Advertisement

ಅಮೆಜಾನ್‌ ಕಂಪನಿ ವಸ್ತುಗಳ ಕದ್ದಿದ್ದವರ ಬಂಧನ

01:50 PM Nov 21, 2021 | Team Udayavani |

ಕೋಲಾರ: ಅಮೆಜಾನ್‌ ಕಂಪನಿಗೆ ಸೇರಿದ ವಸ್ತುಗಳು, ಲಾರಿ ಕಳವು ಪ್ರಕರಣಕ್ಕೆ ಸಂಬಂಧಿ ಸಿದಂತೆ ನಾಲ್ವರು ಆರೋಪಿಗಳು, 1.52 ಕೋಟಿ ರೂ. ಮೌಲ್ಯದ ವಸ್ತುಗಳು, ಕ್ಯಾಂಟರ್‌ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಲಾರಿ ಚಾಲಕ ಅಸ್ಸಾಂ ರಾಜ್ಯದ ಬದ್ರುಲ್‌ ಹಕ್‌, ಅಬ್ದುಲ್‌ ಹುಸೇನ್‌, ಅಭಿನಾಥ್‌, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕು ಎನ್‌.ಹೊಸಹಳ್ಳಿ ಗ್ರಾಮದ ಪ್ರದೀಪ್‌ಕುಮಾರ್‌ ಬಂಧಿ ತರು.

Advertisement

ಪ್ರಕರಣದ ವಿವರ: ಅಮೆಜಾನ್‌ ಕಂಪನಿಗೆ ಬಿಜಿನೆಸ್‌ ಪಾರ್ಟನರ್‌ ಆಗಿ ಕೆಲಸ ಮಾಡುತ್ತಿರುವ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕು ಚೇಳೂರಿನ ನಿಖೋ ಲಾಜಿಸ್ಟಿಕ್ಸ್‌ ಟ್ರಾವೆಲ್ಸ್‌ ಮತ್ತು ಟ್ರಾನ್ಸ್‌ಪೊàರ್ಟ್‌ಗೆ ಸೇರಿದ ಲಾರಿಯು ಅ.30ರಂದು ಬೆಳಗಿನ ಜಾವ 3 ಗಂಟೆಗೆ ದೇವನಹಳ್ಳಿ ಬಳಿಯಿಂದ ಬೆಂಗಳೂರಿನ ಬಂಡೆ ಕೊಡಿಗೇಹಳ್ಳಿಯ ಬಳಿಗೆ ಹೊರಟಿತ್ತು.

ಗೃಹೋಪಯೋಗಿ, ಎಲೆಕ್ಟ್ರಾನಿಕ್‌, ಮೊಬೈಲ್‌ ಫೋನ್‌ಗಳು, ಉಡುಪುಗಳು, ದಿನ ಬಳಕೆ ವಸ್ತುಗಳು, ಕಾಸ್ಮೆಟಿಕ್ಸ್‌ ಮುಂತಾದ 300 ವಿವಿಧ ಬಗೆಯ 1,64,56,711 ರೂ. ಮೌಲ್ಯದ ಒಟ್ಟು 4027 ವಸ್ತುಗಳನ್ನು ಲಾರಿ ಚಾಲಕ ಬದ್ರುಲ್‌ ಹಕ್‌ ತನ್ನ ಸಹಚರರೊಂದಿಗೆ ಕಳವು ಮಾಡಿ ಪರಾರಿಯಾಗಿದ್ದನು. ಜಿಪಿಎಸ್‌ ಕಿತ್ತು ಹಾಕಿದ್ರು: ಲಾರಿ ರಾಷ್ಟ್ರೀಯ ಹೆದ್ದಾರಿ 75ರ ಕೋಲಾರ ತಾಲೂಕಿನ ಚುಂಚದೇನಹಳ್ಳಿ ಗೇಟ್‌ ಬಳಿ ನಿಲ್ಲಿಸಲಾಗಿತ್ತು. ಅದರಲ್ಲಿ ಇದ್ದ ಜಿಪಿಎಸ್‌ ಅನ್ನು ಹೊಸಕೋಟೆ ಬಳಿ ಕಿತ್ತು ಬಿಸಾಡಲಾಗಿತ್ತು. ಈ ಬಗ್ಗೆ ಚೇಳೂರಿನ ನಿಖೋ ಲಾಜಿಸ್ಟಿಕ್ಸ್‌ ಟ್ರಾವೆಲ್ಸ್‌ ಮತ್ತು ಟ್ರಾನ್ಸ್‌ ಪೋರ್ಟ್‌ನ ಮ್ಯಾನೇಜರ್‌ ಕೋಲಾರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದನ್ನೂ ಓದಿ;- ಎಟಿಎಂ ದರೋಡೆ ಶಂಕೆ: ಪೊಲೀಸ್ ಅಧಿಕಾರಿಗಳಿಂದ ಪರಿಶೀಲನೆ

