ಬೆಂಗಳೂರು: ಭಾರತದಾದ್ಯಂತ 60 ಕ್ಕೂ ಹೆಚ್ಚು ನಗರಗಳಿಗೆ ಫುಲ್ ಬಾಸ್ಕೆಟ್ ದಿನಸಿ ಸೇವೆಯನ್ನು ಅಮೆಜಾನ್ ಫ್ರೆಶ್ ವಿಸ್ತರಿಸಿರುವುದಾಗಿ ಅಮೆಜಾನ್ ಇಂಡಿಯಾ ಇಂದು ಪ್ರಕಟಿಸಿದೆ.
ಅಮೆಜಾನ್ ಫ್ರೆಶ್, ಆಪ್ ಇನ್ ಆಪ್ ಅನುಭವವು ಹಣ್ಣುಗಳು, ತರಕಾರಿಗಳು ಶೈತ್ಯೀಕರಿಸಿದ ಉತ್ಪನ್ನಗಳು, ಬ್ಯೂಟಿ, ಬೇಬಿ, ವೈಯಕ್ತಿಕ ಪ್ರಸಾದನ ಮತ್ತು ಸಾಕು ಪ್ರಾಣಿ ಉತ್ಪನ್ನಗಳು ಸೇರಿದಂತೆ ದಿನಸಿ ಉತ್ಪನ್ನಗಳ ವಿಶಾಲ ಶ್ರೇಣಿಯನ್ನು ಒದಗಿಸಲಿದೆ. ಈ ನಗರಗಳ ಗ್ರಾಹಕರು ಆಕರ್ಷಕ ವಾರಾಂತ್ಯದ ಮಾರಾಟದ ಮೂಲಕ ಎಲ್ಲ ದಿನಸಿ ಅಗತ್ಯಗಳ ಮೇಲೆ ವ್ಯಾಲ್ಯೂ ಆಫರ್‌ಗಳನ್ನು ಆನಂದಿಸಬಹುದಾಗಿದೆ. ಪ್ರತಿ ತಿಂಗಳ 1 ರಿಂದ 7 ರ ವರೆಗೆ ಸೂಪರ್ ವ್ಯಾಲ್ಯೂ ಡೇಸ್ ನಡೆಯಲಿದ್ದು, ತಮ್ಮ ಆದ್ಯತೆಯ ಸಮಯದಲ್ಲಿ ಡೆಲಿವರಿ ಪಡೆಯಬಹುದು.
ಅಮೆಜಾನ್ ಫ್ರೆಶ್‌ನ ಮುಖ್ಯಸ್ಥ ಶ್ರೀಕಾಂತ್ ಶ್ರೀರಾಮ್ ಮಾತನಾಡಿ “ ಈ ವಿಸ್ತರಣೆಯೊಂದಿಗೆ, ಭಾರತದಾದ್ಯಂತ ಇರುವ ಗ್ರಾಹಕರು ಉತ್ತಮ ಗುಣಮಟ್ಟದ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಖರೀದಿ ಮಾಡಬಹುದು ಮತ್ತು ತಮ್ಮ ಮನೆ ಬಾಗಿಲಿನಲ್ಲೇ ಡೆಲಿವರಿ ಪಡೆಯಬಹುದು. ಮಾವಿನ ಹಣ್ಣುಗಳು ಮತ್ತು ಬೇಸಿಗೆ ಕಾಲದ ಅಗತ್ಯ ಉತ್ಪನ್ನಗಳಿಗೆ ಈ ಋತುವಿನಲ್ಲಿ ನಾವು ಭಾರಿ ಬೇಡಿಕೆಯನ್ನು ಸ್ವೀಕರಿಸಿದ್ದೇವೆ ಮತ್ತು ಇಡೀ ದೇಶದಲ್ಲಿ ಗ್ರಾಹಕರಿಗೆ ಉತ್ತಮ ಆನ್‌ಲೈನ್ ಶಾಪಿಂಗ್ ಅನುಭವವನ್ನು ಒದಗಿಸಲು ನಾವು ಹೀಗೆಯೇ ಗಮನ ಕೇಂದ್ರೀಕರಿಸಿರುತ್ತೇವೆ ಎಂದರು.
Amazon.in ಉಚಿತ ಶಿಪ್ಪಿಂಗ್ ಸೌಲಭ್ಯವನ್ನು ಒದಗಿಸುತ್ತದೆ. ಅಂದರೆ, ರೂ. 249 ಕ್ಕಿಂತ ಹೆಚ್ಚಿನ ಆರ್ಡರ್‌ಗಳಿಗೆ ಉಚಿತ ಡೆಲಿವರಿ ನೀಡುತ್ತದೆ. ಗ್ರಾಹಕರು ಸೂಪರ್ ಸೇವರ್ ಡೀಲ್‌ಗಳ ಪ್ರಯೋಜನವನ್ನೂ ಪಡೆಯಬಹುದಾಗಿದೆ. ಇಡೀ ತಿಂಗಳಿಗೆ ಸಂಗ್ರಹ ಮಾಡಿಕೊಳ್ಳಲು ಗ್ರಾಹಕರು ಯೋಜಿಸಿದಾಗ ಅವರಿಗೆ ಹೆಚ್ಚು ಉಳಿತಾಯವಾಗುತ್ತದೆ. ಅಪಾರ ಉಳಿತಾಯಗಳ ಜೊತೆಗೆ, ಒಂದೇ ಆನ್‌ಲೈನ್ ಡೆಸ್ಟಿನೇಶನ್‌ನಲ್ಲಿ ವಿವಿಧ ಉತ್ಪನ್ನಗಳ ಆಯ್ಕೆ, ತ್ವರಿತ ಮತ್ತು ಅನುಕೂಲಕರ ಡೆಲಿವರಿ ಆಯ್ಕೆಗಳನ್ನು ಅಮೆಜಾನ್ ಫ್ರೆಶ್ ಹೊಂದಿದ್ದು, ಸರಳೀಕರಿಸಿದ ಶಾಪಿಂಗ್ ಅನುಭವವನ್ನು ನೀಡುತ್ತದೆ. ಅಲ್ಲದೆ, ದಿನಸಿಗೆ ನಿಗದಿತ ಆಪ್ ಇನ್ ಆಪ್ ಮತ್ತು ವೈಯಕ್ತಿಕಗೊಳಿಸಿದ ವಿಜೆಟ್‌ಗಳಂತಹ ಅನುಕೂಲಕರ ವೈಶಿಷ್ಟ್ಯಗಳು, ಮರಳಿ ಖರೀದಿ ಆಯ್ಕೆ ಮತ್ತು ಪದೇ ಪದೇ ಖರೀದಿ ಮಾಡಿದ ಐಟಂಗಳು ಚೆಕೌಟ್ ಸಮಯದಲ್ಲಿ ಮರೆತುಹೋಗುವುದನ್ನು ತಪ್ಪಿಸಲು ರಿಮೈಂಡರ್‌ಗಳ ಸೌಲಭ್ಯವೂ ಇದೆ.