಭ್ಯವಿವೆ. ಗ್ರಾಹಕರು ತಮ್ಮ ಮನೆಯಿಂದಲೇ ಬೇಸಿಗೆಯ ಅಗತ್ಯ ವಸ್ತುಗಳ ಖರೀದಿ ಮಾಡಬಹುದು ಮತ್ತು ಕ್ಯಾಶ್‌ಬ್ಯಾಕ್, ಕೈಗೆಟುಕುವ ಬೆಲೆಯಲ್ಲಿ ಬಡ್ಡಿ ರಹಿತ ಇಎಂಐ, ವಿನಿಮಯ ಕೊಡುಗೆಗಳು ಮತ್ತು ಮೊದಲ ಆರ್ಡರ್ ಮೇಲೆ ಭಾರತದಲ್ಲಿ ಎಲ್ಲಿಯಾದರೂ ಉಚಿತ ಡೆಲಿವರಿ ಮೂಲಕ ಉತ್ತಮ ಡೀಲ್‌ಗಳನ್ನು ಪಡೆಯಬಹುದು.

ಇದನ್ನೂ ಓದಿ:ವೊಡಾಫೋನ್‍ ಗ್ರಾಹಕರಿಗೆ ಉಚಿತ ಜ್ಯೋತಿಷ್ಯ ಸಮಾಲೋಚನೆ!

“ಹೋಮ್ ಶಾಪಿಂಗ್ ಸ್ಪ್ರೀ” ಸಮಯದಲ್ಲಿ, ಗ್ರಾಹಕರು ಸ್ಯಾಮ್‌ಸಂಗ್, ಎಲ್‌ಜಿ, ವಿಪ್ರೊ, ಹೋಮ್ ಸೆಂಟರ್, ಡ್ಯೂರೋಫ್ಲೆಕ್ಸ್, ದಿ ಸ್ಲೀಪ್ ಕಂಪನಿ, ಬಾಷ್‍, ಉಷಾ, ಪಿಜನ್ ಮತ್ತು ಇನ್ನೂ ಹೆಚ್ಚಿನ ಬ್ರಾಂಡ್‌ಗಳಿಂದ ಹೆಚ್ಚಿನ ರಿಯಾಯಿತಿ ಪಡೆಯಬಹುದು. ಸಿಟಿ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಕನಿಷ್ಟ ರೂ. 5000 ವಹಿವಾಟಿನ ಮೇಲೆ ಗ್ರಾಹಕರು ಹೆಚ್ಚುವರಿ 10% ತ್ವರಿತ ರಿಯಾಯಿತಿಯನ್ನು ಪಡೆಯಬಹುದು.

ಹೋಮ್ ಶಾಪಿಂಗ್ ಸ್ಪ್ರೀ ಆಫರ್‌ಗಳು ಮತ್ತು ಡೀಲ್‌ಗಳು ಏಪ್ರಿಲ್ 10ರವರೆಗೆ ಲಭ್ಯವಿರುತ್ತವೆ ಎಂದು ಕಂಪೆನಿಯ ಪ್ರಕಟಣೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next