ಉಳಿದವರಿಗಾಗಿ ಶೋಧ: ಎಸ್ಪಿ ಡೆಕ್ಕಾ ಕಿಶೋರ್‌ ಬಾಬು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ಅವರಿಂದ 1.52 ಕೋಟಿ ರೂ. ಮೌಲ್ಯದ ವಸ್ತುಗಳು, ಕೃತ್ಯಕ್ಕೆ ಬಳಸಿದ್ದ ಕ್ಯಾಂಟರ್‌ ಜಪ್ತಿ ಮಾಡಿಕೊಂಡಿದ್ದಾರೆ. ಉಳಿದ ಆರೋಪಿಗಳು, ಮಾಲಿಗಾಗಿ ಪತ್ತೆ ಕಾರ್ಯ ಮುಂದುವರಿಸಿದ್ದಾರೆ.

Advertisement

ಕಾರ್ಯಾಚರಣೆಯಲ್ಲಿ ಕೋಲಾರ ಗ್ರಾಮಾಂತರ ವೃತ್ತ ನಿರೀಕ್ಷಕ ಎಲ್‌.ಆಂಜಪ್ಪ, ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಪ್ರಕಾಶ್‌, ವೇಮಗಲ್‌ ವೃತ್ತ ನಿರೀಕ್ಷಕ ಶಿವರಾಜ್‌, ಪಿಎಸ್‌ಐಗಳಾದ ವಿ.ಕಿರಣ್‌, ನಾಗರತ್ನ, ಎಎಸ್‌ಐಗಳಾದ ಸೈಯದ್‌ ಖಾಸೀಂ, ಮಂಜುನಾಥ್‌, ಸಿಬ್ಬಂದಿ ಆನಂದ್‌, ಎಚ್‌. ಎಂ.ಸುರೇಶ್‌, ರಮೇಶ್‌ಬಾಬು, ಶಿವಾನಂದ, ಸೋಮಶೇಖರ್‌, ರವಿಕುಮಾರ್‌, ಶಂಕರ್‌ಕಾಂತ್‌, ನಾಗರಾಜ್‌ ಸುಧಾಕರ್‌, ಶ್ರೀನಿವಾಸ್‌, ಬಾಲಾಜಿ, ಪ್ರಭು, ಮಹೇಶ್‌, ಅಂಬರೀಶ್‌, ಮರೇಗೌಡ, ನಾಗೇಶ್‌, ಮೂರ್ತಿ, ಶ್ರೀರಾಮಪ್ಪ, ಮಂಜುನಾಥ್‌, ಎಸ್ಪಿ ಕಚೇರಿಯ ಕಂಪ್ಯೂಟರ್‌ ವಿಭಾಗದ ನಾಗರಾಜ್‌, ಭಾಸ್ಕರ್‌ ಭಾಗವಹಿಸಿದ್ದು, ಕೇಂದ್ರ ವಲಯದ ಮಹಾ ನಿರೀಕ್ಷಕರು, ಎಸ್ಪಿ ಅಭಿನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next