ಅಮೆಜಾನ್ ಫ್ಯಾಷನ್ ಜೂನ್ 1 ರಿಂದ ಜೂನ್ 6 ರವರೆಗೆ ವಾರ್ಡ್ರೋಬ್ ರಿಫ್ರೆಶ್ ಸೇಲ್ ಆರಂಭವಾಗಿದ್ದು, ಬ್ರಾಂಡೆಡ್ ಉಡುಪುಗಳ ಮೇಲೆ ಶೇ.50 ರಿಂದ 80 ರವರೆಗೆ ಬಹುದೊಡ್ಡ ರಿಯಾಯಿತಿ ಘೋಷಿಸಿದೆ.
ಅಮೆಜಾನ್ ಫ್ಯಾಷನ್ 12 ನೇ ಆವೃತ್ತಿ ಇದಾಗಿದ್ದು, ಬಹುದೊಡ್ಡ ರಿಯಾಯಿತಿಗಳನ್ನು ನೀಡುತ್ತಿದೆ. ಬೇಸಿಗೆ ಮುಗಿದು ಮಾನ್ಸೂನ್ ಶುರುವಾಗುತ್ತಿದ್ದು, ಸಾಕಷ್ಟು ಜನರು ತಮ್ಮ ಔಟ್ಫಿಟ್ ಅನ್ನು ಬದಲಿಸಲು ಬಯಸುತ್ತಾರೆ. ಮಾನ್ಸೂನ್ಗೆ ಬೇಕಾದ ರೀತಿಯ ಫ್ಯಾಷನ್ ಅನ್ನು ಧರಿಸಲು ಇಚ್ಚಿಸುತ್ತಾರೆ. ಅಂಥವರಿಗಾಗಿಯೇ ಅಮೆಜಾನ್ ಫ್ಯಾಷನ್ ಇದೀಗ ವಾರ್ಡ್ರೋಬ್ ರಿಫ್ರೆಶ್ ಸೇಲ್ ಅನ್ನು ನೀಡಿದೆ.
ಈ ಕೊಡುಗೆಯಲ್ಲಿ ಎಲ್ಲಾ ಬಗೆಯ ಉಡುಪುಗಳು, ಶೂಗಳು, ಕೈಚೀಲಗಳು, ಕೈಗಡಿಯಾರ, ಆಭರಣಗಳು, ಮಕ್ಕಳ ಉಡುಪು, ಸೌಂದರ್ಯವರ್ಧಕಗಳು ಸೇರಿದಂತೆ ಫ್ಯಾಷನ್ಗೆ ಸಂಬಂಧಿಸಿದ ಎಲ್ಲಾ ಬಗೆಯ ವಸ್ತುಗಳು ಲಭ್ಯವಿರಲಿದೆ.
ವ್ಯಾನ್ ಹ್ಯೂಸೆನ್, ಬಿಬಾ, ಲೆವಿಸ್, ಯು.ಎಸ್. ಪೊಲೊ ಅಸ್ಸೆನ್., ಪೂಮಾ, ಅಡಿಡಾಸ್, ದಿ ಬಾಡಿ ಶಾಪ್, ಲ್ಯಾಕ್ಮೆ, ಲೋರಿಯಲ್ ಪ್ಯಾರಿಸ್, ಫಾರೆಸ್ಟ್ ಎಸೆನ್ಷಿಯಲ್ಸ್, ಅಮೇರಿಕನ್ ಟೂರಿಸ್ಟರ್ ಸೇರಿದಂತೆ 1000 ಕ್ಕೂ ಅಧಿಕ ಟಾಪ್ ಬ್ರಾಂಡ್ಗಳ ಮೇಲೆ ರಿಯಾಯಿತಿ ಇರಲಿದೆ. ಈ ಬ್ರಾಂಡ್ಗಳ ಮೇಲೆ 2 ಸಾವಿರಕ್ಕೂ ಅಧಿಕ ಖರೀದಿಸುವ ಗ್ರಾಹಕರಿಗೆ ಶೇ.20 ರಷ್ಟು ವಿಶೇಷ ರಿಯಾಯಿತಿಯೂ ಸಿಗಲಿದೆ. ಈ ಸೇಲ್ನಲ್ಲಿ 4 ಲಕ್ಷಕ್ಕೂ ಅಧಿಕ ಗ್ರಾಹಕರು ಇದರ ಪ್ರಯೋಜನ ಪಡೆಯುವ ನಿರೀಕ್ಷೆ ಇದೆ ಎಂದು ಕಂಪೆನಿ ತಿಳಿಸಿದೆ.